ಬೆಂಗಳೂರು: ಬಹು ಚರ್ಚಿತ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಕೈಬಿಟ್ಟ ರಾಜ್ಯ ಸರ್ಕಾರ

ಹಲವರ ವಿರೋಧ, ವಿವಾದಗಳಿಂಡಲೇ ಸುದ್ದಿಯಾಗಿದ್ದ ಬೆಂಗಳೂರು ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ರಾಜ್ಯದ ಸಮ್ಮಿಶ್ರ ಸರ್ಕಾರ ಕಡೆಗೂ ಕೈಬಿಟ್ಟಿದೆ.

Published: 18th June 2019 12:00 PM  |   Last Updated: 18th June 2019 07:48 AM   |  A+A-


File Image

ಸಂಗ್ರಹ ಚಿತ್ರ

Posted By : RHN RHN
Source : Online Desk
ಬೆಂಗಳೂರು: ಹಲವರ ವಿರೋಧ, ವಿವಾದಗಳಿಂಡಲೇ ಸುದ್ದಿಯಾಗಿದ್ದ ಬೆಂಗಳೂರು ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ರಾಜ್ಯದ ಸಮ್ಮಿಶ್ರ ಸರ್ಕಾರ ಕಡೆಗೂ ಕೈಬಿಟ್ಟಿದೆ.ಕರ್ನಾಟಕ ಹೈಕೋರ್ಟ್‌ಗೆ ಮಂಗಳವಾರ ಈ ಸಂಬಂಧ ಪ್ರಮಾಣಪತ್ರ ಸಲ್ಲಿಸಿರುವ ಸರ್ಕಾರ ಉಕ್ಕಿನ ಸೇತುವೆ ನಿರ್ಮಾಣ ಯೋಜನೆಯಿಂದ ಹಿಂದೆ ಸರಿಯುವುದಾಗಿ ಹೇಳಿದೆ.

ಮೂರು ವರ್ಷಗಳ ಹಿಂದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನ ಬಸವೇಶ್ವರ ವೃತ್ತ-ಹೆಬ್ಬಾಳ ನಡುವೆ ಉಕ್ಕಿನ ಸೇತುವೆ ನಿರ್ಮಾಣ ಮಾಡಲು ಯೋಜನೆ ತಯಾರಿಸಲಾಗಿತ್ತು. 

ಆದರೆ ಈ ಯೋಜನೆ ಕಾರಣ ನಗರದಲ್ಲಿ ನೂರಾರು ಮರಗಳು ನಾಶವಾಗಲಿದೆ, ಹಾಗೆಯೇ ಈ ಯೋಜನೆ ಜಾರಿಯಿಂಡ ನಾಗರಿಕರಿಗೆ ಅನುಕೂಲವಾಗುವುದಕ್ಕಿಂತ ಹಾನಿಯೇ ಹೆಚ್ಚಾಗಲಿದೆ ಎಂದು  ವಿಜ್ಞಾನಿಗಳು, ಪರಿಸರವಾದಿಗಳು ಸೇರಿ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಯೋಜನೆ ಜಾರಿ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹಾಗೂ ನ್ಯಾಯಾಲಯದ ಮೊರೆ ಹೋಗಲಾಗಿತ್ತು.

ಇಷ್ತಾದರೂ ಸಿದ್ದರಾಮಯ್ಯ ಸರ್ಕಾರದ ಈ ಯೋಜನೆಗೆ ಕಳೆದ ವರ್ಷ ಅಧಿಕಾರಕ್ಕೆ ಬಂದ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಸಹ ಸದ್ದಿಲ್ಲದೆ ಅನುಮೋದನೆ ನೀಡಿತ್ತು. ಆದರೆ ಇಂದು ಸರ್ಕಾರ ಅಂತಿಮವಾಗಿ ತಾನು ಬಹುಕೋಟಿ ವೆಚ್ಚದ ಈ ಯೋಜನೆ ಜಾರಿಯಿಂದ ಹಿಂದೆ ಸರಿಯುವುದಾಗಿ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದೆ. ಇದರಿಂದಾಗಿ ಪರಿಸರವಾದಿಗಳು ಹಾಗೂ ಸಾರ್ವಜನಿಕರ ಹೋರಾಟಕ್ಕೆ ಜಯ ಲಭಿಸಿದಂತಾಗಿದೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp