ಬೆಳಗಾವಿ: ಅಶ್ಲೀಲ ವಿಡಿಯೋ, ಫೋಟೋ ಇಟ್ಟುಕೊಂಡು ಯುವತಿಗೆ ಬ್ಲ್ಯಾಕ್ ಮೇಲ್, ಯುವಕನ ಬಂಧನ

ಯುವತಿಯ ಅಶ್ಲೀಲ ವಿಡಿಯೋ ಹಾಗೂ ಫೋಟೋ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಯುವಕನನ್ನು ಬೆಳಗಾವಿ ಸಿಇಎನ್ ಪೊಲೀಸರು...

Published: 25th July 2019 12:00 PM  |   Last Updated: 25th July 2019 06:58 AM   |  A+A-


Man from Gujarat arrested for blackmailing woman in Belgaum

ಸಾಂದರ್ಭಿಕ ಚಿತ್ರ

Posted By : LSB
Source : UNI
ಬೆಳಗಾವಿ: ಯುವತಿಯ ಅಶ್ಲೀಲ ವಿಡಿಯೋ ಹಾಗೂ ಫೋಟೋ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಯುವಕನನ್ನು ಬೆಳಗಾವಿ ಸಿಇಎನ್ ಪೊಲೀಸರು ಗುರುವಾರ ಬಂಧಿಸಿದ್ದಾರೆ.  

ಗುಜರಾತ್ ಮೂಲದ 24 ವರ್ಷದ ಮಿಥುಲ್ ಕಾನ್ಸಾರಾ ಬಂಧಿತ ಆರೋಪಿ. ಈತ ಪಬ್ ಜಿ ಗೇಮ್ ಮೂಲಕ ಬೆಳಗಾವಿ ಮೂಲದ ಯುವತಿಯೊಂದಿಗೆ ಸ್ನೇಹ ಬೆಳೆಸಿ, ತಾನು ಮುಂಬೈ ನಿವಾಸಿಯಾಗಿದ್ದು, 3 ಲಕ್ಷ ರೂ. ಸಂಬಳ ಪಡೆಯುತ್ತಿರುವುದಾಗಿ ಹೇಳಿದ್ದ. 

ನಂತರ ಆತನ ಬಣ್ಣದ ಮಾತಿಗೆ ಮರುಳಾದ ಯುವತಿ ಪ್ರೀತಿಯಲ್ಲಿ ಬಿದ್ದು, ಆತನನ್ನು ಭೇಟಿ ಆಗಲು ಮುಂಬೈಗೆ ಹೋಗಿದ್ದಳು.  ಅಲ್ಲಿ ಆತನೊಂದಿಗೆ ಲಾಡ್ಜ್ ನಲ್ಲಿ ತಂಗಿದ್ದಳು. ಈ ವೇಳೆ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದನ್ನು ಆತ ರಹಸ್ಯವಾಗಿ ವಿಡಿಯೋ ಚಿತ್ರಿಸಿಕೊಂಡಿದ್ದ. 

ನಂತರ ಯುವತಿ ಮುಂಬೈನಿಂದ ಬೆಳಗಾವಿಗೆ ವಾಪಸ್ಸಾದ ಬಳಿಕ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದ. ಹಣ ಕೊಡಲು ನಿರಾಕರಿಸಿದಾಗ, ಆಕೆಯ ಸ್ನೇಹಿತರ ಫೇಸ್ ಬುಕ್ ಗೆ ಅಶ್ಲೀಲವಾದ ಫೋಟೋ ಕಳುಹಿಸಲು ಆರಂಭಿಸಿದ್ದ. ಇದರಿಂದ ತೀವ್ರವಾಗಿ ಮನನೊಂದ ಯುವತಿ ಬೆಳಗಾವಿ ಸೈಬರ್ ಕ್ರೈಂ ಪೊಲೀಸರಿಗೆ ಆತನ ವಿರುದ್ಧ ದೂರು ನೀಡಿದ್ದಳು.

ಪ್ರಕರಣದ ಜಾಡು ಹಿಡಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
Stay up to date on all the latest ರಾಜ್ಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp