ಗಿನ್ನೆಸ್ ದಾಖಲೆಗೆ ಸಜ್ಜಾಗಿದೆ ಮೈಸೂರು; ಯೋಗ ದಿನಾಚರಣೆಗೆ 1.25 ಲಕ್ಷ ಜನರ ನಿರೀಕ್ಷೆ

ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಇನ್ನು ಕೆಲವೇ ದಿನಗಳು ಬಾಕಿ. ಈ ಬಾರಿ ದಿನಾಚರಣೆಯನ್ನು ...

Published: 02nd June 2019 12:00 PM  |   Last Updated: 02nd June 2019 10:09 AM   |  A+A-


People participate in a mass yoga rehearsal camp in Mysuru on Saturday

ಮೈಸೂರಿನಲ್ಲಿ ತರಬೇತಿ ಶಿಬಿರದಲ್ಲಿ ಭಾಗವಹಿಸಿರುವ ಜನರು

Posted By : SUD SUD
Source : The New Indian Express
ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಇನ್ನು ಕೆಲವೇ ದಿನಗಳು ಬಾಕಿ. ಈ ಬಾರಿ ದಿನಾಚರಣೆಯನ್ನು ಸ್ಮರಣೀಯವಾಗಿಸಲು ಸಾಂಸ್ಕೃತಿಕ ನಗರಿ ಸಜ್ಜಾಗಿದೆ. ಬಿ ಕೆ ಎಸ್ ಅಯ್ಯಂಗಾರ್, ಪಟ್ಟಾಬಿ ಜೋಯಿಸ್ ರಂತಹ ಖ್ಯಾತ ಯೋಗಪಟುಗಳನ್ನು ಸೃಷ್ಟಿಸಿರುವ ಮೈಸೂರು ಜಿಲ್ಲೆ ಈ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಯೋಗ ದಿನಾಚರಣೆಯಲ್ಲಿ ಜನರು ಭಾಗವಹಿಸುವ ಮೂಲಕ ಗಿನ್ನಿಸ್ ದಾಖಲೆ ಸೃಷ್ಟಿಸಲು ಸಜ್ಜಾಗಿದೆ.

2017ರಲ್ಲಿ ಮೈಸೂರಿನಲ್ಲಿ ಯೋಗ ದಿನಾಚರಣೆಯಂದು 55 ಸಾವಿರದ 506 ಮಂದಿ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಕಳೆದ ವರ್ಷ ರಾಜಸ್ತಾನದಲ್ಲಿ 1 ಲಕ್ಷದ 984 ಯೋಗನಿರತರು ಭಾಗವಹಿಸಿ ದಾಖಲೆ ಸೃಷ್ಟಿಸಿದ್ದರು. ಆದರೆ ಈ ಬಾರಿ ದಾಖಲೆ ನಿರ್ಮಿಸಲು ಮೈಸೂರು ಯೋಗ ಫೆಡರೇಷನ್, ಪತಂಜಲಿ ಆಯುರ್ವೇದ ಮತ್ತು ಇತರ ಕೆಲವು ಸಂಸ್ಥೆಗಳು ಕೈ ಜೋಡಿಸಿದ್ದು 1,400 ಯೋಗಪಟುಗಳು ಉಚಿತವಾಗಿ ಮಕ್ಕಳಿಗೆ, ಯುವಕರಿಗೆ, ಮಹಿಳೆಯರಿಗೆ ಮತ್ತು ಸಾರ್ವಜನಿಕರಿಗೆ ಯೋಗ ತರಬೇತಿ ನೀಡುತ್ತಿದ್ದಾರೆ. ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನದಂದು ಸುಮಾರು 1.25 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ.

ಯೋಗ ದಿನದಂದು ನಡೆಯುವ ರಾಷ್ಟ್ರೀಯ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಆಯ್ಕೆ ಮಾಡಿಕೊಂಡ ಐದು ನಗರಗಳಲ್ಲಿ ಮೈಸೂರು ಕೂಡ ಈ ಬಾರಿ ಸ್ಥಾನ ಪಡೆದುಕೊಂಡಿರುವುದು ನಗರದಲ್ಲಿ ಯೋಗ ದಿನ ಕಾರ್ಯಕ್ರಮ ಆಯೋಜಕರಿಗೆ ಮತ್ತಷ್ಟು ಬಲ ಬಂದಂತಾಗಿದೆ. ದೆಹಲಿ, ಶಿಮ್ಲಾ, ಅಹಮದಾಬಾದ್ ಮತ್ತು ರಾಂಚಿ ಉಳಿದ ನಗರಗಳಾಗಿವೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp