ನಾಪತ್ತೆಯಾಗಿದ್ದ ಎನ್-32 ವಿಮಾನ ಅವಶೇಷ ಪತ್ತೆಗೆ ಮೈಸೂರಿನ ಸಂಸ್ಥೆ ನೀಡಿದ ಸುಳಿವು ಸಹಾಯ ಮಾಡಿತು!

ಅಸ್ಸಾಂನ ಜೊರ್ಹಟ್ ವಿಮಾನ ನಿಲ್ದಾಣನಿಂದ ಟೇಕ್ ಆಫ್ ಆಗಿದ್ದ ಭಾರತೀಯ ವಾಯುಪಡೆಯ ಎನ್-32 ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ಅಸ್ಸಾಂನ ಜೊರ್ಹಟ್ ವಿಮಾನ ನಿಲ್ದಾಣನಿಂದ ಟೇಕ್ ಆಫ್ ಆಗಿದ್ದ ಭಾರತೀಯ ವಾಯುಪಡೆಯ ಎನ್-32 ಮಿಲಿಟರಿ ಸಾಗಣೆ ಯುದ್ಧ ವಿಮಾನ ಜೂನ್ 3ರಂದು ನಿಗೂಢವಾಗಿ ಕಣ್ಮರೆಯಾದ ನಂತರ ಅದರ ಅವಶೇಷಗಳನ್ನು ಪತ್ತೆಹಚ್ಚುವಲ್ಲಿ ನೆರವಾಗಿದ್ದು ಮೈಸೂರು ಮೂಲದ ಸ್ಯಾಟಲೈಟ್ ಇಮೇಜಿಂಗ್ ಕಂಪೆನಿ.
ಭಾರತೀಯ ವಾಯುಪಡೆಯ 14 ಸಿಬ್ಬಂದಿಗಳನ್ನು ಹೊತ್ತು ಸಾಗಿದ್ದ ಎನ್-32 ಮಿಲಿಟರಿ ವಿಮಾನ ಎಲ್ಲಿ ಕಣ್ಮರೆಯಾಗಿದೆ ಎಂದು ಸರಿಯಾದ ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಭಾರತೀಯ ವಾಯುಪಡೆ ಘೋಷಿಸಿತ್ತು. ಮೈಸೂರು ಮೂಲದ ಅಕ್ವ ಜಿಯೊ ಕನ್ಸಲ್ಟೆನ್ಸಿ ಕಂಪೆನಿ ಭಾರತೀಯ ವಾಯುಪಡೆಯ ಈ ಘೋಷಣೆಯನ್ನು ಸವಾಲಾಗಿ ಸ್ವೀಕರಿಸಿ ಅದರ ವೃತ್ತಿನಿರತ ತಂಡ ವಿಮಾನ ಟೇಕ್ ಆಫ್ ಆದ ನಂತರ 200 ಚದರ ಕಿಲೋ ಮೀಟರ್ ನಿಂದ 2,050ಚದರ ಕಿಲೋ ಮೀಟರ್ ವರೆಗೆ ಶೂನ್ಯದಲ್ಲಿ ಕಣ್ಮರೆಯಾಗಿದೆ ಎಂದು ವರದಿಯನ್ನು ಕಳುಹಿಸಿತ್ತು. 
ವರದಿಯನ್ನು ನೋಡಿದ ಭಾರತೀಯ ವಾಯುಪಡೆ ಅಧಿಕಾರಿಗಳು ಕಂಪೆನಿಯನ್ನು ಮತ್ತಷ್ಟು ಸಂಪರ್ಕಿಸಿ ವಿಮಾನ ಎಲ್ಲಿ ಕಣ್ಮರೆಯಾಯಿತು ಎಂದು ಸರಿಯಾದ ಜಾಗವನ್ನು ಪತ್ತೆಮಾಡಲು ಸಹಕರಿಸಿದರು, ಆಗ ಮ್ಯಾಪಿಂಗ್ ಮಾಡಿ ನೋಡುವಾಗ ಅದು ಹಿಮಾಚಲ ಪ್ರದೇಶದ ಲಿಪೊ ಎಂಬಲ್ಲಿ ಪತನವಾಗಿದೆ ಎಂದು ಗೊತ್ತಾಯಿತು. ಸಂಸ್ಥೆ ನೀಡಿದ ಸ್ಥಳವು ವಿಮಾನದ ಅವಶೇಷ ಸಿಕ್ಕಿದ 17 ಕಿಲೋ ಮೀಟರ್ ದೂರದಲ್ಲಿದೆ. 
ವಿಮಾನ ಕಣ್ಮರೆಯಾದ ನಂತರ 5ನೇ ದಿನ ಸಾರ್ವಜನಿಕರ ಸಹಕಾರವನ್ನು ಭಾರತೀಯ ವಾಯುಪಡೆ ಕೋರಿತ್ತು. ವಿಮಾನ ಹಾರಾಟದ ಮಾರ್ಗ ಮತ್ತು ಕಣ್ಮರೆಯಾದ ಮಾರ್ಗವನ್ನು ಮ್ಯಾಪ್ ಮಾಡಿದಾಗ ತಾರ್ಕಿಕವಾಗಿ ಆಲೋಚಿಸಿ ವಿಮಾನದ ದಾರಿ ಮತ್ತು ಅದು ಕಣ್ಮರೆಯಾದ ಸ್ಥಳವನ್ನು ಹುಡುಕಿದೆವು ಎನ್ನುತ್ತಾರೆ ಅಕ್ವ ಜಿಯೊ ಕನ್ಸಲ್ಟೆನ್ಸಿಯ ಭೂಗರ್ಭ ಇಲಾಖೆ ನಿರ್ದೇಶಕ ಆರ್ ಎಂ ಅನನ್ಯ ವಾಸುದೇವ.
ಭಾರತೀಯ ವಾಯುಪಡೆಗೆ ಕಣ್ಮರೆಯಾದ ವಿಮಾನದ ಬಗ್ಗೆ ಸುಮಾರು 400 ಮಾಹಿತಿಗಳು ಬಂದಿದ್ದವು. ಅವುಗಳಲ್ಲಿ ಮೈಸೂರಿನ ಜಿಯೊ ಕನ್ಸಲ್ಟೆನ್ಸಿ ಕಂಪೆನಿಯದ್ದು ಸಮೀಪವಾಗಿತ್ತು. ಅದು ವಾಯುಪಡೆ ಅಧಿಕಾರಿಗಳಿಗೆ ವಿಮಾನದ ಅವಶೇಷಗಳನ್ನು ಪತ್ತೆಹಚ್ಚಲು ನೆರವಾಯಿತು.
ವಿಮಾನ ಕಣ್ಮರೆಯಾಗಿದೆ ಎಂದು ಸುದ್ದಿ ಗೊತ್ತಾದ ಕೂಡಲೇ ನಮ್ಮ ತಂಡ ಇರುವ ಸಂಪನ್ಮೂಲ ಬಳಸಿಕೊಂಡು ವಿಮಾನವನ್ನು ಪತ್ತೆಹಚ್ಚಲು ಸತತವಾಗಿ ಪರಿಶ್ರಮಿಸಿತ್ತು. ಹಣ ಅಥವಾ ಬಹುಮಾನ ಸಿಗುತ್ತದೆ ಎಂಬ ದೃಷ್ಟಿಯಿಂದ ನಾವಿದನ್ನು ಮಾಡಿಲ್ಲ ಎನ್ನುತ್ತಾರೆ ಅನನ್ಯ ವಾಸುದೇವ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com