ಬಿಜೆಪಿ ಸರ್ಕಾರ ನೆಹರು ಹೆಸರನ್ನು ಹಾಳು ಮಾಡುತ್ತಿದೆ: ಸೊಸೈಟಿ ಸದಸ್ಯತ್ವದಿಂದ ಕೈ ಬಿಟ್ಟಿದ್ದಕ್ಕೆ ಖರ್ಗೆ ಆಕ್ರೋಶ
ಜವಹರ್ ಲಾಲ್ ನೆಹರು ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿ ಸದಸ್ಯತ್ವದಿಂದ ತಮ್ಮ ಹೆಸರನ್ನ ಕೈ ಬಿಟ್ಟಿರುವುದಕ್ಕೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
Published: 07th November 2019 09:06 AM | Last Updated: 07th November 2019 09:06 AM | A+A A-

ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ಜವಹರ್ ಲಾಲ್ ನೆಹರು ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿ ಸದಸ್ಯತ್ವದಿಂದ ತಮ್ಮ ಹೆಸರನ್ನ ಕೈ ಬಿಟ್ಟಿರುವುದಕ್ಕೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಂಸದ ಮಲ್ಲಿಕಾರ್ಜು ಖರ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಎನ್ ಎಂಎಂಲ್ ಸೊಸೈಟಿಗೆ ಅಧ್ಯಕ್ಷರಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉಪಾಧ್ಯಕ್ಷರಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ನೇಮಿಸಲಾಗಿದೆ, ಸೊಸೈಟಿಯ ಹಿಂದಿನ ಸದಸ್ಯರಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್ ಮತ್ತು ಕರಣ್ ಸಿಂಗ್ ಅವರ ಹೆಸರನ್ನು ಕೈ ಬಿಡಲಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಖರ್ಗೆ. ಸರ್ಕಾರದ ಈ ನಿರ್ಧಾರದಿಂದ ತಮಗೆ ಬೇಸರವಾಗಿದ್ದು, ಕೇಂದ್ರ ಸರ್ಕಾರ ಎಲ್ಲವನ್ನು ರಾಜಕೀಯವಾಗಿ ಪರಿಗಣಿಸುತ್ತಿರುವುದು ದುರಾದೃಷ್ಟಕರ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ತಮಗೆ ಬೇಕಾದವನ್ನು ನೇಮಸುವ ಸಲುವಾಗಿ ಇಂತಹ ನಿರ್ಧಾರ ತೆಗೆದುಕೊಂಡಿದೆ. ಜೈರಾಮ್ ರಮೇಶ್ ಕಾಂಗ್ರೆಸ್ ಪ್ರತಿನಿಧಿಯಲ್ಲ, ಹೀಗಿರುವಾಗ ಅವರನ್ನೇಕೆ ಕೈ ಬಿಡಲಾಗಿದೆ ಎಂದು ಪ್ರಶ್ನಿಸಿದ್ದಾರೆ,
ಕೇವಲ ಖರ್ಗೆ ಮಾತ್ರವಲ್ಲದೆ ಕಾಂಗ್ರೆಸ್ ನ ಹಲವು ಹಿರಿಯ ನಾಯಕರು ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.