'ಮೂರು ಪಕ್ಷಗಳು ಸೇರಿ ಸರ್ಕಾರ ರಚಿಸಿ -ರಾಜ್ಯದ ಅಭಿವೃದ್ಧಿ ಮಾಡಿ'

ಎಲ್ಲಾ ಪಕ್ಷಗಳು ಜಗಳವಾಡಿಕೊಂಡು, ಮೈತ್ರಿ ಸರ್ಕಾರ ಮಾಡಿಕೊಂಡಿವೆ. ಮೂರು ಪಕ್ಷಗಳು ಒಂದಾಗಿ ಯಾಕೆ ಸರ್ಕಾರ ಮಾಡಬಾರದು? ..
ಮೂರು ಪಕ್ಷಗಳು ಸೇರಿ ಸರ್ಕಾರ ರಚಿಸಿ -ರಾಜ್ಯದ ಅಭಿವೃದ್ಧಿ ಮಾಡಿ
ಮೂರು ಪಕ್ಷಗಳು ಸೇರಿ ಸರ್ಕಾರ ರಚಿಸಿ -ರಾಜ್ಯದ ಅಭಿವೃದ್ಧಿ ಮಾಡಿ
ಕೊಪ್ಪಳ: ಮೂರು ಪಕ್ಷಗಳು ಸೇರಿ ಸರ್ಕಾರ ರಚಿಸಿದ್ರೆ ರಾಜ್ಯ ಅಭಿವೃದ್ಧಿಯಾಗುತ್ತದೆ ಎಂದು ಉಡುಪಿಯ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥ ಶ್ರೀ ಗಳು ಅಭಿಪ್ರಾಯ ಪಟ್ಟಿದ್ದಾರೆ.
ಕೊಪ್ಪಳದ ಗಂಗಾವತಿಯಲ್ಲಿ ಮಾತನಾಡಿದ ಶ್ರೀಗಳು, ಎಲ್ಲರೂ ಅಧಿಕಾರಕ್ಕೆ ಪ್ರಯತ್ನ ಮಾಡ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಷ್ಟ್ರಪತಿ ಆಡಳಿತ, ಮಧ್ಯಂತರ ಚುನಾವಣೆ ಆಗಬಾರದು. ಸರ್ವಪಕ್ಷೀಯ ಸರ್ಕಾರ ರಚನೆಯಾಗಬೇಕು ಎಂದು ತಿಳಿಸಿದ್ದಾರೆ.
ಅಲ್ಲದೇ, ಎಲ್ಲಾ ಪಕ್ಷಗಳು ಜಗಳವಾಡಿಕೊಂಡು, ಮೈತ್ರಿ ಸರ್ಕಾರ ಮಾಡಿಕೊಂಡಿವೆ. ಮೂರು ಪಕ್ಷಗಳು ಒಂದಾಗಿ ಯಾಕೆ ಸರ್ಕಾರ ಮಾಡಬಾರದು? ಎಂದು ಪೇಜಾವರ ಶ್ರೀಗಳು ಪ್ರಶ್ನಿಸಿದ್ದಾರೆ. ಬಿಜೆಪಿ ಹಿಂದೂಪರ ಇದೆ ಅಂತಾ ವಿರೋಧಿಸಿ ಮೈತ್ರಿ ಸರ್ಕಾರ ಮಾಡಿದ್ದಾರೆ. ಬಿಜೆಪಿ ಜಾತ್ಯತೀತ ಪಕ್ಷವು ಸಹ ಆಗಿದೆ. ಎಲ್ಲಾ ಪಕ್ಷ ಸೇರಿ ಸರ್ಕಾರ ಮಾಡಿದ್ರೆ ಪಕ್ಷಾಂತರ, ರೆಸಾರ್ಟ್ ರಾಜಕೀಯ ಬಂದ್ ಆಗುತ್ತೆ ಎಂದು ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯದಲ್ಲಿ ಎರಡು ದೋಸ್ತಿ ಅಲ್ಲ, ಮೂರು ದೋಸ್ತಿ ಸರ್ಕಾರ ಆಗಬೇಕು. ವಿಪಕ್ಷವಿಲ್ಲದೇ ಸರ್ಕಾರ ಮಾಡಿದ್ರೆ ರಾಜ್ಯ ಅಭಿವೃದ್ಧಿ ಆಗುತ್ತೆ. ಮೂರು ಪಕ್ಷಗಳು ಒಟ್ಟಾಗಿ ಬಾಳಬೇಕು ಎಂದು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷವು ಸೇರಿ ಆಡಳಿತ ನಡೆಸಿ ಎಂದು ಶ್ರೀಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com