ಐಎಂಎ ಕೇಸಿನ ತನಿಖೆಗೆ ಸಮರ್ಥ ಅಧಿಕಾರಿ ನೇಮಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ

ಐಎಂಎ ವಂಚನೆ ಹಗರಣ ಕೇಸಿನ ತನಿಖೆಯಲ್ಲಿ ಹೂಡಿಕೆದಾರರ ಹಿತಾಸಕ್ತಿಯನ್ನು ಕಾಪಾಡಲು ...
ಹೈಕೋರ್ಟ್
ಹೈಕೋರ್ಟ್
ಬೆಂಗಳೂರು: ಐಎಂಎ ವಂಚನೆ ಹಗರಣ ಕೇಸಿನ ತನಿಖೆಯಲ್ಲಿ ಹೂಡಿಕೆದಾರರ ಹಿತಾಸಕ್ತಿಯನ್ನು ಕಾಪಾಡಲು ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ಕೆಪಿಐಡಿ) ಕಾಯ್ದೆ 2004ರಡಿಯಲ್ಲಿ ಉಪ ಆಯುಕ್ತರ ಬದಲಾಗಿ ಉನ್ನತ ದರ್ಜೆಯ ಹಿರಿಯ ಅಧಿಕಾರಿಯನ್ನು ನೇಮಕ ಮಾಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಹೇಳಿದೆ. 
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಹೆಚ್ ಟಿ ನರೇಂದ್ರ ಪ್ರಸಾದ್ ನೇತೃತ್ವದ ವಿಭಾಗೀಯ ಪೀಠ, ಸಮರ್ಥ ಹಿರಿಯ ಅಧಿಕಾರಿಯನ್ನು ತನಿಖೆಗೆ ನೇಮಕ ಮಾಡದಿದ್ದರೆ ಇಂದು ಸರ್ಕಾರಕ್ಕೆ ಆದೇಶ ಹೊರಡಿಸುವುದಾಗಿ ಹೇಳಿದೆ.
ಐಎಂಎ ವಂಚನೆ ಕೇಸಿಗೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಎಲ್ಲಾ ಪೊಂಜಿ ಹಗರಣಗಳ ತನಿಖೆ ನಿಭಾಯಿಸಲು ರಾಜ್ಯ ಸರ್ಕಾರ ಒಪ್ಪಿದೆಯೇ ಎಂದು ಪರೀಕ್ಷಿಸುವಂತೆ ನ್ಯಾಯಾಲಯ ಸರ್ಕಾರಿ ಪರ ವಕೀಲರಿಗೆ ಸೂಚಿಸಿದ್ದಾರೆ. ಈ ರೀತಿ ಹೂಡಿಕೆದಾರರಿಗೆ ವಂಚನೆ ಮಾಡುವ ಕಂಪೆನಿಗಳಿಗೆ ನಿರ್ದೇಶನ ನೀಡಬೇಕೆಂದು 2018ರಲ್ಲಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ಉಲ್ಲೇಖಿಸಿದ ನ್ಯಾಯಾಲಯ 2018ರಲ್ಲಿಯೇ ಪೊಲೀಸರು ಇದರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದ್ದರೆ ಇಂತಹ ವಿಷಯಗಳು ನಡೆಯುತ್ತಿರಲಿಲ್ಲ ಎಂದು ಮೌಖಿಕವಾಗಿ ನ್ಯಾಯಾಧೀಶರು ಹೇಳಿದರು.
ಕೆಪಿಐಡಿ ಕಾಯ್ದೆಯಡಿ ಕಳೆದ ತಿಂಗಳು 25ರಂದು ಐಎಂಎ ವಂಚನೆ ಪ್ರಕರಣದ ತನಿಖೆಗೆ ಸಮರ್ಥ ಅಧಿಕಾರಿಯನ್ನಾಗಿ ಉಪ ಆಯುಕ್ತರನ್ನು ನೇಮಿಸುವ ಮೊದಲು ಅವರ ನಿಖರತೆಯನ್ನು ಸರ್ಕಾರ ಪರೀಕ್ಷಿಸಬೇಕಾಗಿತ್ತು ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com