ಬೆಂಗಳೂರು: ಸರ್ಕಾರಿ ಶಾಲೆಯಾಗಿ ಪುನಾರಂಭವಾಗಲಿದೆ ಐಎಂಎ ಸ್ಕೂಲ್

ಐಎಂಎ ಸಮೂಹ ಸಂಸ್ಥೆ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ನಡೆಸುತ್ತಿದ್ದ ಶಿವಾಜಿನಗರದ ಸರ್ಕಾರಿ ‘ವಿಕೆಒ’ ಶಾಲೆಯ ಸುಮಾರು 70 ಬೋಧಕ ಹಾಗೂ ಬೋಧಕೇತರ ...
ಐಎಂಎ ದತ್ತು ಪಡೆದಿದ್ದ ಶಾಲೆ
ಐಎಂಎ ದತ್ತು ಪಡೆದಿದ್ದ ಶಾಲೆ
ಬೆಂಗಳೂರು: ಐಎಂಎ ಸಮೂಹ ಸಂಸ್ಥೆ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ನಡೆಸುತ್ತಿದ್ದ ಶಿವಾಜಿನಗರದ ಸರ್ಕಾರಿ ‘ವಿಕೆಒ’ ಶಾಲೆಯ ಸುಮಾರು 70 ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ತಮ್ಮ  ನೌಕರಿ ಕಳೆದುಕೊಳ್ಳಲಿದ್ದಾರೆ. 
ಶಿವಾಜಿನಗರದಲ್ಲಿರುವ ಈ ಶಾಲೆಯನ್ನು 2017 ರಲ್ಲಿ ಐಎಎ ಗ್ರೂಪ್ ಆಫ್ ಕಂಪನಿ ದತ್ತು ತೆಗೆದುಕೊಂಡಿತ್ತು.ಸುಮಾರು 1 ಸಾವಿರ ವಿದ್ಯಾರ್ಥಿಗಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ, ಆ ಮಕ್ಕಳ ಭವಿಷ್ಯ ಹಾಳಾಗಬಾರದೆಂಬ ಕಾರಣದಿಂದಾಗಿ ಸರ್ಕಾರ ಶಾಲೆಯನ್ನು ಮತ್ತೆ ಪುನಾರಂಭಿಸಲು ಎಲ್ಲಾ ರೀತಿಯ ಕ್ರಮಗಳನ್ನು ಆರಂಭಿಸಿದೆ,
ವಿಕೆಒ’ಶಾಲೆಗೆ ನೂತನವಾಗಿ 21 ಮಂದಿ ಶಿಕ್ಷಕರನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿರ್ದೇಶನದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ನಿಯೋಜಿಸಿದ್ದು, ಜೂ.14ರ ಶುಕ್ರವಾರದಿಂದ ಎಂದಿನಂತೆ ಶಾಲೆ ಕಾರ್ಯಾರಂಭಿಸಲಿದೆ
ಕಳೆದ ಎರಡು ದಿನಗಳಿಂದ ಶಾಲೆ ಮುಚ್ಚಿದ್ದ ಕಾರಣ ಪೋಷಕರು ಆತಂಕಗೊಂಡಿದ್ದರು,  ಮೇ ತಿಂಗಳ ವರೆಗೂ ಇಲ್ಲಿನ ಶಿಕ್ಷಕರಿಗೆ ವೇತನ ನೀಡಲಾಗಿತ್ತು, ಆದರೆ ಈ ತಿಂಗಳ ಸಂಬಂಳ ಸಿಗುತ್ತೋ ಇಲ್ಲವೋ ಎಂಬ ಬಗ್ಗೆ ಅವರಿಗೆ ಅನುಮಾನವಿದೆ. 
ನಮಗೆ ಸಂಸಾರವಿದೆ, ನಾವು ಅದರ ಬವಾಬ್ದಾರಿ ಹೊತ್ತಿದ್ದೇವೆ, ಒಂದು ತಿಂಗಳ ನಂತರ ನಮಗೆ ಕಷ್ಟವಾಗುತ್ತದೆ, ನಮ್ಮ ಹಲವು ದಾಖಲಾತಿಗಳು ಐಎಂಎ ಬಳಿಯಿವೆಅ ವುಗಳನ್ನು ವಾಪಸ್ ಕೊಡಿಸುವಂತೆ ಪೊಲೀಸರ ಬಳಿ ಮನವಿ ಮಾಡಿರುವುದಾಗಿ ಶಿಕ್ಷಕಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com