ಹೊನ್ನಾವರ: ಮಂಕಿ ಸಮುದ್ರ ತೀರದಲ್ಲಿ ಮಹಿಳೆ ಸೇರಿ ಮೂವರ ಶವ ಪತ್ತೆ

ಓರ್ವ ಮಹಿಳೆ ಹಾಗೂ ಇನ್ನಿಬ್ಬರು ಬಾಲಕಿಯರು ಸೇರಿ ಮೂರು ಅನಾಮಧೇಯ ಶವಗಳು ಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಮಂಕಿ ಸಮುದ್ರ ತೀರದಲ್ಲಿ ನಡೆದಿದೆ.

Published: 13th May 2019 12:00 PM  |   Last Updated: 13th May 2019 08:42 AM   |  A+A-


3 dead bodies found in beach side at Honnavar

ಹೊನ್ನಾವರ: ಮಂಕಿ ಸಮುದ್ರ ತೀರದಲ್ಲಿ ಮಹಿಳೆ ಸೇರಿ ಮೂವರ ಶವ ಪತ್ತೆ

Posted By : RHN RHN
Source : Online Desk
ಕಾರವಾರ: ಓರ್ವ ಮಹಿಳೆ ಹಾಗೂ ಇನ್ನಿಬ್ಬರು ಬಾಲಕಿಯರು ಸೇರಿ ಮೂರು ಅನಾಮಧೇಯ ಶವಗಳು ಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಮಂಕಿ ಸಮುದ್ರ ತೀರದಲ್ಲಿ ನಡೆದಿದೆ.

ಸೋಮವಾರ ಬೆಳಿಗ್ಗೆ ಈ ಅಪರಚಿತ ದೇಹಗಳು ಪತ್ತೆಯಾಗಿದ್ದು ಮಂಕಿ ಸಮೀಪ ಕೊಪದಮಕಿ ಸಮುದ್ರ ತೀರದಲ್ಲಿ ಶವಗಳು ದೊರಕಿದೆ. ಮಹಿಳೆ ಸುಮಾರು 35 ವರ್ಷದವರಾದರೆ ಬಾಲಕಿಯರಿಬ್ಬರೂ ಅಪ್ರಾಪ್ತ ವಯಸ್ಕರೆಂದು ತಿಳಿದುಬಂದಿದೆ.

ಇವರೆಲ್ಲರೂ ಹೊರರಾಜ್ಯದವರಾಗಿದ್ದಾರೆ ಎನ್ನಲಾಗುತ್ತಿದ್ದು ಪೋಲೀಸರು ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಘಟನೆ ಕುರಿತಂತೆ ಮಂಕಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp