ಎಕ್ಸ್‌ಪ್ರೆಸ್ ವರದಿ ಫಲಶ್ರುತಿ: ಐಎಂಎ ವಂಚನೆಗೆ ಬಲಿಯಾದ 16 ಬಾಲಕಿಯ ಶಿಕ್ಷಣಕ್ಕೆ ಸಹಾಯಹಸ್ತ

ಇದು ಎಕ್ಸ್ ಪ್ರೆಸ್ ವರದಿ ಫಲಶ್ರುತಿ! ಚಾರ್ಟರ್ಡ್ ಅಕೌಂಟೆಂಟ್ ಆಗಬೇಕೆಂಬ ಕನಸು ಹೊತ್ತು ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕಿಯೊಬ್ಬಳ ತಾಯಿ ಬೆಂಗಳೂರು ಶಿವಾಜಿನಗರದಲ್ಲಿನ ಐಎಂಎ ಹಗರಣದಲ್ಲಿ ಹಣ ಕಳೆದುಕೊಂಡು....

Published: 11th July 2019 12:00 PM  |   Last Updated: 11th July 2019 12:43 PM   |  A+A-


Family investors seen outside IMA Jewels at Shivajinagar in Bengaluru. (Photo | Pandarinath B, EPS)

ಫೈಲ್ ಚಿತ್ರ

Posted By : RHN RHN
Source : The New Indian Express
ಬೆಂಗಳೂರು: ಇದು ಎಕ್ಸ್ ಪ್ರೆಸ್ ವರದಿ ಫಲಶ್ರುತಿ! ಚಾರ್ಟರ್ಡ್ ಅಕೌಂಟೆಂಟ್ ಆಗಬೇಕೆಂಬ ಕನಸು ಹೊತ್ತು ವಿದ್ಯಾಭ್ಯಾಸ ಮಾಡುತ್ತಿದ್ದ  ಬಾಲಕಿಯೊಬ್ಬಳ ತಾಯಿ ಬೆಂಗಳೂರು ಶಿವಾಜಿನಗರದಲ್ಲಿನ ಐಎಂಎ ಹಗರಣದಲ್ಲಿ ಹಣ ಕಳೆದುಕೊಂಡು ಕಂಗಾಲಾಗಿದ್ದಾಗ ಇಬ್ಬರು ವ್ಯಕ್ತಿಗಳು ತಾವು ಸಹಾಯಹಸ್ತ ಚಾಚಲು ನಿರ್ಧರಿಸಿರುವ ಸುದ್ದಿ ಬೆಂಗಳೂರಿನಿಂದ ಬಂದಿದೆ.

ವೆಲ್ಲೂರು ಮೂಲದ ಬಾಲಕಿಗೆ ಬೆಂಗಳೂರಿನ ಇಬ್ಬರು ವ್ಯಕ್ತಿಗಳು ಆಕೆಯ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲು ನಿರ್ಧರಿಸಿದ್ದಾರೆ.“ಪತ್ರಿಕೆಯು ಸಿಎ ಆಗಬೇಕೆಂಬ 16 ವರ್ಷದ ಬಾಲಕಿಯ ಕನಸಿಗೆ  ಐಎಂಎ ಹಗರಣ ಕೊಳ್ಳಿ!" ಎಂಬ ಶೀರ್ಷಿಕೆಯ ವರದಿಯನ್ನು ಪ್ರಕಟಿಸಿತ್ತು.

“ನಮ್ಮ ದುರವಸ್ಥೆಯ ಬಗ್ಗೆ  ಪತ್ರಿಕೆ ಬರೆದ ನಂತರ, ಯಾರಾದರೂ ನಿಜವಾಗಿಯೂ ನಮಗೆ ಸಹಾಯ ಮಾಡುತ್ತಾರೆಂದರೆ ನನಗೆ ನಿಜಕ್ಕೂ ಅಚ್ಚರಿಯಾಗುತ್ತಿದೆ. ಕೇವಲ ಮೂರು ದಿನಗಳ ನಂತರ, ನನಗೆ ಕರೆ ಮಾಡಿ ಬೆಂಬಲ ನೀಡುವುದಾಗಿ ಇಬ್ಬರು ಭರವಸೆ ನೀಡಿದ್ದಾರೆ.  ”ಎಂದು ಹುಡುಗಿಯ ತಾಯಿ ಮೆಗ್ನಾಜ್ ಬೇಗಮ್ ಹೇಳಿದರು. ಫೋನ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ತಮ್ಮ ಮಗಳ ಶೈಕ್ಷಣಿಕ ದಾಕಲೆ ಬಗೆಗೆ ಕೇಳಿದಾಗ ಶಾಲೆಗೆ ಹೋಗಲು ಸಿದ್ದವಾಗಿದ್ದ ತಮ್ಮ ಮಗಳೂ  ಅಲ್ಸಿಯಾ ಅಂಜುಮ್‌ನ ಸಂತೋಷಕ್ಕೆ ಪಾರವೇ ಇರಲಿಲ್ಲ.   “ನಾನು ತಕ್ಷಣ ನಿಮ್ಮ ತಾಯಿಯ ಖಾತೆಗೆ 5,000 ರೂ. ಹಾಕುವೆ, ನೀವು ಈ ತಿಂಗಳ ಶುಲ್ಕವನ್ನು ಪಾವತಿಸಿ ಮತ್ತು ಅಧ್ಯಯನವನ್ನು ಮುಂದುವರಿಸಿ ”ಎಂದು ನಗರದ ಸಿಎ ಸಂಸ್ಥೆಯ ಮಾಲೀಕರಾದ ಜಿ ಎ ಸುಂದರ್ ಅವರು ಅರ್ಷಿಯಾಗೆ ತಿಳಿಸಿದರು. 5  ಸಾವಿರ ರು. ಮೊತ್ತವನ್ನು ಸಹ ಖಾತೆಗೆ ಜಮಾ ಮಾಡಲಾಗಿದೆ.

ಪತ್ರಿಕೆ ಸುಂದರ್ ಅವರನ್ನು ಸಂಪರ್ಕಿಸಿದಾಗ ಅವರು " “ನಾನು ಹುಡುಗಿಯೊಂದಿಗೆ ಮಾತನಾಡಿದ್ದೇನೆ ಮತ್ತು 12 ನೇ ತರಗತಿಯಲ್ಲಿದ್ದರೂ ಸಿಎ ಕೋರ್ಸ್ ಬಗ್ಗೆ ಆಕೆಗೆ ತಿಳಿದಿದೆ ಎಂದು ಅರಿತುಕೊಂಡೆ. ಹಾಗೆಯೇ ನಾನು ಅವಳಿಗೆ ಉತ್ತಮ ಅಂಕಗಳನ್ನು ಪಡೆದುಕೊಳ್ಲುವುದನ್ನು ಖಚಿತಪಡಿಸಲು ಹೇಳಿದೆ. ಆಕೆ ತನ್ನ ಕನಸನ್ನು ಸಾಧಿಸುವವರೆಗೆ ನಾನು ಅವಳಿಗೆ ಮಾರ್ಗದರ್ಶನ ನೀಡುತ್ತೇನೆ, ”ಎಂದು ಅವರು ಹೇಳಿದರು.

ಏತನ್ಮಧ್ಯೆ, ಯುಎಸ್ನ 76 ವರ್ಷದ ನಿವೃತ್ತ ಭೌತಶಾಸ್ತ್ರಜ್ಞರು ಸಹ ಆರ್ಥಿಕವಾಗಿ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ, ಇದರಿಂದಾಗಿ ಅವರು ತಮ್ಮ ಪುಸ್ತಕಗಳನ್ನು ಖರೀದಿಸಬಹುದು ಮತ್ತು ಶಾಲಾ ಶುಲ್ಕವನ್ನು ಪಾವತಿಸಬಹುದು. "ಶಾಲಾ ಖರ್ಚು ವೆಚ್ಚದ ಅಂದಾಜು ಪಡೆಯಲು ನಾನು ಅವಳನ್ನು ಕೇಳಿದ್ದೇನೆ ಮತ್ತು ಹಣವನ್ನು ನೇರವಾಗಿ ಶಾಲೆಗೆ ಕಳುಹಿಸುತ್ತೇನೆ" ಎಂದು ಜೆಪಿ ನಗರ ನಿವಾಸಿ ಸಿ ನಾರಾಯಣನ್ ಹೇಳಿದರು.

"ನಾನು ಮತ್ತೆ ಶಾಲೆಗೆ ಹೋಗಲು ಪ್ರಾರಂಭಿಸಬಹುದೆಂದು ನನಗೆ ಖುಷಿಯಾಗಿದೆ. ನಾನು ಉತ್ತಮ ಅಂಕಗಳೊಂದಿಗೆ ನನ್ನ 12 ನೇ ತರಗತಿ  ಉತ್ತೀರ್ಣನಾಗಲು ಬಯಸುತ್ತೇನೆ ಮತ್ತು ನಂತರ ಸಿಎ ಆಗಲು ಬಯಸುತ್ತೇನೆ. ನನಗೆ ಸಹಾಯ ಮಾಡಿದ್ದಕ್ಕಾಗಿ ಪತ್ರಿಕೆಗೆ ನಾನು ಧನ್ಯವಾದ ಹೇಳುತ್ತೇನೆ ”ಎಂದು ಅಲ್ಸಿಯಾ ಹೇಳಿದ್ದಾರೆ. ಆಕೆ ಹತ್ತನೇ ತರಗತಿಯಲ್ಲಿ  ಶೇ 89 ರಷ್ಟು ಅಂಕಗಳನ್ನು ಗಳಿಸಿದ್ದಾಳೆ.

ಏತನ್ಮಧ್ಯೆ, ತನ್ನ ಮಗಳ ಶಿಕ್ಷಣಕ್ಕಾಗಿ ತನ್ನ ಊರಾದ ವೆಲ್ಲೂರಿನಲ್ಲಿ ಕೆಲಸ ಮಾಡುತ್ತಾ ಸಂಪಾದನೆಗಿಳಿದಿರುವ ತಾಯಿ  ಮೆಹ್ನಾಜ್ ಬೇಗಮ್, ಐಎಂಎ ಸಂಸ್ಥೆಯ ಸಂಸ್ಥಾಪಕ ಮನ್ಸೂರ್ ಖಾನ್ ಅವರನ್ನು ಪೊಲೀಸರು ಶೀಘ್ರದಲ್ಲೇ ಬಂಧಿಸಲಿದ್ದಾರೆ ಎಂಬ ಭರವಸೆ ಇದೆ ಎಂದಿದ್ದಾರೆ. ಆಕೆ ಐಎಂಎ ಸಂಸ್ಥೆಯಲ್ಲಿ  4 ಲಕ್ಷ ರೂ. ಹೂಡಿಕೆ ಮಾಡಿದ್ದಾಗಿ ಹೇಳಿದ್ದಾರೆ.ಇನ್ನು ಮೆಹ್ನಾಜ್ ವರ್ಷದ ಮೊದಲು ತನ್ನ ಗಂಡನನ್ನು ಕಳೆದುಕೊಂಡಳು ಮತ್ತು ಅಲ್ಸಿಯಾ ಶಿಕ್ಷಣಕ್ಕಾಗಿ  ಹಣ ಹೊಂದಿಸಲು ವೆಲ್ಲೂರಿನಲ್ಲಿ ಅವಳು ಹೊಂದಿದ್ದ ಏಕೈಕ ಆಸ್ತಿಯನ್ನು ಮಾರಿದಳು. ಅದರಿಂದ ಅವಳು ಪಡೆದ 6 ಲಕ್ಷ ರೂ.ಗಳೊಂದಿಗೆ, ಒಂದು ಮನೆಯನ್ನು ಖರೀದಿಸಿ ಉಳಿದ 4 ಲಕ್ಷ ರೂ. ಹಣವನ್ನು ಬ್ಯಾಂಕಿನಲ್ಲಿ ಇಉರಿಸಿದ್ದಾರೆ. ಆದರೆ ಕಳೆದ ನವೆಂಬರ್‌ನಲ್ಲಿ, ಆಕೆಯ ಸ್ನೇಹಿತರು ಐಎಂಎ ಜ್ಯುವೆಲ್ಸ್‌ನಲ್ಲಿ ಹೂಡಿಕೆ ಮಾಡುವಂತೆ ಸಲಹೆ ನೀಡಿದರು ಅ ಮಾತಿನಂತೆ ಆಕೆ ಹಿಂದೆ ಮುಂದೆ ಯೋಚಿಸದೆ ಹಣ ಹುಡಿದ್ದಾರೆ. 
Stay up to date on all the latest ರಾಜ್ಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp