ಎಚ್ಎಎಲ್ ಮತ್ತು ಐಐಟಿ-ಕೆನಿಂದ ರಾಜ್ಯಕ್ಕೆ ಕಡಿಮೆ ವೆಚ್ಚದಲ್ಲಿ ಮೋಡ ಬಿತ್ತನೆ ತಂತ್ರಜ್ಞಾನ

ರಾಜ್ಯದ ಮಳೆ ಕೊರತೆ ನೀಗಿಸುವ ಸಲುವಾಗಿ ಮೋಡ ಬಿತ್ತನೆ ಕಾರ್ಯಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದ್ದು 91 ಕೋಟಿ ರು. ವೆಚ್ಚದ ಈ ಯೋಜನೆ ಗುತ್ತಿಗೆಯನ್ನು ಖ್ಯಾತಿ ಕ್ಲೈಮೇಟ್ ಮೋಡಿಫಿಕೇಷನ್....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯದ ಮಳೆ ಕೊರತೆ ನೀಗಿಸುವ ಸಲುವಾಗಿ ಮೋಡ ಬಿತ್ತನೆ ಕಾರ್ಯಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದ್ದು 91 ಕೋಟಿ ರು. ವೆಚ್ಚದ ಈ ಯೋಜನೆ ಗುತ್ತಿಗೆಯನ್ನು ಖ್ಯಾತಿ ಕ್ಲೈಮೇಟ್ ಮೋಡಿಫಿಕೇಷನ್ ಕನ್ಸಲ್ಟೆಂಟ್ಸ್ ತನ್ನದಾಗಿಸಿಕೊಂಡಿದೆ.ಇನ್ನೊಂದೆಡೆ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಕಾನ್ಪುರ್ (ಐಐಟಿ-ಕೆ) ಜಂಟಿಯಾಗಿ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದು ತಾವು ಅತ್ಯಂತ ಕಡಿಮೆ ವೆಚ್ಚದಲ್ಲಿ ಮೋಡಬಿತ್ತನೆ ತಂತ್ರಜ್ಞಾನ. ನಿಡುವುದಾಗಿಯೂ ಹೇಳಿದೆ.
ಎಚ್ಎಎಲ್, ಐಐಟಿ-ಕೆ ಪ್ರಸ್ತಾಪಕ್ಕೆ ಅಂದಾಜು ವೆಚ್ಚವು ಇನ್ನೂ  ಅಂತಿಮವಾಗದಿದ್ದರೂ ಈಗ ಅನುಮೋದನೆ ಆಗಿರುವ ಒಪ್ಪಂದಕ್ಕಿಂತ ಕಡಿಮೆ ವೆಚ್ಚದ್ದಾಗಿರಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.  "ಟೆಂಡರ್ ಪ್ರಕ್ರಿಯೆಯಲ್ಲಿ ಎಚ್ಎಎಲ್ ಭಾಗವಹಿಸದಿದ್ದರೂ, ಐಐಟಿ- ಕೆ ತಂತ್ರಜ್ಞಾನವನ್ನು ನಮಗೆ ಪ್ರಸ್ತುತಪಡಿಸಬಹುದು. ನಮ್ಮದೇ ಆದ ತಂತ್ರಜ್ಞಾನವನ್ನು ಹೊಂದಲು ಇದು ಒಳ್ಳೆಯ ಬೆಳವಣಿಗೆಯಾಗಲಿದೆ.ಏಕೆಂದರೆ ಇದು ಯೋಜನೆಯ ವೆಚ್ಚವನ್ನು ಯಾವುದೇ ಆಮದು ವೆಚ್ಚವನ್ನು ಕಡಿಮೆ ಮಾಡುವುದಿಲ್ಲ , ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಮುಖ್ಯ ಇಂಜಿನಿಯರ್, ಎಚ್ಎಸ್ ಪ್ರಕಾಶ್ ಕುಮಾರ್ ಹೇಳಿದ್ದಾರೆ.
"ನಾವು ತಮ್ಮದೇ ಆದ ಡಾರ್ನಿಯರ್ ವಿಮಾನವನ್ನು ಹೊಂದಿದ್ದರಿಂದ ಎಚ್ಎಎಲ್ ನೊಂದಿಗೆ ಹೆಚ್ಚು ನಿಕಟವರ್ತಿಯಾಗಿದ್ದೇವೆ. " ಅವರು ಹೇಳಿದ್ದಾರೆ. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಇಲಾಖೆಮೋಡ ಬಿತ್ತನೆ ಯೋಜನೆ ಜಾರಿಗೊಳಿಸುತ್ತದೆ. ಸೋಮವಾರದಿಂದ ಕೆಲಸ ಆದೇಶಗಳನ್ನು ನೀಡಲಾಗುತ್ತದೆ. ಮೋಡಗಳ ಮೇಲೆ ರಾಸಾಯನಿಕಗಳನ್ನು ಸಿಂಪಡಿಸುವಿಕೆಯು 90 ದಿನಗಳ ಕಾಲ ನಡೆಯುತ್ತದೆ., 
 "ಕಳೆದ 13-14 ವರ್ಷಗಳಿಂದ ರಾಜ್ಯ ಬರಗಾಲಕ್ಕೆ ತುತ್ತಾಗುತ್ತಿದೆ. ನಾವು 2017 ರಲ್ಲಿ ಮೋಡ ಬಿತ್ತನೆ  ಮಾಡಿದಾಗ, ಮಳೆಯ ಪ್ರಮಾಣವು ಶೇ .27 ರಷ್ಟು ಏರಿದೆ. ಆದಾಗ್ಯೂ, ಇದು ಬರವನ್ನು ತಗ್ಗಿಸುವ ಏಕೈಕ ಪರಿಹಾರವಲ್ಲ, ಆದರೆ ನಮ್ಮ  ಬಳಿಯಿರುವ ಹಲವು ಪರಿಹಾರೋಪಾಯಗಳಲ್ಲಿ ಇದೂ ಒಂದಾಗಿದೆ." ಸಚಿವ ಕೃಷ್ಣ ಬೈರೆ ಗೌಡ ಹೇಳಿದ್ದಾರೆ:

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com