ಘೋರ ದುರಂತ! ದೇವರಿಗೆಂದು ಹಚ್ಚಿದ್ದ ನಂದಾದೀಪ ಬಾಲಕಿಯ ಪ್ರಾಣವನ್ನೇ ಕಸಿಯಿತು

ಮನೆಯಲ್ಲಿ ದೇವರ ಫೋಟೋ ಮುಂದೆ ಹಚ್ಚಿಟ್ಟ ನಂದಾದೀಪವೇ ಬಾಲಕಿಯ ಪ್ರಾಣವನ್ನೇ ಕಸಿದ ಘೋರ ದುರಂತ ಘಟನೆ ಬೆಳಗಾವಿಯ ಆನಿಗೋಳದಲ್ಲಿ ನಡೆದಿದೆ.

Published: 25th June 2019 12:00 PM  |   Last Updated: 25th June 2019 02:03 AM   |  A+A-


Girl burns alive after setting fire from nandaadeepa at Belagavi

ಘೋರ ದುರಂತ! ದೇವರಿಗೆಂದು ಹಚ್ಚಿದ್ದ ನಂದಾದೀಪ ಬಾಲಕಿಯ ಪ್ರಾಣವನ್ನೇ ಕಸಿಯಿತು

Posted By : RHN RHN
Source : Online Desk
ಬೆಳಗಾವಿ: ಮನೆಯಲ್ಲಿ ದೇವರ ಫೋಟೋ ಮುಂದೆ ಹಚ್ಚಿಟ್ಟ ನಂದಾದೀಪವೇ ಬಾಲಕಿಯ ಪ್ರಾಣವನ್ನೇ ಕಸಿದ ಘೋರ ದುರಂತ ಘಟನೆ ಬೆಳಗಾವಿಯ ಆನಿಗೋಳದಲ್ಲಿ ನಡೆದಿದೆ.

ನಂದಾದೀಪದ ಬೆಂಕಿ ಹಾಸಿಗೆಗೆ ತಗುಲಿ ಹೊತ್ತಿ ಉರಿದ ಕಾರಣ ಕಸ್ತೂರಿ (8) ಸಜೀವವಾಗಿ ದಹನವಾಗಿದ್ದಾಳೆ.

ಸೋಮವಾರ ರಾತ್ರಿ ನಡೆದ ಘಟನೆಯಲ್ಲಿ ಮನೆಯಲ್ಲಿದ್ದ ಬಾಲಕಿಯ ಪೋಷಕರು ಅಪಾಯದಿಂದ ಪಾರಾಗಿದ್ದಾರೆ. ಸುಟ್ಟ ಗಾಯವಾಗಿರುವ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮನೆಯಲ್ಲಿ ಎಲ್ಲರೂ ಮಲಗಿದ್ದ ವೇಳೆ ದೇವರ ದೀಪ ಕೆಳಗೆ ಬಿದ್ದು ಹಾಸಿಗೆಗೆ ತಗುಲಿ ಬೆಂಕಿ ಹೊತ್ತಿದೆ. ಆ ವೇಳೆ ಎಚ್ಚರಗೊಂಡ ಪೋಷಕರು ತಕ್ಷಣ ದೂರ ಸರಿದು ಅಪಾಯದಿಂದ ಪಾರಾದರೆ ಬಾಲಕಿ ಮಾತ್ರ ಸಜೀವ ದಹನವಾಗಿದ್ದಾಳೆ.

ಘಟನೆ ಕುರಿತಂತೆ ಟೀಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp