ನನ್ನನ್ನು ನಂಬಿದವರಿಗೆ ನಾನು ಮೋಸ ಮಾಡಿದ್ದೇನೆ, ನನ್ನನ್ನು ಕ್ಷಮಿಸಿಬಿಡಿ: ಐಟಿ ಕಿರುಕುಳದಿಂದ ಸಿದ್ದಾರ್ಥ್ ಆತ್ಮಹತ್ಯೆ?

ವ್ಯವಹಾರಿಕವಾಗಿ ನನಗೆ ಸಾಕಷ್ಟು ನಷ್ಟವಾಗಿದೆ. ವ್ಯವಹಾರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗಿಲ್ಲ. ಹಾಗೆಂದು ಯಾರಿಗೂ ಮೋಸ ಮಾಡುವ...
2 ದಿನದ ಹಿಂದೆ ಕಂಪನಿ ಸಿಬ್ಬಂದಿಗೆ ಸಿದ್ದಾರ್ಥ್ ಪತ್ರ
2 ದಿನದ ಹಿಂದೆ ಕಂಪನಿ ಸಿಬ್ಬಂದಿಗೆ ಸಿದ್ದಾರ್ಥ್ ಪತ್ರ
ಬೆಂಗಳೂರು: ವ್ಯವಹಾರಿಕವಾಗಿ ನನಗೆ ಸಾಕಷ್ಟು ನಷ್ಟವಾಗಿದೆ. ವ್ಯವಹಾರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗಿಲ್ಲ. ಹಾಗೆಂದು ಯಾರಿಗೂ ಮೋಸ ಮಾಡುವ ಉದ್ದೇಶ ನನಗಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಕೆಫೆ ಕಾಫಿ ಡೇ ನಿರ್ದೇಶಕ ಮಂಡಳಿಯ ಸದಸ್ಯರಿಗೆ ಸಿದ್ಧಾರ್ಥ ಜು.27ರಂದು ಪತ್ರ ಬರೆದಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
2 ದಿನಗಳ ಹಿಂದೆ ತಮ್ಮ ಕಂಪನಿಯ ನೌಕರರಿಗೆ  ಸಿದ್ದಾರ್ಥ್ ಬರೆದಿರುವ ಪತ್ರದಲ್ಲಿ, ಐಟಿಯ ಹಿಂದಿನ ಡಿಜಿ ತಮಗೆ ಅತಿ ಹೆಚ್ಚು ಕಿರುಕುಳ ನೀಡಿದ್ದಾರೆ. 2 ಬಾರಿ ನನ್ನ ಕಂಪನಿಯ ಷೇರುಗಳನ್ನು ಜಪ್ತಿ ಮಾಡಿದರು, ಇದರಿಂದ ನನ್ನ ಮೈಂಡ್ ಟ್ರೀ ಕಂಪನಿಯ ಶೇರು ಮಾರಾಟ ಮಾಡಲು ಸಮಸ್ಯೆಯಾಯಿತು. ಅದಾದ ಬಳಿಕೆ ಕಾಫಿ ಡೇ ಷೇರುಗಳ ಮೇಲೆ ಕಣ್ಣು ಬಿತ್ತು, ಆದಾಯ ತೆರಿಗೆ ಇಲಾಖೆಯಿಂದ ನಿರಂತರವಾಗಿ ನನಗೆ ಕಿರುಕುಳ ನೀಡಲಾಯಿತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
ಆರು ತಿಂಗಳ ಹಿಂದೆ ತಮ್ಮ  ಸ್ನೇಹಿತರೊಬ್ಬರ ಬಳಿ ಅಪಾರ ಪ್ರಮಾಣದ ಸಾಲ ಪಡೆದಿದ್ದೇನೆ, ಇತರ ಸಾಲಗಾರರ ಒತ್ತಡದಿಂದ ನನಗೆ ಈ ಪರಿಸ್ಥಿತಿ ಬಂದಿದೆ ನಾವು ತೆರಿಗೆ ಕಟ್ಟಿದ್ದರು ಐಟಿ ಡಿಜಿಯಿಂದ ಕಿರುಕುಳ ನೀಡುತ್ತಿದ್ದರೂ, ಇದರಿಂದಾಗಿ ಕಂಪನಿಯಲ್ಲಿ ಹಣದ ಸಮಸ್ಯೆ ಉಂಟಾಯಿತು ಎಂದು ಜುಲೈ 27 ರಂದು ಕಂಪನಿಯ ನೌಕರರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ,
ಕೆಫೆ ಕಾಫಿ ಡೇ ವ್ಯವಹಾರದಲ್ಲಿ ಸಿದ್ಧಾರ್ಥ ಅವರಿಗೆ ಭಾರಿ ನಷ್ಟವಾಗಿತ್ತು. 8 ಸಾವಿರ ಕೋಟಿ ರೂ.ವರೆಗೂ ನಷ್ಟವಾಗಿತ್ತು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ ಹೂಡಿಕೆಯನ್ನು ಹಿಂದಿರುಗಿಸುವಂತೆ ನಿರ್ದೇಶಕ ಮಂಡಳಿ ಸದಸ್ಯರು ಸಿದ್ಧಾರ್ಥ ಮೇಲೆ ಒತ್ತಡ ಹೇರುತ್ತಿದ್ದರೆ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com