ಪುತ್ತೂರಿನ ಬಳಿಕ ವಿಟ್ಲದಲ್ಲಿ ಕುಕೃತ್ಯ! ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ, ಫೋಕ್ಸೊ ಪ್ರಕರಣ ದಾಖಲು

ದಕ್ಷಿಣ ಕನ್ನಡ ಪುತ್ತೂರಿನ ಹೆಸರಾಂತ ಕಾಲೇಜಿನ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ನೆನಪು ಮಾಸುವ ಮುನ್ನವೇ ಕರಾವಳಿ ಜಿಲ್ಲೆಯಲ್ಲಿ ಅಂತಹುದೇ ಇನ್ನೊಂದು ಪ್ರಕರಣ ವರದಿಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮಂಗಳೂರು: ದಕ್ಷಿಣ ಕನ್ನಡ ಪುತ್ತೂರಿನ ಹೆಸರಾಂತ ಕಾಲೇಜಿನ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ನೆನಪು ಮಾಸುವ ಮುನ್ನವೇ ಕರಾವಳಿ ಜಿಲ್ಲೆಯಲ್ಲಿ ಅಂತಹುದೇ ಇನ್ನೊಂದು ಪ್ರಕರಣ ವರದಿಯಾಗಿದೆ.
ವಿಟ್ಲ ನಿವಾಸಿಯಾಗಿರುವ ಹದಿನೇಳರ ಬಾಲಕಿ ಮೇಲೆ ಗ್ರಾಮ ಪಂಚಾಯತ್ ಸಿಬ್ಬಂದಿ ಸೇರಿ ಐವರು ನಿರಂತರ ಅತ್ಯಾಚಾರ ನಡೆಸಿದ್ದಾರೆ ಎಂಬ ಆಘಾತಕಾರಿ ಸುದ್ದಿ ತಡವಾಗಿ ಬಹಿರಂಗವಾಗಿದೆ.
ಅತ್ಯಾಚಾರದ ಹಿನ್ನೆಲೆ ಆಕೆ ಈಗ ಆರು ತಿಂಗಳ ಗರ್ಭಿಣಿಯಾಗಿದ್ದಾಳೆ. ಸದ್ಯ ಪೋಲೀಸರು ಆರೋಪಿಗಳ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬಾಲಕಿ ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸ ಮುಗಿದ ನಂತರ ಮನೆಯಲ್ಲೇ ಇರುತ್ತಿದ್ದಳೆನ್ನಲಾಗಿದೆ. ಆ ನಡುವೆ ಗ್ರಾಮ ಪಂಚಾಯತ್ ಸಿಬ್ಬಂದಿಯೂ ಸೇರಿದಂತೆ ಐವರ ತಂಡ ಆಕೆಯ ಮೇಲೆ ಆಕ್ರಮಣ ಮಾಡಿದೆ. ನಿರಂತರ ಅತ್ಯಾಚಾರ ಎಸಗಿದ್ದ ಆ ಕಾಮುಕರು ಈ ವಿಷಯವನ್ನು ಯಾರೊಡನೆ ಹಂಚಿಕೊಳ್ಲಬಾರದೆಂದು ಬಾಲಕಿಗೆ ತಾಕೀತು ಮಾಡಿದ್ದರೆಂದು ಪೋಲೀಸರು ಹೇಳಿದ್ದಾರೆ.
ಇತ್ತೀಚೆಗೆ ಮನೆಗೆ ಆಗಮಿಸಿದ್ದ ಆಶಾ ಕಾರ್ಯಕರ್ತೆಯು ಬಾಲಕಿಯನ್ನು ಪರೀಕ್ಷಿಸಿದ ಸಮಯ ಆಕೆ ಗರ್ಭವತಿ ಎಂದು ತಿಳಿದಾಗ ಕೃತ್ಯ ಬೆಳಕು ಕಂಡಿದೆ.
ಘಟನೆ ಕುರಿತು ವಿಟ್ಲ ಪೋಲೀಸರು ತನಿಖೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com