ಸುವರ್ಣ ತ್ರಿಭುಜ ದುರಂತದಲ್ಲಿ ಕಾಣೆಯಾದ ಮೀನುಗಾರರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ: ಜಯಮಾಲಾ

ಸುವರ್ಣ ತ್ರಿಭುಜ ಮೀನುಗಾರಿಕಾ ಬೊಟ್ ನಾಪತ್ತೆಯಾಗಿ ಕಾಣೆಯಾಗಿರುವ ಮೀನುಗಾರರ ಕುಟುಂಬಗಳಿಗೆ ತಲಾ 10 ಲಕ್ಷ ರು. ಪರಿಹಾರ ನಿಡುವುದಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಹೇಳಿದ್ದಾರೆ.

Published: 10th May 2019 12:00 PM  |   Last Updated: 10th May 2019 08:58 AM   |  A+A-


Jayamala

ಜಯಮಾಲಾ

Posted By : RHN RHN
Source : Online Desk
ಉಡುಪಿ: ಸುವರ್ಣ ತ್ರಿಭುಜ ಮೀನುಗಾರಿಕಾ ಬೊಟ್ ನಾಪತ್ತೆಯಾಗಿ ಕಾಣೆಯಾಗಿರುವ ಮೀನುಗಾರರ ಕುಟುಂಬಗಳಿಗೆ ತಲಾ 10 ಲಕ್ಷ ರು. ಪರಿಹಾರ ನಿಡುವುದಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಹೇಳಿದ್ದಾರೆ.

ಉಡ್ಪುಪಿಯಲ್ಲಿ ಮಾದ್ಯಮದವರೊಡನೆ ಮಾತನಾಡಿದ ಸಚಿವೆ ಜಯಮಾಲ ಮೀನುಗಾರರ ಸಂಕಷ್ಟ ಪರಿಹಾರ ನಿಧಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಂತ್ರಸ್ಥ ಕುಟುಂಬಗಳಿಗೆ ಹಣ ವಿತರಿಸಲಾಗುತ್ತದೆ ಎಂದರು.

ನಾಪತ್ತೆಯಾದವರು ಮರಳಬೇಕೆನ್ನುವುದ್ ನಮ್ಮ ಆಶಯ, ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಒತ್ತಡ ಹೇರಲಾಗುತ್ತದೆ. ಅಲ್ಲದೆ ನಾವು ಮಾತ್ರವಲ್ಲದೆ ಕೇಂದ್ರ ಸರ್ಕಾರ ಸಹ ಈ ಕುಟುಂಬಕ್ಕೆ ಪರಿಹಾರ ವಿತರಿಸಬೇಕೆಂದು ನಾವು ಮೀನುಗಾರರ ಕುಟುಂಬದ ಪರವಾಗಿ ಶಿಫಾರಸು ಮಾಡುತ್ತೇವೆ ಎಂದು  ಅವರು ಹೇಳಿದ್ದಾರೆ.

ನಾಪತ್ತೆಯಾಗಿರುವವರ ಕುಟುಂಬದವರ ಬ್ಯಾಂಕ್ ಖಾತೆಗಳಿಗೆ ಪರಿಹಾರದ ಹಣ ನೇರ ವರ್ಗಾವಣೆ ಆಗುವಂತೆ ಕ್ರಮ ತೆಗೆದುಕೊಳ್ಲಲಾಗುತ್ತದೆ ಎಂದೂ ಅವರು ಹೇಳಿದ್ದಾರೆ.

ಭಾಗಷಃ ಬರಪೀಡಿತವೆಂದು ಘೋಷಣೆ

ಉಡುಪಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು ಜಿಲ್ಲೆಯನ್ನು ಭಾಗಷಃ ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ.126 ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇದ್ದು ಇದೆಲ್ಲ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನಿರು ಸರಬರಾಜಾಗುತ್ತಿದೆ. ಬರ ನಿರ್ವಹಣೆಗಾಗಿ ಇದಾಗಲೇ ನಿಧಿ ಸಂಗ್ರಹವಾಗಿದೆ, ಇದಕ್ಕಾಗಿ ಆಲೋಚಿಸುವ ಅಗತ್ಯವಿಲ್ಲ ಎಂದು ಸಚಿವರು ಹೇಳಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp