ಗಿರೀಶ್ ಕಾರ್ನಾಡ್ ರಿಗೂ ಧಾರವಾಡಕ್ಕೂ ವಿಶೇಷ ನಂಟು!

ನಾಟಕ ಬರಹಗಾರ ಗಿರೀಶ್ ಕಾರ್ನಾಡ್ ಅವರಿಗೆ ಧಾರವಾಡದ ಬಗ್ಗೆ ಯಾವಾಗಲೂ ವಿಶೇಷ ಬಾಂಧವ್ಯವಿತ್ತು ಎಂದು ಅವರ ಕೆಲವು ಆಪ್ತರು ತಿಳಿಸಿದ್ದಾರೆ...

Published: 11th June 2019 12:00 PM  |   Last Updated: 11th June 2019 12:28 PM   |  A+A-


Girish Karnad

ಗಿರೀಶ್ ಕಾರ್ನಾಡ್

Posted By : SD SD
Source : The New Indian Express
ಧಾರವಾಡ: ನಾಟಕ ಬರಹಗಾರ ಗಿರೀಶ್ ಕಾರ್ನಾಡ್ ಅವರಿಗೆ ಧಾರವಾಡದ ಬಗ್ಗೆ ಯಾವಾಗಲೂ ವಿಶೇಷ ಬಾಂಧವ್ಯವಿತ್ತು ಎಂದು ಅವರ ಕೆಲವು ಆಪ್ತರು ತಿಳಿಸಿದ್ದಾರೆ.

ಕಾರ್ನಾಡ್ ಅವರು ಮಹಾರಾಷ್ಟ್ರದಲ್ಲೇ ಜನಿಸಿದ್ದರೂ ಬೆಳೆದದ್ದು ಶಿರಸಿಯಲ್ಲಿ ಹಾಗೂ ಉನ್ನತ ವಿಧ್ಯಾಭ್ಯಾಸ ಪೂರ್ಣಗೊಳಿಸಿದ್ದು, ಇಂಗ್ಲೆಂಡ್ ನಲ್ಲಿ, ಆದರೆ ಅವರ ಹೃದಯದಲ್ಲಿ ಧಾರವಾಡದ ಬಗ್ಗೆ  ಅವರ ಹೃದಯದಲ್ಲಿ ವಿಶೇಷ ಪ್ರೀತಿಯಿತ್ತು. 1960 ರಲ್ಲಿ ಕಾರ್ನಾಡರು ಬರೆದ ಯಯಾತಿ ನಾಟಕ ಮೊದಲು ಪ್ರಕಟವಾಗಿದ್ದು ಧಾರವಾಡದಲ್ಲಿ,  ಆ ಕೃತಿಗೆ 1962 ರಲ್ಲಿ ಮೈಸೂರು ರಾಜ್ಯ ಪ್ರಶಸ್ತಿ ಕೂಡ ದೊರಕಿತು,

ದ.ರಾ ಬೇಂದ್ರೆ, ವಿ.ಕೃ ಗೋಕಾಕ್  ಅಂತಹ ಪ್ರಸಿದ್ಧ ಲೇಖಕರು ಧಾರವಾಡದಿಂದ ಬಂದವರು, ಹೀಗಾಗಿ ಕಾರ್ನಾಡ್ ಅವರಿಗೂ  ಬರೆಯಲು ಧಾರವಾಡ ಪ್ರೇರೇಪಿಸಿತು.ಹೀಗಾಗಿ ಕಾರ್ನಾಡ್  ಅವರಿಗೆ ಧಾರವಾಡದ ಮೇಲೆ ವಿಶೇಷ ಒಲವಿತ್ತು. ಧಾರವಾಡದಲ್ಲಿ ಆರು ವರ್ಷ ವಾಸವಿದ್ದರು ಅವರ ಸರಳತೆಯಿಂದಾಗಿ ಜನರು ಅವರಿಗೆ ತುಂಬಾ ಹತ್ತಿರವಾಗಿದ್ದರು.

ಕೆಲವು ವಿಷಯಗಳ ಬಗ್ಗೆ ಅವರು ನಿರ್ಧಿಷ್ಠವಾಗಿದ್ದರು ತಮ್ಮ ಚಪ್ಪಲಿಯನ್ನು  ಒಂದೇ ಅಂಗಡಿಯಲ್ಲಿ  ರಿಪೇರಿ ಮಾಡಿಸಿಕೊಳ್ಳುತ್ತಿದ್ದರು, ಮನೋಹರ್ ಗ್ರಂಥಮಾಲಾ ಎದುರಿನ ಮಹಿಳೆ ಬಳಿ ಮಾತ್ರವೇ  ಜಾಮೂನು ಮತ್ತು ಹಣ್ಣುಗಳನ್ನು ಖರೀದಿಸುತ್ತಿದ್ದರು, ಅವರು ಜನಪ್ರಿಯವಾದ ನಂತರವೂ ಕೂಡ ಅದೇ ಅಂಗಡಿಯಂದ ಖರೀದಿಸುತ್ತಿದ್ದರು, ಗ್ರಂಥಮಾಲಾದಲ್ಲಿನ ಎಲ್ಲಾ  ಜನರ ಜೊತೆ ಬೆರೆಯುತ್ತಿದ್ದರು.

ಧಾರವಾಡದಲ್ಲಿ ರಂಗಭೂಮಿಗೆ ಹೆಚ್ಚಿನ ಆಸಕ್ತಿ ಮೂಡಿತು.ಕಲಾಭವನ ಮತ್ತು ಶ್ರೀರಂಗ ಸಭಾಂಗಣಗಳು ಕಾರ್ನಾಡ್ ಅವರಿಂದ ಅಭಿವೃದ್ಧಿಗೊಂಡಿತು. ತೀರ ಹದಗೆಟ್ಟ ಪರಿಸ್ಥಿತಿಯಲ್ಲಿದ್ದ ಕಟ್ಟಡಗಳ ನವೀಕರಣ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಶ್ರೀಜನ ಸಭಾಂಗಣದಲ್ಲಿ ವೃತ್ತಿಪರ ಕಲಾವಿದರಿಗಾಗಿ 1 ಲಕ್ಷ ರು ಹಣ ಡೆಪಾಸಿಟ್ ಇಟ್ಟಿದ್ದರು. ಈ ಹಣದಿಂದ ಕಲಾವಿದರು ಸಭಾಂಗಣದ ಬಾಡಿಗೆ ಕಟ್ಟುತ್ತಿದ್ದರು. ಕನ್ನಡ ಸಾಹಿತ್ಯ ಸಂಭ್ರಮ ಕಾರ್ನಾಡ್ ಅವರ ಕನಸಿನ ಕೂಸಾಗಿತ್ತು ಎಂದು ಹೇಳಿದ್ದಾರೆ. 
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp