ಬೆಳಗಾವಿ: ತಂದೆಯದು ಸಹಜ ಸಾವಲ್ಲ ಎಂದ ಮಾಜಿ ಶಾಸಕ ಸಂಭಾಜಿ ಪಾಟೀಲ್ ಪುತ್ರಿ, ದೂರು ದಾಖಲು

ಎಂಇಎಸ್ ಮಾಜಿ ಶಾಸಕ ಸಂಭಾಜಿ ಪಾಟೀಲ್​ ಶುಕ್ರವಾರ ನಿಧನಾರಾಗಿದ್ದಾರೆ. ಆದರೆ ತಂದೆಯ ಸಾವು ಸಹಜವಾದುದಲ್ಲ ಎಂದು ಸಂಶಯ ವ್ಯಕ್ತಪಡಿಸಿರುವ ಅವರ ಪುತ್ರಿ ಸಂದ್ಯಾ ಪಾಟೀಲ್ ಈ ಕುರಿತು ಎಪಿಎಂಸಿ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

Published: 18th May 2019 12:00 PM  |   Last Updated: 18th May 2019 08:33 AM   |  A+A-


Sambhaji Patil

ಸಂಭಾಜಿ ಪಾಟೀಲ್

Posted By : RHN RHN
Source : Online Desk
ಬೆಳಗಾವಿ: ಎಂಇಎಸ್ ಮಾಜಿ ಶಾಸಕ ಸಂಭಾಜಿ ಪಾಟೀಲ್​ ಶುಕ್ರವಾರ ನಿಧನಾರಾಗಿದ್ದಾರೆ. ಆದರೆ ತಂದೆಯ  ಸಾವು ಸಹಜವಾದುದಲ್ಲ ಎಂದು ಸಂಶಯ ವ್ಯಕ್ತಪಡಿಸಿರುವ ಅವರ ಪುತ್ರಿ ಸಂದ್ಯಾ ಪಾಟೀಲ್ ಈ ಕುರಿತು ಎಪಿಎಂಸಿ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಶುಕ್ರವಾರ ರಾತ್ರಿ ಸುಮಾರು 8.35ರ ವೇಳೆಗೆ ಬೆಳಗಾವಿ ಕೆಎಲ್ ಇ ಆಸ್ಪತ್ರೆಯಲ್ಲಿ ಸಂಭಾಜಿ ಪಾಟೀಲ್ ಹೃದಯಾಘಾತದಿಂದ ಅಸುನೀಗಿದ್ದರು. ಆದರೆ ತಡರಾತ್ರಿ ಆಸ್ಪತ್ರೆಗೆ ಧಾವಿಸಿದ ಅವರ ಪುತ್ರಿ ಸಂದ್ಯಾ ತಂದೆ ಸಾವಿನ ಕುರಿತು ತೀವ್ರ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಆಕೆ ಮರಣೋತ್ತರ ಪರೀಕ್ಷೆ ನಡೆಸಲು ಕೋರಿದ್ದಲ್ಲದೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಎಪಿಎಂಸಿ ಠಾಣೆಯಲ್ಲಿ ಯುಡಿಆರ್ 08/2019 ಸಿಆರ್ ಪಿಸಿ 174 ಅಡಿಯಲ್ಲಿ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರಿನನ್ವಯ ಶನಿವಾರ ಬೆಳಿಗ್ಗೆ ಸಂಭಾಜಿ ಪಾಟೀಲ್ ಅವರ ಮೃತದೇಹವನ್ನು ಕೆಎಲ್ ಇ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.

ಅಂತ್ಯಸಂಸ್ಕಾರ

ನಿನ್ನೆ ಸಾವಿಗೀಡಾದ ಬೆಳಗಾವಿ ಮಾಜಿ ಶಾಸಕ ಸಂಬಾಜಿ ಪಾಟೀಲ್ ಅಂತ್ಯ ಸಂಸ್ಕಾರ ಶನಿವಾರ ಸಂಜೆ ಶಹಾಪುರದ ಸ್ಮಶಾನದಲ್ಲಿ ನೆರವೇರಿದೆ.ಸಕಲ ಸರ್ಕಾರಿ ಗೌರವದೊಡನೆ ಪಾತಿಲ್ ಅವರ ಅಂತ್ಯ ಸಂಸ್ಕಾರ ನೆರವೇರಿದೆ.

ಅಂತ್ಯ ಸಂಸ್ಕಾರದ ವೇಳೆ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಸಂಸದ ಸುರೇಶ್ ಅಂಗಡಿ ಸೇರಿ ಹಲವು ಗಣ್ಯರು, ಅಭಿಮಾನಿಗಳು ಭಾಗವಹಿಸಿ ಅಂತಿಮ ಗೌರವ ಸಲ್ಲಿಸಿದ್ದರು.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp