ಐಎಂಎ ಜ್ಯುವೆಲ್ಲರಿಯಿಂದ 2 ಸಾವಿರ ಕೋಟಿ ರು. ವಂಚನೆ: 8 ಸಾವಿರ ದೂರು ದಾಖಲು

ಐಎಂಎ ಜ್ಯುವೆಲ್ಸ್ ನ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಸಂಜೆಯವರೆಗೆ 8 ಸಾವಿರ ದೂರುಗಳು ದಾಖಲಾಗಿದ್ದು, ದೂರುಗಳ...
ದೂರುಗಳು
ದೂರುಗಳು
ಬೆಂಗಳೂರು: ಐಎಂಎ ಜ್ಯುವೆಲ್ಸ್ ನ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಸಂಜೆಯವರೆಗೆ 8 ಸಾವಿರ ದೂರುಗಳು ದಾಖಲಾಗಿದ್ದು, ದೂರುಗಳ ಸಂಖ್ಯೆ ಇನ್ನೂ ಹೆಚ್ಚುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಐಎಂಎ ಕಂಪನಿಯಲ್ಲಿ ಸಾವಿರಾರು ಜನ ಹೂಡಿಕೆ ಮಾಡಿದ್ದು, 2 ಸಾವಿರ ಕೋಟಿ ರುಪಾಯಿಗೂ ಹೆಚ್ಚು ವಂಚನೆ ನಡೆದಿದೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ವಹಿಸಿದ್ದು, ತನಿಖಾ ತಂಡ ಐಎಂಎ ಮಾಲೀಕ, ವ್ಯವಸ್ಥಾಪಕ ನಿರ್ದೇಶ ಮೊಹಮ್ಮದ್ ಮನ್ಸೂರ್ ಖಾನ್ ಹಾಗೂ ಆತನ ಸಂಬಂಧಿಗಳು ಸೇರಿದಂತೆ ನಾಲ್ವರು ನಿರ್ದೇಶಕರಿಗಾಗಿ ತೀವ್ರ ಶೋಧ ನಡೆಸುತ್ತಿದೆ.
ಐಎಂಎ ಮಾಲೀಕ ಮುಹಮ್ಮದ್ ಮನ್ಸೂರ್ ಖಾನ್ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿ ಆಡೀಯೋವೊಂದನ್ನು ಅಜ್ಞಾತಸ್ಥಳದಿಂದ ಕಳುಹಿಸಿ ನಾಪತ್ತೆಯಾಗಿದ್ದಾರೆ. 
ಐಎಂಎ ಸಂಸ್ಥೆ ಚಿನ್ನಾಭರಣ, ಔಷಧ, ರಿಯಲ್ ಎಸ್ಟೇಟ್ ಸೇರಿದಂತೆ ಹಲವು ವ್ಯವಹಾರಗಳನ್ನು ಮಾಡುತ್ತಿದ್ದು, ಇದೀಗ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದ ಸಾವಿರಾರು ಮಂದಿ ಸಂಕಷ್ಟ ಅನುಭವಿಸುವಂತಾಗಿದೆ.
ಇನ್ನು ನಿಗೂಢವಾಗಿ ನಾಪತ್ತೆಯಾಗಿರುವ ಮನ್ಸೂರ್‌ ಖಾನ್‌ ಪತ್ತೆಗಾಗಿ ಪೊಲೀಸರ ನಾಲ್ಕು ತಂಡಗಳನ್ನು ರಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com