ಹಾಲು, ಮೊಸರಿನ ಪಾಕೇಟ್ ಮೇಲೂ ಮತದಾನ ಕುರಿತ ಜಾಗೃತಿ

ಏಪ್ರಿಲ್ 18 ಹಾಗೂ 23 ರಂದು ರಾಜ್ಯದಲ್ಲಿ ನಡೆಯಲಿರುವ ಎರಡು ಹಂತಗಳ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಹಾಲು ಮಹಾ ಮಂಡಳದಿಂದ ವಿತರಿಸುವ ಹಾಲು ಮತ್ತು ಮೊಸರಿನ ಪಾಕೆಟ್ ಮೇಲೂ ಮತದಾನ ಮಾಡುವಂತೆ ಮತದಾರರಿಗೆ ಸಂದೇಶ ಕಳುಹಿಸಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಏಪ್ರಿಲ್ 18 ಹಾಗೂ 23 ರಂದು ರಾಜ್ಯದಲ್ಲಿ ನಡೆಯಲಿರುವ ಎರಡು ಹಂತಗಳ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಹಾಲು ಮಹಾ ಮಂಡಳದಿಂದ ವಿತರಿಸುವ ಹಾಲು ಮತ್ತು ಮೊಸರಿನ ಪಾಕೆಟ್ ಮೇಲೂ ಮತದಾನ ಮಾಡುವಂತೆ  ಮತದಾರರಿಗೆ ಸಂದೇಶ ಕಳುಹಿಸಲಾಗುತ್ತಿದೆ.

ಏಪ್ರಿಲ್ 18 ಚುನಾವಣೆ ನಿಗದಿಯಾಗಿರುವ ದಕ್ಷಿಣ ಕರ್ನಾಟಕದ 14 ಜಿಲ್ಲೆಗಳು ಹಾಗೂ 23 ರಂದು ನಡೆಯಲಿರುವ ಉಳಿದ ಜಿಲ್ಲೆಗಳಲ್ಲೂ  ಹಾಲಿನ ಉತ್ಪನ್ನಗಳನ್ನು ಪೂರೈಕೆ ಮಾಡಲಾಗುತ್ತದೆ. ಕೆಎಂಎಫ್ 38 ಲಕ್ಷ ಲೀಟರ್ ಹಾಲನ್ನು ಪ್ಲಾಸ್ಟಿಕ್ ಪೌಚೆಸ್ ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಬಹುತೇಕವಾಗಿ ಎಲ್ಲಾ ಮನೆಗಳಲ್ಲೂ ಹಾಲು ಮತ್ತು ಮೊಸರನ್ನು ಖರೀದಿಸುತ್ತಾರೆ. ಈ ಮೂಲಕ ಅವರನ್ನು ತಲುಪುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2014 ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಕೆಎಂಎಫ್ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಂಸತ್ತು ಚುನಾವಣೆಯಲ್ಲಿ ಜನರು ಪಾಲ್ಗೊಳ್ಳುವಂತೆ ಅರಿವು ಮೂಡಿಸಲಾಗಿತ್ತು.

ಕೆಎಲ್ ಆರ್ ಟಿಸಿ ಬಸ್ ಟಿಕೆಟ್ ಗಳಲ್ಲಿ ಈಗಾಗಲೇ ಮತದಾನ ಮಾಡಿ ಎಂಬ  ಸಂದೇಶ ರವಾನಿಸಲಾಗುತ್ತಿದ್ದು, ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಣಿ ಬಗ್ಗೆಯೂ ಪ್ರಯಾಣಿಕರಿಗೆ  ನೆನಪು ಮಾಡಿಕೊಡಲಾಗುತ್ತಿದೆ. 8700 ಕೆಎಸ್ ಆರ್ ಟಿ ಸಿ ಬಸ್ ಗಳು ಕಾರ್ಯಚರಿಸುತ್ತಿದ್ದು, 29 ಲಕ್ಷ ಜನರು ಈ ಬಸ್ ಗಳಲ್ಲಿ ಸಂಚರಿಸುತ್ತಿದ್ದಾರೆ.

ಎಲ್ಲಾ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಗಳಲ್ಲಿ ಎಲ್ ಇಡಿ ಪರದೆ ಮೂಲಕವೂ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ಇದರಿಂದಾಗಿ ಪ್ರಯಾಣಿಕರು ತಮ್ಮ ಕ್ಷೇತ್ರಗಳಿಗೆ ತೆರಳಿ ಮತದಾನ ಮಾಡಲು ಪ್ರೇರೆಪಿಸುತ್ತವೆ ಎಂದು ಕೆಎಸ್ ಆರ್ ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿಯೂ ಇಂತಹ ವ್ಯವಸ್ಥೆ ಮಾಡಲಾಗಿದೆ. ಮೇಟ್ರೋ ರೈಲು ಹಾಗೂ ನಿಲ್ದಾಣಗಳಲ್ಲಿಯೂ ಮತದಾನ ಕುರಿತು ಅರಿವು ಸಂದೇಶ ಪ್ರಕಟಿಸುವ ಯೋಜನೆ ಹಾಕಿಕೊಳ್ಳಲಾಗಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com