ಚಾಮುಂಡಿ ಬೆಟ್ಟಡಲ್ಲಿ ಆಷಾಢ ಪೂಜೆ: ಪ್ರಸಾದ ವಿತರಿಸಲು ಅನುಮತಿ ನಿಯಮ ಹೇರಿದ ಮೈಸೂರು ಜಿಲ್ಲಾಡಳಿತ

ಚಾಮರಾಜನಗರ ಜಿಲ್ಲೆಯ ಸುಳವಾಡಿ ದೇವಸ್ಥಾನದ ಪ್ರಸಾದ ಸೇವಿಸಿ 17 ಭಕ್ತರು ಮೃತಪಟ್ಟ ಘಟನೆ ನಂತರ ಮೈಸೂರು ....

Published: 03rd July 2019 12:00 PM  |   Last Updated: 03rd July 2019 11:36 AM   |  A+A-


The Chamundeshwari temple atop Chamundi Hills in Mysuru

ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನ

Posted By : SUD SUD
Source : The New Indian Express
ಮೈಸೂರು: ಚಾಮರಾಜನಗರ ಜಿಲ್ಲೆಯ ಸುಳವಾಡಿ ದೇವಸ್ಥಾನದ ಪ್ರಸಾದ ಸೇವಿಸಿ 17 ಭಕ್ತರು ಮೃತಪಟ್ಟ ಘಟನೆ ನಂತರ ಮೈಸೂರು ಜಿಲ್ಲಾಡಳಿತ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಚಾಮುಂಡಿ ಬೆಟ್ಟದಲ್ಲಿ ಇದೇ ಶುಕ್ರವಾರ ಆಷಾಢ ಮಾಸದ ಮೊದಲ ಪೂಜೆ ನಡೆಯಲಿದ್ದು  ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಹಂಚುವ ಪ್ರಸಾದದ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಿದೆ.

ಚಾಮುಂಡಿ ಬೆಟ್ಟದ ನಿಗದಿತ ಪ್ರದೇಶಗಳಲ್ಲಿ ಪ್ರಸಾದ ವಿತರಿಸಲು ಬಳಸುವ ವಾಹನಗಳು ಕಡ್ಡಾಯವಾಗಿ ಪಾಸ್ ಪಡೆದಿರಬೇಕು. ಅಲ್ಲದೆ ಪ್ರಸಾದ ವಿತರಿಸಲು ಇಚ್ಛಿಸುವ ಭಕ್ತಾದಿಗಳು ಕಡ್ಡಾಯವಾಗಿ ಜಿಲ್ಲಾಡಳಿತದಿಂದ ಅನುಮತಿ ಪಡೆದಿರಬೇಕು. ಚಾಮುಂಡೇಶ್ವರ ಬೆಟ್ಟದ ತುದಿಯಲ್ಲಿ ಆಷಾಢ ಶುಕ್ರವಾರ ಪೂಜಾ ಮಹೋತ್ಸವ ಜುಲೈ 5ರಿಂದ ಜುಲೈ 26ರವರೆಗೆ ನೆರವೇರಲಿದೆ.

ಈ ಮಧ್ಯೆ ಮುಖ್ಯ ದೇವತೆಯ ವರ್ಧಂತಿ ಉತ್ಸವ ಇದೇ 24ರಂದು ನೆರವೇರಲಿದೆ. ಬೆಟ್ಟದ ತುದಿಗೆ ಪ್ರಸಾದ ಸಾಗಿಸುವ ವಾಹನಗಳಿಗೆ ಪಾಸ್ ವಿತರಣೆ ಮಾಡಲಾಗುತ್ತದೆ. ನಿಗದಿತ ಸಮಯದಲ್ಲಿ ಮಾತ್ರ ಭಕ್ತರಿಗೆ ಪ್ರಸಾದ ವಿತರಣೆ ಮಾಡಬೇಕಾಗಿದ್ದು ಮೊದಲು ಮತ್ತು ತಡವಾಗಿ ಬರುವವರನ್ನು ಒಳಗೆ ಬಿಡುವುದಿಲ್ಲ. ಇದಕ್ಕೂ ಮುನ್ನ ಫುಡ್ ಇನ್ಸ್ ಪೆಕ್ಟರ್ ಆಹಾರವನ್ನು ತಪಾಸಣೆ ನಡೆಸಿದ ಬಳಿಕವಷ್ಟೆ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ವಿತರಿಸಲು ಅವಕಾಶ ನೀಡಲಾಗುತ್ತದೆ.

ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಕೆ ಟಿ ಬಾಲಕೃಷ್ಣ, ಜುಲೈ 4ರಿಂದ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುತ್ತೇವೆ. ಅವರು ಮೂರು ಶಿಫ್ಟ್ ಗಳಲ್ಲಿ ಕೆಲಸ ಮಾಡುತ್ತಾರೆ. ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದ್ದು ಅವರಲ್ಲಿ 806 ಕಾನ್ಸ್ಟೇಬಲ್ ಗಳು, 174 ಹೋಮ್ ಗಾರ್ಡ್ಸ್, 160 ಮಹಿಳಾ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ. 
Stay up to date on all the latest ರಾಜ್ಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp