ಬಿಯರ್ ಪ್ರಿಯರಿಗೆ ಬೆಲೆ ಏರಿಕೆ ಬಿಸಿ, ಏ.1ರಿಂದ ನೂತನ ದರ ಜಾರಿ

ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಾವಿನ ಜೊತೆಗೆ ಬಿಯರ್ ಪ್ರಿಯರಿಗೆ ಬೆಲೆ ಏರಿಕೆ ಬಿಸಿಯೂ ತಟ್ಟಲಿದ್ದು, ನೂತನ ದರ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ.

Published: 16th March 2019 12:00 PM  |   Last Updated: 16th March 2019 03:54 AM   |  A+A-


Karnataka government hikes beer price with effect from April 1

ಸಾಂದರ್ಭಿಕ ಚಿತ್ರ

Posted By : LSB LSB
Source : Online Desk
ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಾವಿನ ಜೊತೆಗೆ ಬಿಯರ್ ಪ್ರಿಯರಿಗೆ ಬೆಲೆ ಏರಿಕೆ ಬಿಸಿಯೂ ತಟ್ಟಲಿದ್ದು, ನೂತನ ದರ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ. 

ಲೋಕಸಭೆ ಚುನಾವಣೆ ಮತ್ತು ಬಿಸಿಲಿನ ತಾಪ ಈ ಎರಡನ್ನೂ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ 650 ಎಂಎಲ್ ಬಿಯರ್ ದರ ಏರಿಕೆ ಮಾಡಿ ಶೀಘ್ರದಲ್ಲೇ ಆದೇಶ ಹೊರಡಿಸಲಿದ್ದು, ಹೊಸ ದರ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ.

ಪ್ರತಿವರ್ಷ ಸರಾಸರಿ 2,400 ಕೋಟಿ ರೂ. ಆದಾಯ ಅಬಕಾರಿ ಇಲಾಖೆ ಮೂಲಕ ಸರ್ಕಾರದ ಖಜಾನೆ ಸೇರುತ್ತಿದೆ. 10 ವರ್ಷಗಳಲ್ಲಿ ಬಿಯರ್ ಮಾರಾಟ ಪ್ರಮಾಣ 5 ಪಟ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ 2019-20ನೇ ಸಾಲಿನಲ್ಲಿ ಸರ್ಕಾರ ಅಬಕಾರಿ ಇಲಾಖೆಗೆ 2,800 ಕೋಟಿ ರೂ. ಟಾರ್ಗೆಟ್ ನೀಡಿದೆ.

ಲೋಕಸಭಾ ಚುನಾವಣೆಯಿಂದಾಗಿ ಭಾರಿ ಬೇಡಿಕೆ ಬರುತ್ತಿರುವ ಹಿನ್ನೆಲೆ ಯಲ್ಲಿ ಈಗಾಗಲೇ ರಾಜ್ಯದ ಹಲವೆಡೆ ಮದ್ಯ ಖರೀದಿಸಿ ದಾಸ್ತಾನು ಮಾಡಿಕೊಳ್ಳಲಾಗುತ್ತಿದೆ. ಬಿಸಿಲಿನ ಝುಳ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಯರ್​ಗೆ ಭಾರಿ ಬೇಡಿಕೆ ಬಂದಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬಿಯರ್ ದರ ಹೆಚ್ಚಿಸು ವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕುರಿತು ಶೀಘ್ರದಲ್ಲೇ ಆದೇಶ ಹೊರಬೀಳಲಿದೆ ಎಂದು ಅಬಕಾರಿ ಇಲಾಖೆ ಉಪ ನಿರ್ದೇಶಕ ಕೆ.ಎಸ್. ಶಿವಯ್ಯ ಅವರು ಹೇಳಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp