ಚಪ್ಪಲಿ ಹಾಕಿ ಗ್ರಾಮ ಪ್ರವೇಶಿಸುವಂತಿಲ್ಲ, ಸಲೂನ್ ಗೂ ಕಾಲಿಡುವಂತಿಲ್ಲ: ಮೈಸೂರು ಜಿಲ್ಲೆಯಲ್ಲಿ ಮೇಲ್ಜಾತಿಯವರ ದರ್ಬಾರ್

ಮೈಸೂರಿನ ರಟ್ಟೆಹಳ್ಳಿ ಗ್ರಾಮದಲ್ಲಿ ಮೇಲ್ಜಾತಿ ವರ್ಗದ ಜನ ದಲಿತ ಸಮುದಾಯವನ್ನು ಅತ್ಯಂತ ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮೈಸೂರು: ಆಧುನಿಕ ಭಾರತದ ಚಿನ್ನಾಭರಣಗಳಲ್ಲಿ ಅತಿ ಹೆಚ್ಚಿನ ಡಿಮ್ಯಾಂಡ್ ಯೂರೇನಿಯಂ ಲೋಹಕ್ಕಿದೆ. ಯೂರೇನಿಯಂ ಪುಷ್ಟೀಕರಣ ಘಟಕ ಇರುವ ಮೈಸೂರಿನ ರಟ್ಟೆಹಳ್ಳಿ ಗ್ರಾಮದಲ್ಲಿ ಮೇಲ್ಜಾತಿ ವರ್ಗದ ಜನ ದಲಿತ ಸಮುದಾಯವನ್ನು ಅತ್ಯಂತ ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ.
ದಲಿತ ಮಂದಿ ಚಪ್ಪಲಿ ಹಾಕಿಕೊಂಡು ಮೇಲ್ಜಾತಿಯವರು ವಾಸಿಸರುವ ಬೀದಿ ಪ್ರವೇಶಿಸುವಂತಿಲ್ಲ, ಬರಿಗಾಲಲ್ಲೇ ನಡೆದುಕೊಂಡು ಬರಬೇಕು ಇಂಥದೊಂದು ಅಘೋಷಿತ ಕಾನೂನು ಜಾರಿಯಲ್ಲಿದೆ ಎಂದು ಮೈಸೂರು ಜಿಲ್ಲೆ ವಿಚಕ್ಷಣಾ ಮತ್ತು ಜಾಗೃತ ಸಮಿತಿ ಸದಸ್ಯೆ ಪುಟ್ಟಲಕ್ಷ್ಮಿ ತಿಳಿಸಿದ್ದಾರೆ.
ಜಾತಿ ತಾರತಮ್ಯ ಕೇವಲ ಅಲ್ಲಿಗೆ ಮುಗಿದಿಲ್ಲ, ದಲಿತರು ಮೇಲ್ಜಾತಿಯವರ ಹೋಟೆಲ್ ಹಾಗೂ ಹೇರ್ ಸಲೂನ್ ಗೂ ಹೋಗುವಂತಿಲ್ಲ,  ಇದರ ಜೊತೆಗೆ  ಗ್ರಾಮದಲ್ಲಿ ಪಡಿತರ ಚೀಟಿ ಅಡಿಯಲ್ಲಿ ರೇಷನ್ ನೀಡುವ ಪರವಾನಗಿಯನ್ನು ದಲಿತ ಮಹಿಳೆಯೊಬ್ಬರು ಪಡೆದಿದ್ದಾರೆ, ಹೀಗಾಗಿ ದಲಿತರಿಂದ ರೇಷನ್ ಪಡೆಯದ ಮೇಲ್ಜಾತಿ ಜನಕ್ಕಾಗಿ ಊರಿನಲ್ಲಿ ಮತ್ತೊಂದು ರೇಷನ್ ಅಂಗಡಿ ತೆರಯಲಾಗಿತ್ತು. ಇದೇ ಕಾರಣಕ್ಕಾಗಿ ಈ ಗ್ರಾಮ ಹಿಂದೊಮ್ಮೆ ಸುದ್ದಿಯಾಗಿತ್ತು. 
ಒರಿಜಿನಲ್ ಲೈಸೆನ್ಸ್ ನನಗೆ ಸಿಕ್ಕಿದೆ, ನಮ್ಮ ಬಳಿ ಕೇವಲ ದಲಿತರು ಮಾತ್ರ ರೇಷನ್ ಖರೀದಿಸುತ್ತಿದ್ದಾರೆ, ಹೀಗಾಗಿ ಪಡಿತರ ಅಂಗಡಿ ನಡೆಸುವುದು ಕಷ್ಟವಾಗಿದೆ ಎಂದು ಪುಟ್ಟಲಕ್ಷ್ಮಿ ತಿಳಿಸಿದ್ದಾರೆ,
ಈ ಸಂಬಂಧ ಗ್ರಾಮಕ್ಕೆ ಭೇಟಿ ನೀಡಿ, ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com