ಎಸ್‍ಎಸ್‍ಆರ್ ವಿಎಂ ನಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆ

ಬೆಂಗಳೂರು ಪೂರ್ವದ ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರದಲ್ಲಿ ಸ್ಕೈರಿಮ್ ಇನ್ನೊವೇಷನ್ ರೂಪಿಸಿದ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟಿಸಲಾಯಿತು.
ಲ್ಯಾಬ್ ಅನ್ನು ಅಟಲ್ ಇನ್ನೊವೇಷನ್ ಮಿಷನ್‍ನ ಹೆಡ್ ಆಫ್ ಆಪರೇಷನ್ಸ್ ಡಾ.ಉನ್ನತ್ ಪಂಡಿತ್ ಉದ್ಘಾಟಿಸಿದರು.
ಲ್ಯಾಬ್ ಅನ್ನು ಅಟಲ್ ಇನ್ನೊವೇಷನ್ ಮಿಷನ್‍ನ ಹೆಡ್ ಆಫ್ ಆಪರೇಷನ್ಸ್ ಡಾ.ಉನ್ನತ್ ಪಂಡಿತ್ ಉದ್ಘಾಟಿಸಿದರು.

ಬೆಂಗಳೂರು ಪೂರ್ವದ ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರದಲ್ಲಿ ಸ್ಕೈರಿಮ್ ಇನ್ನೊವೇಷನ್ ರೂಪಿಸಿದ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟಿಸಲಾಯಿತು.

ಈ ಲ್ಯಾಬ್ ಅನ್ನು ಅಟಲ್ ಇನ್ನೊವೇಷನ್ ಮಿಷನ್‍ನ ಹೆಡ್ ಆಫ್ ಆಪರೇಷನ್ಸ್ ಡಾ.ಉನ್ನತ್ ಪಂಡಿತ್ ಉದ್ಘಾಟಿಸಿದರು. ಡಾ.ಪಂಡಿತ್ ಈ ಉಪಕ್ರಮದ ಉದ್ದೇಶ ಕುತೂಹಲ, ಸೃಜನಶೀಲತೆ ಮತ್ತು ಕಲ್ಪನಾಶಕ್ತಿಯನ್ನು ಯುವ ಮನಸ್ಸುಗಳನ್ನು ತರುವುದು ಮತ್ತು ಡಿಸೈನ್ ಮೈಂಡ್‍ಸೆಟ್, ಕಂಪ್ಯುಟೇಷನ್ ಥಿಂಕಿಂಗ್, ಅಡಾಪ್ಟಿವ್ ಲರ್ನಿಂಗ್, ಫಿಸಿಕಲ್ ಕಂಪ್ಯೂಟಿಂಗ್ ಇತ್ಯಾದಿ ಕೌಶಲ್ಯಗಳನ್ನು ರೂಪಿಸುವುದು ಎಂದರು.

ಈ ಸಂದರ್ಭದಲ್ಲಿ ಬೆಂಗಳೂರು ಸಹೋದಯ ಸ್ಕೂಲ್ ಕಾಂಪ್ಲೆಕ್ಸ್ ಅಧ್ಯಕ್ಷರು ಮತ್ತು ಪ್ರಾಂಶುಪಾಲೆಯಾದ ಶ್ರೀಮತಿ ಮನಿಲಾ ಕರ್ವಾಲೊ, ಬೆಂಗಳೂರು ಪೂರ್ವದ ಶ್ರೀ ರವಿಶಂಕರ್ ವಿದ್ಯಾಮಂದಿರ್‍ನ ಪ್ರಾಂಶುಪಾಲೆ ಡಾ.ರೇಷ್ಮಾ ಗಣೇಶ್ ಮತ್ತು ಸ್ಕೈರಿಮ್ ಇನ್ನೊವೇಷನ್‍ನ ಸಿಇಒ ಶ್ರೀ ಸಂತೋಷ್ ಕುಮಾರ್ ಮಿಶ್ರಾ ಉಪಸ್ಥಿತರಿದ್ದರು.
ಅಟಲ್ ಟಿಂಕರಿಂಗ್ ಲ್ಯಾಬ್ಸ್ (ಎಟಿಎಲ್) ಕುರಿತು: 2017ರ ವರ್ಷದಲ್ಲಿ ನೀತಿ ಆಯೋಗದ ಅಟಲ್ ಇನ್ನೊವೇಷನ್ ಮಿಷನ್ ಭಾರತದಲ್ಲಿ 1500 ಶಾಲೆಗಳು ಅಟಲ್ ಟಿಂಕರಿಂಗ್ ಲ್ಯಾಬ್ಸ್ ಪಡೆಯಲಿವೆ ಎಂದು ಪ್ರಕಟಿಸಿದ್ದು ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಉದ್ಯಮಶೀಲತೆ ಮತ್ತು ಆವಿಷ್ಕಾರವನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಅಂದಿನಿಂದ ಎಟಿಎಲ್‍ಗಳು ಶೇ.98ರಷ್ಟು ಸ್ಮಾರ್ಟ್ ಸಿಟಿಗಳಿಗೆ ಮತ್ತು ಶೇ.93ಕ್ಕೂ ಹೆಚ್ಚು ಜಿಲ್ಲೆಗಳಿಗೆ (655ಕ್ಕೂ ಹೆಚ್ಚು ಜಿಲ್ಲೆಗಳು) ವಿಸ್ತರಿಸಿವೆ. ಈ ಬೃಹತ್ ಆವಿಷ್ಕಾರದ ಚಳವಳಿಗೆ ಬೆಂಗಳೂರು ಪೂರ್ವದ ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರ್ ಸೇರ್ಪಡೆಯಾಗಿದೆ. 
ಈ ಲ್ಯಾಬ್ ಅನ್ನು ಈ ಕ್ಷೇತ್ರದ ಮುಂಚೂಣಿಯ ಕಂಪನಿಗಳಲ್ಲಿ ಒಂದಾದ ಸ್ಕೈರಿಮ್ ಇನ್ನೊವೇಷನ್ ರೂಪಿಸಿದೆ. ಸ್ಕೈರಿಮ್ ಇನ್ನೊವೇಷನ್ ಬೆಂಗಳೂರಿನಲ್ಲಿ ಮುಖ್ಯ ಕಛೇರಿ ಹೊಂದಿರುವ ತಂತ್ರಜ್ಞಾನ ಕಂಪನಿಯಾಗಿದೆ ಮತ್ತು ಅಟಲ್ ನೀತಿ ಆಯೋಗದ ಮಾರ್ಗದರ್ಶಿ ಸೂತ್ರಗಳ ಅನ್ವಯ ಟಿಂಕರಿಂಗ್ ಲ್ಯಾಬ್ಸ್ ರೂಪಿಸುವಲ್ಲಿ ವಿಶೇಷ ಪರಿಣಿತಿ ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com