ಅಂಗಡಿಯಲ್ಲಿ ದೊರಕಿದ್ದ ಪರ್ಸ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಗೃಹ ರಕ್ಷಕ ಸಿಬ್ಬಂದಿ

ನಗರದ ಎಲೆಕೊಡಿಗೆಹಳ್ಳಿ ಕಾಲೋನಿಯ ತರಕಾರಿ ಅಂಗಡಿಯೊಂದರಲ್ಲಿ ದೊರಕಿದ ಪರ್ಸ್ ಅನ್ನು ಪೊಲೀಸ್ ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಗೆ ಮರಳಿಸುವ ಮೂಲಕ ಗೃಹರಕ್ಷಕ ದಳದ ಸಿಬ್ಬಂದಿಯೋರ್ವರು

Published: 11th June 2019 12:00 PM  |   Last Updated: 11th June 2019 09:56 AM   |  A+A-


Home guard staff returns purse after he finds it in vegetable shop

ಅಂಗಡಿಯಲ್ಲಿ ದೊರಕಿದ್ದ ಪರ್ಸ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಗೃಹ ರಕ್ಷಕ ಸಿಬ್ಬಂದಿ

Posted By : SBV SBV
Source : UNI
ಬೆಂಗಳೂರು: ನಗರದ ಎಲೆಕೊಡಿಗೆಹಳ್ಳಿ ಕಾಲೋನಿಯ ತರಕಾರಿ ಅಂಗಡಿಯೊಂದರಲ್ಲಿ ದೊರಕಿದ ಪರ್ಸ್ ಅನ್ನು ಪೊಲೀಸ್ ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಗೆ ಮರಳಿಸುವ ಮೂಲಕ ಗೃಹರಕ್ಷಕ ದಳದ ಸಿಬ್ಬಂದಿಯೋರ್ವರು ಪ್ರಾಮಾಣಿಕತೆ ಮೆರೆದಿದ್ದಾರೆ.
  
ಪೊಲೀಸ್ ಆಯುಕ್ತರ ನಿಯಂತ್ರಣ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿವಕುಮಾರ್ ಎಂಬ ಗೃಹ ರಕ್ಷಕ ಸಿಬ್ಬಂದಿ ಪರ್ಸ್ ಹಿಂದಿರುಗಿಸಿದ ಪ್ರಾಮಾಣಿಕ ವ್ಯಕ್ತಿ.  ಜೂನ್ 6ರಂದು ಸಂಜೆ 6 ಗಂಟೆಗೆ ಎಲೆಕೊಡಿಗೆಹಳ್ಳಿ ಕಾಲೋನಿಯ ತರಕಾರಿ ಅಂಗಡಿಗೆ ತೆರಳಿದಾಗ ಆ ಸಂದರ್ಭದಲ್ಲಿ ಅವರಿಗೆ ಪರ್ಸ್ ವೊಂದು ದೊರಕಿದ್ದು, ಪೊಲೀಸ್ ಇಲಾಖೆಯ ಕಚೇರಿಗೆ ಒಪ್ಪಿಸಿದ್ದಾರೆ.   

ತಕ್ಷಣವೇ ಶಿವಕುಮಾರ್ ಅವರ ಸಮ್ಮುಖದಲ್ಲಿ ಎಪಿಆರ್ ಒ ಹಾಗೂ ಸಿಬ್ಬಂದಿ ಕಂದು ಬಣ್ಣದ ಪರ್ಸ್ ಪರಿಶೀಲಿಸಿದಾಗ ಅದರಲ್ಲಿ ಎಟಿಎಂ ಕಾರ್ಡ್, ಪಾನ್ ಕಾರ್ಡ್ , ಆಧಾರ್ ಕಾರ್ಡ್, ಆರ್‌ ಸಿ ಪುಸ್ತಕ, ಡಿಎಲ್ ಹಾಗೂ ಇನ್ನಿತರ ಮಹತ್ವದ ದಾಖಲಾತಿ ಲಭಿಸಿದ್ದು, ಲೋಕೇಶ್ ಡಿ.ಕೆ ಎಂಬುವವರು ಅದರ ವಾರಸುದಾರರ ಎಂದು ತಿಳಿದು ಬಂದಿತ್ತು. ನಂತರ ಲೋಕೇಶ್ ಡಿ.ಕೆ ಅವರನ್ನು ಸಂಪರ್ಕಿಸಿ ಪರ್ಸ್ ಹಿಂದಿರುಗಿಸಲಾಗಿದೆ. ಶಿವಕುಮಾರ್ ಅವರ ಪ್ರಾಮಾಣಿಕೆತೆಗೆ ನಗರ ಪೊಲೀಸ್ ಆಯುಕ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp