ಯಡಿಯೂರಪ್ಪ ಆಡಿಯೋ ಸಿಡಿ ಪ್ರಕರಣ: ವಿಚಾರಣೆ ಮುಂದೂಡಿದ ಹೈಕೋರ್ಟ್

ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಇತರೆ ಮೂವರ ವಿರುದ್ಧದ ಆಡಿಯೋ ಸಿಡಿ ಪ್ರಕರಣದ ವಿಚಾರಣೆಯನ್ನು ಕಲಬುರ್ಗಿ ಹೈಕೋರ್ಟ್ ಪೀಠ ಮುಂದೂಡಿದೆ.
ಯಡಿಯೂರಪ್ಪ
ಯಡಿಯೂರಪ್ಪ
ಕಲಬುರ್ಗಿ: ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಇತರೆ ಮೂವರ ವಿರುದ್ಧದ ಆಡಿಯೋ ಸಿಡಿ ಪ್ರಕರಣದ ವಿಚಾರಣೆಯನ್ನು ಕಲಬುರ್ಗಿ ಹೈಕೋರ್ಟ್ ಪೀಠ ಮುಂದೂಡಿದೆ.
ಆಡಿಯೋ ಪ್ರಕರಣದ ಮಧ್ಯಂತರ ತಡೆಯಾಜ್ಞೆ ತೆರವು ಪ್ರಕರಣ ವಿಚಾರಣೆ ಕಲಬುರ್ಗಿ ಪೀಠದಲ್ಲಿ ನಡೆಯುತ್ತಿದ್ದು ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಜುಲೈ 1ಕ್ಕೆ ನಿಗದಿಪಡಿಸಿದೆ.
ನ್ಯಾಯಮೂರ್ತಿ ಅಶೋಕ ಜಿ. ನಿಜಗುಣನವರ್ ಅವರನ್ನೊಳಗೊಂಡ ಪೀಠ ಸೋಮವಾರ ಈ ಸಂಬಂಧ ವಿಚಾರಣೆ ನಡೆಸಿದೆ. ಚುನಾವಣೆ ವೆಚ್ಚಕ್ಕಾಗಿ 10 ಕೋಟಿ ರು. ಲಂಚ ನೀಡುವುದಾಗಿ ಆಮಿಷ ಒಡ್ಡಿದ್ದರೆನ್ನಲಾಗಿರುವ ಯಡಿಯೂರಪ್ಪ ಅವರ ಧ್ವನಿಯನ್ನೊಳಗೊಂಡ ಆಡಿಯೋ ಸಿಡಿ ಪ್ರಕರಣ ಇದಾಗಿದೆ. ಶರಣಗೌಡ ನಾಗನಗೌಡ ಕಂದಕೂರ ಎಂಬುವವರು ಈ ಸಂಬಂಧ ಸೂಕ್ತ ತನಿಖೆಗಾಗಿ ಹೈಕೋರ್ಟ್ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು.
ವಿಧಾನಸಭೆ ಚುನಾವಣೆ ವೇಳೆ ಯಡಿಯೂರಪ್ಪ ಆಮಿಷ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದ್ದು ಪ್ರಕರಣದಲ್ಲಿ ಕೋರ್ಟ್ ವಿಧಿಸಿರುವ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಬೇಕು  ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ.
ಇವರ ವಾದ ಮುಗಿಯುವ ಬೇಳೆಗೆ ಕೋರ್ಟ್ ಅವಧಿ ಮುಕ್ತಾಯದ ಸನಿಹ ಬಂದ ಕಾರಣ ನ್ಯಾಯಾಲಯ ಯಡಿಯೂರಪ್ಪ ಹಾಗೂ ಇತರೆ ಮೂವರ ಪರ ವಕೀಲರ ವಾದವನ್ನು ಜುಲೈ 1ರಂದು ಆಲಿಸುವುದಾಗಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com