ಐಎಂಎ ಜ್ಯುವೆಲ್ಸ್ ಮಾಲೀಕ ಜೊತೆ ಸಿಎಂ ಊಟ ಮಾಡುತ್ತಿರುವ ಫೋಟೋ ವೈರಲ್: ಇದಕ್ಕೆ ಕುಮಾರಸ್ವಾಮಿ ಹೇಳಿದ್ದೇನು?

ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣ ಹೊಸ ರಾಜಕೀಯ ತಿರುವು ...
ಐಎಂಎ ಮಾಲೀಕ ಮನ್ಸೂರ್ ಖಾನ್ ಜೊತೆ ಊಟ ಮಾಡುತ್ತಿರುವ ಸಿಎಂ ಕುಮಾರಸ್ವಾಮಿ(ಸಂಗ್ರಹ ಚಿತ್ರ)
ಐಎಂಎ ಮಾಲೀಕ ಮನ್ಸೂರ್ ಖಾನ್ ಜೊತೆ ಊಟ ಮಾಡುತ್ತಿರುವ ಸಿಎಂ ಕುಮಾರಸ್ವಾಮಿ(ಸಂಗ್ರಹ ಚಿತ್ರ)
ಬೆಂಗಳೂರು: ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣ ಹೊಸ ರಾಜಕೀಯ ತಿರುವು ಪಡೆದುಕೊಂಡಿದೆ. ಪ್ರರಕರಣ ಬೆಳಕಿಗೆ ಬಂದು ಸಾವಿರಾರು ಮಂದಿ ಹೂಡಿಕೆದಾರರು ಜ್ಯುವೆಲ್ಲರಿ ಸಂಸ್ಥೆಯ ಮಾಲೀಕ ಮನ್ಸೂರ್ ಖಾನ್ ವಿರುದ್ಧ ದೂರು ದಾಖಲಿಸಿದರೆ ಇತ್ತ ಬಿಜೆಪಿ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಹಿಂದೆ ಮನ್ಸೂರ್ ಖಾನ್ ಜೊತೆ ಕುಳಿತು ಊಟ ಮಾಡುತ್ತಿದ್ದ ಫೋಟೋವನ್ನು ಶೇರ್ ಮಾಡಿದೆ.
ನಾನು ತಿನ್ನುವಾಗ, ನೀನು ಕೂಡ ತಿನ್ನು ಎಂಬುದು ಜೆಡಿಎಸ್ ನ ಜೀವನ ಕ್ರಮವಾಗಿದೆ. ಮೊಹಮ್ಮದ್ ಮನ್ಸೂರ್ ಖಾನ್ ನಂತೆ ತಿಂದು, ಲೂಟಿ ಮಾಡಿ ಓಡಿ ಹೋಗಿ ಎಂಬ ಧೋರಣೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮನ್ಸೂರ್ ಖಾನ್ ಜೊತೆ ಕುಳಿತುಕೊಂಡು ಊಟ ಮಾಡುವ ಫೋಟೋ ಹೇಳುತ್ತದೆ ಎಂದು ಬರೆದು ಬಿಜೆಪಿ ಶೇರ್ ಮಾಡಿದೆ. ತಕ್ಷಣ ಅದು ವೈರಲ್ ಆಗಿದ್ದು 300 ಸಲ ಶೇರ್ ಆಗಿ ಸಾವಿರ ಮಂದಿ ಲೈಕ್ ಕೊಟ್ಟಿದ್ದಾರೆ.
ಇದಕ್ಕೆ ಜೆಡಿಎಸ್ ಮತ್ತು ಸಿಎಂ ಕುಮಾರಸ್ವಾಮಿ ತಕ್ಷಣವೇ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸಾಂದರ್ಭಿಕಕ್ಕೆ ಹೊರತಾಗಿ ಹಳೆಯ ಫೋಟೋವನ್ನು ಬಿಜೆಪಿ ಬಳಸಿಕೊಂಡು ಜನರನ್ನು ದಾರಿತಪ್ಪಿಸಲು ಹೊರಟಿದೆ. ಇದು ಬಿಜೆಪಿಯ ಟ್ರೋಲ್ ತಂತ್ರಗಾರಿಕೆ. ಐಎಂಎ ವಂಚನೆ ಒಂದು ಗಂಭೀರ ಪ್ರಕರಣವಾಗಿದ್ದು ತಪ್ಪಿತಸ್ಫರನ್ನು ಶಿಕ್ಷಿಸಲಾಗುವುದು ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com