ಅಯೋಧ್ಯೆ ತೀರ್ಪು ಪ್ರಕಟ: ಕೆಎಸ್ಆರ್ ಟಿಸಿಯಿಂದ ಮುಂಜಾಗ್ರತಾ ಕ್ರಮ 

ಅಯೋಧ್ಯೆ ತೀರ್ಪು ಹಿನ್ನಲೆಯಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದ್ದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಜಾಗರೂಕತೆ ವಹಿಸುವಂತೆ ಪ್ರಯಾಣಿಕರಿಗೆ ಸೂಚಿಸಿದೆ. ಒಂದು ವೇಳೆ ಅಹಿತಕರ ಘಟನೆ ಕಲ್ಲು ತೂರಾಟ ನಡೆದರೆ ಬಸ್ ಸಂಚಾರ ಸ್ಥಗಿತಗೊಳಿಸುವ ಸಾಧ್ಯತೆಯಿದೆ. 
ಅಯೋಧ್ಯೆ ತೀರ್ಪು ಪ್ರಕಟ: ಕೆಎಸ್ಆರ್ ಟಿಸಿಯಿಂದ ಮುಂಜಾಗ್ರತಾ ಕ್ರಮ 

ಬೆಂಗಳೂರು: ಅಯೋಧ್ಯೆ ತೀರ್ಪು ಹಿನ್ನಲೆಯಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದ್ದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಜಾಗರೂಕತೆ ವಹಿಸುವಂತೆ ಪ್ರಯಾಣಿಕರಿಗೆ ಸೂಚಿಸಿದೆ. ಒಂದು ವೇಳೆ ಅಹಿತಕರ ಘಟನೆ ಕಲ್ಲು ತೂರಾಟ ನಡೆದರೆ ಬಸ್ ಸಂಚಾರ ಸ್ಥಗಿತಗೊಳಿಸುವ ಸಾಧ್ಯತೆಯಿದೆ. 


ಎಲ್ಲಾದರೂ ಅಹಿತಕರ ಘಟನೆ ನಡೆದರೆ ತಕ್ಷಣವೇ ಕೇಂದ್ರ ಕಚೇರಿಗೆ ಮಾಹಿತಿ ನೀಡಿ ಎಂದು ಸೂಚನೆ ಹೊರಡಿಲಾಗಿದೆ. ಎಲ್ಲಾ ಡಿಸಿಗಳು ಮತ್ತು ವಿಭಾಗೀಯ ಅಧಿಕಾರಿಗಳು, ಡಿಪೋ ವ್ಯವಸ್ಥಾಪಕರು ತಮ್ಮ ಪ್ರಧಾನ ಕಚೇರಿಯಲ್ಲಿರಬೇಕು ಮತ್ತು ಬಸ್‌ಗಳನ್ನು ಚಾಲನೆ ಮಾಡುವಾಗ ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿ ಇರಬೇಕೆಂದು ನಿರ್ದೇಶಿಸಿದೆ.


ಬಸ್ಸುಗಳನ್ನು ಚಾಲನೆ ಮಾಡುವಾಗ, ಮುಂಜಾಗೃತಾ ಕ್ರಮವಾಗಿ ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಸಲಹೆಯನ್ನು ಪಡೆದುಕೊಳ್ಳಿ ಅವರ ಸಲಹೆಯಂತೆ ಮುಂದುವರೆಯಿರಿ. ಯಾವುದೇ ರೀತಿಯ ವದಂತಿಗಳಿಗೆ ಕಿಗೊಡಬೇಡಿ ಎಂದು ಕೆಎಸ್ ಆರ್ ಟಿಸಿ ತನ್ನ ಸಿಬ್ಬಂದಿಗಳಿಗೆ ಸೂಚನೆ ಹೊರಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com