ಲೋಕಸಭೆ ಚುನಾವಣೆ: ಹಾವೇರಿ ಜಿಲ್ಲಾ ಚುನಾವಣಾ ರಾಯಭಾರಿಯಾಗಿ ಹನುಮಂತ ಆಯ್ಕೆ

'ಸರಿಗಮಪ' ಖ್ಯಾತಿಯ ಸಿಂಗರ್, ಕುರಿಗಾಹಿ ಹನುಮಂತ ಅವರು ಹಾವೇರಿ ಜಿಲ್ಲಾ ಚುನಾವಣಾ ರಾಯಭಾರಿಯಾಗಿ ಆಯ್ಕೆಯಾಗಿದ್ದು, ತಮ್ಮ ಗಾಯನದ ಮೂಲಕ

Published: 30th March 2019 12:00 PM  |   Last Updated: 30th March 2019 10:51 AM   |  A+A-


Singer Hanumantha selected as brand ambassador for Lok Sabha elections

ಹನುಮಂತ

Posted By : LSB LSB
Source : Online Desk
ಹಾವೇರಿ: 'ಸರಿಗಮಪ' ಖ್ಯಾತಿಯ ಸಿಂಗರ್, ಕುರಿಗಾಹಿ ಹನುಮಂತ ಅವರು ಹಾವೇರಿ ಜಿಲ್ಲಾ ಚುನಾವಣಾ ರಾಯಭಾರಿಯಾಗಿ ಆಯ್ಕೆಯಾಗಿದ್ದು, ತಮ್ಮ ಗಾಯನದ ಮೂಲಕ ಜಿಲ್ಲೆಯ ಮತದಾರರಲ್ಲಿ ಜಾಗೃತಿ ಮೂಡಿಸಲಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತದಾನ ಮಾಡಿಸುವ ಉದ್ದೇಶದಿಂದ ಮತದಾರರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿ ಗಾಯಕ ಹನುಮಂತರನ್ನು ಆಯ್ಕೆ ಮಾಡಿದೆ. ಪರಿಣಾಮ ಜಿಲ್ಲೆಯಾದ್ಯಂತ ಸಂಚರಿಸಿ ಎಲ್ಲರು ತಪ್ಪದೇ ಮತದಾನ ಮಾಡಿ, ಮತದಾನ ನಿಮ್ಮ ಹಕ್ಕು ಎಂದು ಹನುಮಂತ ಅವರು ಅರಿವು ಮೂಡಿಸಲಿದ್ದಾರೆ.

ಜಿಲ್ಲೆಯ ಚುನಾವಣಾ ರಾಯಭಾರಿಯಾಗಿ ಆಯ್ಕೆ ಆಗಿರುವ ಹನುಮಂತ ಅವರು ಈಗಾಗಲೇ ಜಿಲ್ಲೆಯಲ್ಲಿ ವಿವಿ ಪ್ಯಾಟ್ ಬಗ್ಗೆ ಜಾಗೃತಿ ಮೂಡಿಸಲು ಮಾದರಿಯನ್ನು ನೀಡಿದ್ದಾರೆ.

ಹನುಮಂತ ಅವರ ಗಾಯನಕ್ಕೆ ರಾಜ್ಯದ ಜನ ಮೆಚ್ಚುಗೆ ಸೂಚಿಸಿದ್ದರು. ಸರಿಗಮಪ ಶೋ ರನ್ನರ್ ಅಪ್ ಬಳಿಕ ಹನುಮಂತ ಯಾವ ಪಕ್ಷದ ಪರ ಪ್ರಚಾರ ಮಾಡಲಿದ್ದಾರೆ ಎಂಬ ಕುತೂಹಲವೂ ಮೂಡಿತ್ತು. ಅಲ್ಲದೇ ಹಲವು ಪಕ್ಷಗಳು ಅವರನನ್ನು ಸಂಪರ್ಕ ಮಾಡಲು ಪ್ರಯತ್ನ ಕೂಡ ನಡೆಸಿದ್ದರು. ಆದರೆ ಸದ್ಯ ಹನುಮಂತ ತಮ್ಮ ಫೇಮ್‍ನ್ನು ಉತ್ತಮ ಉದ್ದೇಶಕ್ಕಾಗಿ ಉಪಯೋಗಿಸಲು ಮುಂದಾಗಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp