ಐಎಂಎ ಹಗರಣದಲ್ಲಿ ಭಾಗಿಯಾದ ಪೋಲೀಸ್ ಅಧಿಕಾರಿಗಳಿಗೆ ಎಸ್‌ಐಟಿ ನೋಟೀಸ್

ವಿಶೇಷ ತನಿಖಾ ತಂಡ (ಎಸ್‌ಐಟಿ) ರಾಜಕೀಯ ಮುಖಂಡರಾದ ರೋಶನ್ ಬೇಗ್ ಮತ್ತು ಜಮೀರ್ ಅಹ್ಮದ್ ಖಾನ್ ಅವರಿಗೆ ಬಹು ಕೋಟಿ ಐಎಂಎ ವಂಚನೆಯಲ್ಲಿ ತಮ್ಮ ಮುಂದೆ ಹಾಜರಾಗಿ ವಿಚಾರಣೆ ಎದುರಿಸಲು....
ಐಎಂಎ ಹಗರಣದಲ್ಲಿ ಭಾಗಿಯಾದ ಪೋಲೀಸ್ ಅಧಿಕಾರಿಗಳಿಗೆ ಎಸ್‌ಐಟಿ ನೋಟೀಸ್
ಐಎಂಎ ಹಗರಣದಲ್ಲಿ ಭಾಗಿಯಾದ ಪೋಲೀಸ್ ಅಧಿಕಾರಿಗಳಿಗೆ ಎಸ್‌ಐಟಿ ನೋಟೀಸ್
ಬೆಂಗಳೂರು: ವಿಶೇಷ ತನಿಖಾ ತಂಡ (ಎಸ್‌ಐಟಿ) ರಾಜಕೀಯ ಮುಖಂಡರಾದ ರೋಶನ್ ಬೇಗ್ ಮತ್ತು ಜಮೀರ್ ಅಹ್ಮದ್ ಖಾನ್ ಅವರಿಗೆ ಬಹು ಕೋಟಿ ಐಎಂಎ ವಂಚನೆಯಲ್ಲಿ ತಮ್ಮ ಮುಂದೆ ಹಾಜರಾಗಿ ವಿಚಾರಣೆ ಎದುರಿಸಲು ಎರಡು ದಿನಗಳ ಕಾಲಾವಕಾಶ ನೀಡಿದೆ.  ವಿಶೇಷವೆಂದರೆ ಆಗಸ್ಟ್ 2 ರಂದು ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಸೋಮವಾರ ಪೋಲೀಸ್ ಅಧಿಕಾರಿಗಳಾದ  ಪೊಲೀಸ್ ಆಯುಕ್ತ (ಪೂರ್ವ) ಅಜಯ್ ಹಿಲೋರಿ, ಸಹಾಯಕ ಪೊಲೀಸ್ ಆಯುಕ್ತ ರಮೇಶ್ ಕುಮಾರ್ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ರಮೇಶ್ ಕುಮಾರ್ ಅವರಿಗೆ ನೋಟಿಸ್ ಕಳುಹಿಸಿದೆ. 
ಶಿವಾಜಿನಗರ ಕಾರ್ಪೋರೇಟರ್ ಫರೀದಾ ಇಶ್ತಿಯಾಕ್ ಅವರ ಪತಿಯನ್ನು ಎಸ್‌ಐಟಿ ಪ್ರಶ್ನಿಸಿದೆ.ಜಮೀರ್ ಅಹಮದ್ ಹಾಗೂ ರೋಷನ್ ಬೇಗ್ ಅವರನ್ನು ಜುಲೈ 29 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕಳುಹಿಸಲಾಗಿದೆ. ಆದರೆ ವಿಧಾನಸಭೆಯಲ್ಲಿ ವಿಶ್ವಾಸಮತ ಚಲಾವಣೆ ಇದ್ದ ಕಾರಣ ಅವರು ಶಾಸನ ಸಭೆಗೆ ತೆರಳಬೇಕಾಗಿದ್ದು ಅವರಿಗೆ ಜುಲೈ 31 ರಂದು ಹಾಜರಾಗುವಂತೆ  ತಿಳಿಸಲಾಗಿದೆ." ಹಿರಿಯ ಅಧಿಕಾರಿಯ್ಪೊಬ್ಬರು ಖಚಿತಪಡಿಸಿದ್ದಾರೆ.
ದಿಟ್ಟ ನಿಲುವು ತೆಗೆದುಕೊಂಡಿರುವ ಎಸ್‌ಐಟಿ  ವಂಚನೆಯಲ್ಲಿ ಭಾಗಿಯಾಗಿರುವ ಐಪಿಎಸ್ ಅಧಿಕಾರಿಗಳನ್ನು ಸಹ ಬಿಟ್ಟಿಲ್ಲ. ತನಿಖೆಯ ಸಮಯದಲ್ಲಿ ಈ ಅಧಿಕಾರಿಗಳು 2018 ರಲ್ಲಿ ಕರ್ನಾಟಕ ಸಂರಕ್ಷಣಾ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಕಾಯ್ದೆಯಡಿ  ಹಲವರು ಐಎಂಎ ವಿರುದ್ಧ ದೂರು ನೀಡಲು ಮುಂದಾದರೂ ಇವರುಗಳು ಕರಣಗಳನ್ನು ದಾಖಲಿಸಿಕೊಳ್ಲಲಿಲ್ಲಎಂಬ ಆರೋಪದ ಮೇಲೆ ನೋಟಿಸ್ ನೀಡಲಾಗಿದೆ ಅಧಿಕಾರಿಗಳ ಪ್ರಕಾರ, ಅಜಯ್ ಹಿಲೋರಿ ಮತ್ತು ಇತರ ಅಧಿಕಾರಿಗಳು ತಮ್ಮ ಮುಂದೆ ಬಂದ ದೂರುದಾರರ ಎಲಾ ಪ್ರಕರಣಗಳನ್ನು ‘ಇತ್ಯರ್ಥಪಡಿಸಿದ್ದರು’. ಐಎಂಎ ಕಾರ್ಯನಿರ್ವಹಿಸುತ್ತಿರುವ ವಿಧಾನದಲ್ಲಿ ಅವರು ಯಾವುದೇ ನ್ಯೂನತೆ ಪತ್ತೆ ಮಾಡಲಿಲ್ಲ, ಹಾಗಾಗಿ ಮುಂದೆ ಯಾವೊಬ್ಬ ದೂರುದಾರರೂ ಅವರ ಬಳಿ ದೂರು ನೀಡಲು ಮುಂದೆ ಬರಲಿಲ್ಲ.
ಮತ್ತೊಂದು ಬೆಳವಣಿಗೆಯಲ್ಲಿ, ಈ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಶಿವಾಜಿನಗರ ಕಾರ್ಪೊರೇಟರ್ ಅವರ ಪತಿ ಇಶ್ತಿಯಾಕ್ ಪೈಲ್ವಾನ್ ಅವರನ್ನು ಐಎಂಎ ಸಂಸ್ಥಾಪಕ ಮೊಹಮ್ಮದ್ ಮನ್ಸೂರ್ ಖಾನ್ ಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಮೇಲೆ ವಿಚಾರಣೆ ನಡೆಸಿದ್ದಾರೆ.“ಇಶ್ತಿಯಾಕ್ ಮನ್ಸೂರ್‌ಗೆ ಬೆದರಿಕೆ ಹಾಕಿದ್ದನ್ನು ನಾವು ಕಂಡುಕೊಂಡಿದ್ದೇವೆ ಮತ್ತು ಇದರ ಆಧಾರದ ಮೇಲೆ ನಾವು ಆತನನ್ನು ಪ್ರಶ್ನಿಸುತ್ತಿದ್ದೇವೆ. ಏತನ್ಮಧ್ಯೆ, ನಾವು ಇಶ್ತಿಯಾಕ್ ಅವರಿಂದ ಇತರ ಮಾಹಿತಿಯನ್ನು ಸಹ ಸಂಗ್ರಹಿಸಿದ್ದೇವೆ "ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಸ್ತುತ ಮನ್ಸೂರ್ ಖಾನ್ ಜಾರಿ ನಿರ್ದೇಶನಾಲಯ (ಇಡಿ)ದ ವಶದಲ್ಲಿದ್ದು ಕಂಪನಿಯ ಮೂಲಕ ಮಾಡಿದ ಎಲ್ಲಾ ವಹಿವಾಟುಗಳಿಗೆ ಸಂಬಂಧಿಸಿ ವಿಚಾರಣೆ ಎದುರಿಸುತ್ತಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com