ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣಗೆ 87ನೇ ಜನ್ಮದಿನ, ಸಿಎಂ ಸೇರಿ ಗಣ್ಯರ ಶುಭಾಶಯ

ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಹಿರಿಯ ಬಿಜೆಪಿ ನಾಯಕ ಎಸ್.ಎಂ. ಕೃಷ್ಣ ಇಂದು (ಮೇ ೧) 87ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣಗೆ 87ನೇ ಜನ್ಮದಿನ ಸಂಭ್ರಮ
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣಗೆ 87ನೇ ಜನ್ಮದಿನ ಸಂಭ್ರಮ
ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಹಿರಿಯ ಬಿಜೆಪಿ ನಾಯಕ ಎಸ್.ಎಂ. ಕೃಷ್ಣ ಇಂದು (ಮೇ 1) 87ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಜನ್ಮದಿನದಂದು ಕೃಷ್ಣ ಅವರಿಗೆ ಹೂಗುಚ್ಚ ಸಮರ್ಪಿಸಿ ಬಿಜೆಪಿ ಮುಖಂಡರು ಶುಭಾಶಯ ಕೋರಿದ್ದಾರೆ.
ಡಾಲರ್ಸ್ ಕಾಲೋನಿ ಕೃಷ್ಣ ನಿವಾಸಕ್ಕೆ ತೆರಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಆರ್. ಅಶೋಕ್, ಸಂಸದ ಪಿಸಿ ಮೋಹನ್, ಶಾಸಕ ಅರವಿಂದ ಲಿಂಬಾವಳಿ ಸೇರಿ ಅನೇಕರು ಕೃಷ್ಣ ಅವರಿಗೆ ಹೂಗುಚ್ಚ ಸಮರ್ಪಿಸಿ ಹುಟ್ಟು ಹಬ್ಬದ ಶುಭಾಶಯ ಹೇಳಿದ್ದಾರೆ.
ಇತ್ತ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಸಹ ಟ್ವೀಟ್ ಮಾಡುವ ಮೂಲಕ ಎಸ್.ಎಂ. ಕೃಷ್ಣ ಅವರಿಗೆ ಶುಬಾಶಯ ಹೇಳಿದ್ದಾರೆ.

Karnataka's senior-most politician and statesman Sri SM Krishna turns 87 today.
I wish him a very Happy Birthday.
May God bless him with good health and a happy life.

— H D Kumaraswamy (@hd_kumaraswamy) May 1, 2019'

ರಾಜಕೀಯ ಮುತ್ಸದ್ಧಿಗಳು, ಪಕ್ಷದ ಹಿರಿಯ ಮುಖಂಡರು ಆದ ಮಾನ್ಯ ಶ್ರೀ ಎಸ್.ಎಂ.ಕೃಷ್ಣ ಅವರ ಹುಟ್ಟುಹಬ್ಬ ಇಂದು. ಅವರ ನಿವಾಸಕ್ಕೆ ಪಕ್ಷದ ಹಲವಾರು ಮುಖಂಡರ ಜೊತೆಗೆ ತೆರಳಿ ಶುಭಾಶಯ ಕೋರಲಾಯಿತು. ಇವರು ಹೀಗೆ ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿ ಸದಾ ನಗು ನಗುತ್ತಾ ಸುಖ, ಸಂತೋಷದಿಂದ ಬಾಳಿ ಬದುಕಲಿ. pic.twitter.com/B9C246vHu3

— Chowkidar B.S. Yeddyurappa (@BSYBJP) May 1, 2019
ಮಂಡ್ಯ, ಮೈಸೂರು, ತುಮಕೂರು ಸೇರಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಕೃಷ್ಣ ಅವರ ಅಭಿಮಾನಿಗಳು , ಕಾರ್ಯಕರ್ತರು ಹುಟ್ಟು ಹಬ್ಬಕ್ಕೆ ಶುಭಕೋರಿ ಸಿಹಿ ಹಮ್ಚಿ ಸಭ್ರಮಿಸಿದ್ದಾರೆ.

Warm birthday greetings to senior politician and former Chief Minister SM Krishna. Hope you lead a long & healthy life.

ರಾಜ್ಯದ ಹಿರಿಯ ರಾಜಕಾರಣಿ‌ ಹಾಗೂ ಮಾಜಿ‌ ಮುಖ್ಯಮಂತ್ರಿಗಳಾದ ಶ್ರೀ ಎಸ್ ಎಂ ಕೃಷ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು‌.

— Dr. G Parameshwara (@DrParameshwara) May 1, 2019
ಎಸ್.ಎಂ. ಕೃಷ್ಣ ನಡೆದು ಬಂದ ಹಾದಿ
ಮಾಜಿ ಮುಖ್ಯಮಂತ್ರಿ, ಹಿರಿಯ ಮುತ್ಸದ್ದಿಯಾದ ಎಸ್.ಎಂ. ಕೃಷ್ಣ 1932ರಲ್ಲಿ ಮಂಡ್ಯ ಜಿಲ್ಲೆ ಸೋಮನಹಳ್ಳಿಯಲ್ಲಿ ಜನಿಸಿದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ ಇವರು ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಪಡೆಇದ್ದರು.ಅಮೆರಿಕದ ಸದರ್ನ್ ಮೆಥಡಿಸ್ಟ್ ವಿವಿಯಲ್ಲಿ ಕಾನೂನು ವ್ಯಾಅಂಗವನ್ನೂ ಕೈಗೊಂಡಿದ್ದ ಕೃಷ್ಣ ಜಾರ್ಜ್ ವಾಷಿಂಗ್ಟನ್ ವಿವಿಯಲ್ಲಿ ಫುಲ್‍ಬ್ರೈಟ್ ವಿದ್ಯಾರ್ಥಿಯಾಗಿದ್ದರು.
ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದ ಕೃಷ್ಣ ಅವರು 1962ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ  ಆಯ್ಕೆಯಾಗುವ ಮೂಲಕ ರಾಜಕೀಯ ರಂಗಕ್ಕಿಳಿದರು.1965ರಲ್ಲಿ ಕಾಮನ್ವೆಲ್ತ್ ಒಕ್ಕೂಟದಲ್ಲಿ ಪ್ರತಿನಿಧಿಯಾಗಿದ್ದ ಇವೌ 1968ರಲ್ಲಿ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸಿ ಸಂಸದರಾದರು.1972ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಕೃಷ್ಣ 1977ರಲ್ಲಿ ವಾಣಿಜ್ಯೋದ್ಯಮ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು.1984ರಲ್ಲಿ ವಿತ್ತ ಕಾತಾ ಸಚಿವರಾಗಿ, 1989 ರಿಂದ 1992ರ ವರೆಗೆ ವಿಧಾನಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದ ಇವರು 1992 ರಿಂದ 1994ರ ವರೆಗೆ ರಾಜ್ಯದ ಉಪಮುಖ್ಯಮಂತ್ರಿಯಾದರು.
1996ರಲ್ಲಿ ರಾಜ್ಯಸಭೆ ಸದಸ್ಯರಾಗಿದ್ದ ಕೃಷ್ನ 1999ರಲ್ಲಿ ಕರ್ನಾಟಕದ 16ನೇ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ್ದರು ಬಳಿಕ 2004- 2008ರ ನಡುವೆ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಕೃಷ್ಣ 2009 - 2012ರವರೆಗೆ ವಿದೇಶಾಂಗ ವ್ಯವಹಾರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com