ತಾಯಿ ,ಶಾರದಾಂಬೆ ಕಾಪಾಡಮ್ಮ! ಶಂಕರಪುರಂ ನ ಶೃಂಗೇರಿ ಮಠಕ್ಕೆ ಸಿಎಂ ಕುಮಾರಸ್ವಾಮಿ ಭೇಟಿ

ಅತೃಪ್ತರ ಶಾಸಕರ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಸಮ್ಮಿಶ್ರ ಸರ್ಕಾರ ಉಳಿಸಲು ಸಿಎಂ ಕುಮಾರಸ್ವಾಮಿ ದೇವರ ಮೊರೆ ಹೋಗಿದ್ದಾರೆ. ...

Published: 17th July 2019 12:00 PM  |   Last Updated: 17th July 2019 02:42 AM   |  A+A-


HD Kumaraswamy offers prayers at Sri Sringeri Shankara Mutt in Shankarapuram

ಶಂಕರಪುರಂ ನ ಶೃಂಗೇರಿ ಮಠಕ್ಕೆ ಸಿಎಂ ಕುಮಾರಸ್ವಾಮಿ ಭೇಟಿ

Posted By : SD SD
Source : ANI
ಬೆಂಗಳೂರು: ಅತೃಪ್ತರ ಶಾಸಕರ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಸಮ್ಮಿಶ್ರ ಸರ್ಕಾರ ಉಳಿಸಲು ಸಿಎಂ ಕುಮಾರಸ್ವಾಮಿ ದೇವರ ಮೊರೆ ಹೋಗಿದ್ದಾರೆ. ಬೆಂಗಳೂರಿನ ಶಂಕರ ಮಠಕ್ಕೆ ಸಿಎಂ ಕುಮಾರಸ್ವಾಮಿ ಕುಟುಂಬ ಸಮೇತ ಭೇಟಿ ನೀಡಿದರು. 

ಬೆಂಗಳೂರಿನ ಚಾಮರಾಜಪೇಟೆಯ ಶಂಕರ ಮಠಕ್ಕೆ ಸಿಎಂ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಶೃಂಗೇರಿ ಶಾರದಾ ದೇವಿ ದರ್ಶನ ಪಡೆದ ಸಿಎಂ ಕುಟುಂಬ ದೇವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಶಂಕರ ಮಠದಲ್ಲಿರುವ ಶೃಂಗೇರಿ ದೇವಸ್ಥಾನಕ್ಕೆ ಕುಟುಂಬ ಸಮೇತ ತೆರಳಿದ ಸಿಎಂ, ಕುಟುಂಬ ಸಮೇತ ಪೂಜೆ, ಹೋಮ ನಡೆಸಿದ್ದಾರೆ. 

ಹೋಮದಲ್ಲಿ ಎಚ್.ಡಿ.ರೇವಣ್ಣ , ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಮತ್ತು ಚನ್ನಮ್ಮ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಭಾಗಿಯಾಗಿದ್ದರು. 
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp