ಐಎಂಎ ಮಾಲಿಕ, ನಿರ್ದೇಶಕರಿಗೆ ಇ.ಡಿ ನೊಟೀಸ್: ಕೇಂದ್ರದ ಮಧ್ಯಪ್ರವೇಶಕ್ಕೆ ಸಂತ್ರಸ್ತರ ಆಗ್ರಹ

ಸಾವಿರಾರು ಹೂಡಿಕೆದಾರರಿಗೆ ಹಣ ವಾಪಸ್ ನೀಡದೇ ವಂಚನೆ ಮಾಡಿರುವ ಐಎಂಎ ಮಾಲಿಕ ಹಾಗೂ ನಿರ್ದೇಶಕರಿಗೆ ಜೂ.24 ರಂದು ಹಾಜರಾಗುವಂತೆ ನೊಟೀಸ್ ಜಾರಿ ಮಾಡಿದೆ.

ತಲೆಮರೆಸಿಕೊಂಡಿರುವ ಸಂಸ್ಥೆಯ ಎಂಡಿ ಮೊಹಮ್ಮದ್ ಮನ್ಸೂರ್ ಖಾನ್ ಹಾಗೂ ಇತರ 7 ಜನ ನಿರ್ದೇಶಕರಾದ ಅನ್ವರ್ ಪಾಶಾ, ಅರ್ಷದ್ ಖಾ, ದಾದಾ ಪೀರ್, ನವೀದ್ ಅಹ್ಮದ್, ನಾಜಿರ್ ಹುಸೇನ್, ನಿಜಾಮುದ್ದೀನ್ ಹಾಗೂ ವಸೀಮ್ ಗೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ನೊಟೀಸ್ ಜಾರಿ ಮಾಡಲಾಗಿದೆ. 
ಜೂ.24 ರಂದು ಬೆಂಗಳೂರಿನ ತನ್ನ ಕಚೇರಿಗೆ ತಮ್ಮ ಹಾಗೂ ಕುಟುಂಬ ಸದಸ್ಯರ ಬ್ಯಾಂಕ್ ದಾಖಲೆ, ಅವರು ಸದಸ್ಯರಾಗಿರುವ ಸಂಸ್ಥೆಗಳು, ಚರ ಹಾಗೂ ಸ್ಥಿರ ಆಸ್ತಿಯ ಎಲ್ಲಾ ದಾಖಲೆಗಳ ಸಹಿತ ಹಾಜರಾಗಬೇಕೆಂದು ಸೂಚಿಸಲಾಗಿದೆ. 
ಐಎಂಎ ನಿರ್ದೇಶಕರು, ಮಾಲಿಕರು ತೆರಿಗೆ ಪಾವತಿ ಮಾಡಿರುವ ದಾಖಲೆಗಳನ್ನೂ ಹಾಜರುಪಡಿಸಬೇಕೆಂದು ಇಡಿ ಹೇಳಿದೆ. 
ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಹೂಡಿಕೆದಾರರ ಆಗ್ರಹ 
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಹಾಗೂ ಇಡಿ ತನಿಖೆ ನಡೆಸುತ್ತಿದ್ದರೂ ಹೂಡಿಕೆದಾರರ ತಂಡ ಹಾಗೂ ರಾಜ್ಯ ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ. 
ಹಜರತ್ ಟಿಪ್ಪು ಸುಲ್ತಾನ್ ಅಮನ್ ಫೆಡರೇಷನ್ ನ ಸದಸ್ಯರು ಪ್ರಧಾನಿ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಗೆ  ಪತ್ರ ಬರೆದಿದ್ದು, ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com