ಎಸ್ಸೆಲ್ಸಿ ರಿಸಲ್ಟ್: ತುಳು ಭಾಷೆಯಲ್ಲಿ ಶೇ. 100 ಫಲಿತಾಶ, 63 ವಿದ್ಯಾರ್ಥಿಗಳಿಗೆ ನೂರಕ್ಕೆ 100!

ಈ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಬಂದಿದ್ದು ಹಾಸನ ಮೊದಲ ಸ್ಥಾನ ಗಳಿಸಿದೆ. ಇತ್ತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತುಳು ಭಾಷೆಯನ್ನು ಐಚ್ಚಿಕ ವಿಷಯವಾಗಿ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮಂಗಳೂರು: ಈ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಬಂದಿದ್ದು ಹಾಸನ ಮೊದಲ ಸ್ಥಾನ ಗಳಿಸಿದೆ. ಇತ್ತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತುಳು ಭಾಷೆಯನ್ನು ಐಚ್ಚಿಕ ವಿಷಯವಾಗಿ ಬೋಧಿಸಲಾಗುತ್ತಿದ್ದು ಈ ಬಾರಿ ಎಸ್.ಎಲ್.ಎಲ್.ಸಿ. ಪರೀಕ್ಷೆಯಲ್ಲಿ ಒಟ್ಟು 617 ವಿದ್ಯಾರ್ಥಿಗಳು ತುಳು ಭಾಷೆ ಪರೀಕ್ಷೆ ಬರೆದಿದ್ದಾರೆ. ಅದರಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದು ಶೇ. 100 ಫಲಿತಾಶ ದಾಖಲಾಗಿದೆ. ಅದರಲ್ಲಿಯೂ 63 ವಿದ್ಯಾರ್ಥಿಗಳು ನೂರಕ್ಕೆ100 ಅಂಕ ಪಡೆದಿದ್ದಾರೆ.
ಉಭಯ ಜಿಲ್ಲೆಗಳ ಒಟ್ಟು 41 ಶಾಲೆಗಳಲ್ಲಿ ತುಳು ಪಠ್ಯ ಬೋಧನೆ ನಡೆಯುತ್ತಿದೆ.ತುಳುವಿನಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಜಿಲ್ಲೆಯ ಒಟ್ಟು ಫಲಿತಾಶದಲ್ಲಿ ಏರಿಕೆ ಕಂಡುಬಂದಿದೆ.
ಈ ಸಂಬಂಧ ಮಾತನಾಡಿದ ತುಳು ಅಕಾಡಮಿ ಅಧ್ಯಕ್ಷ ಎಸಿ ಭಂಡಾರಿ "ಮುಂದಿನ ವರ್ಷಗಳಲ್ಲಿ ತುಳು ಪಠ್ಯ ಬೋಧನೆಗೆ ಇನ್ನಷ್ಟು ಉತ್ತೇಜನ ದೊರಕಿಸಿಕೊಡಲಾಗುತ್ತದೆ. ವಿದ್ಯಾರ್ಥಿಗಳು ತೃತೀಯ ಐಚ್ಚಿಕ ವಿಷಯವಾಗಿ ತುಳುವನ್ನು ಆಯ್ಕೆ ಮಾಡಿಕೊಳ್ಳುವ ಕಾರಣ ಹೆಚ್ಚಿನ ಅಂಕ ಪಡೆಯುತ್ತಿದ್ದಾರೆ" ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com