ಬೆಂಗಳೂರು: ಪೋಲೀಯೋ ಪೀಡಿತ ಬಾಲಕಿಗೆ ತೆಲಂಗಾಣ ಸಚಿವರ ನೆರವು

ಪೋಲಿಯೊ ಪೀಡಿತೆಯಾಗಿರುವ ಶಿಲ್ಪಾ ಎಂ.ಎನ್ (16) ತನ್ನ ತಂದೆಯ ಫೋನ್‌ನಿಂದ ಕಳಿಸಿದ ಟ್ವೀಟ್ ಒಂದು ತೆಲಂಗಾಣದ ಸಚಿವರ ಮನಮಿಡಿಯುವಂತೆ ಮಾಡಿದೆ. 
ತನ್ನ ಪೋಷಕರೊಡನೆ ಪೋಲಿಯೋ ಪೀಡಿತ ಬಾಲಕಿ ಶಿಲ್ಪಾ
ತನ್ನ ಪೋಷಕರೊಡನೆ ಪೋಲಿಯೋ ಪೀಡಿತ ಬಾಲಕಿ ಶಿಲ್ಪಾ

ಬೆಂಗಳೂರು: ಪೋಲಿಯೊ ಪೀಡಿತೆಯಾಗಿರುವ ಶಿಲ್ಪಾ ಎಂ.ಎನ್ (16) ತನ್ನ ತಂದೆಯ ಫೋನ್‌ನಿಂದ ಕಳಿಸಿದ ಟ್ವೀಟ್ ಒಂದು ತೆಲಂಗಾಣದ ಸಚಿವರ ಮನಮಿಡಿಯುವಂತೆ ಮಾಡಿದೆ. ಪೋಲಿಯೋ ಪೀಡಿತೆಯಾಗಿರುವ ಶಿಲ್ಪಾಗೆ ಮೊಣಕಾಲು ಪಾದದ ಆರ್ಥೋಸಿಸ್ (ಕೆಎಎಫ್‌ಒ) ಶಸ್ತ್ರಚಿಕಿತ್ಸೆ ನಡೆಸಬೇಕಿದೆ..ಇದಕ್ಕಾಗಿ 90,000 ರು. ಖರ್ಚು ತಗು್ಲಲಿದೆ. ಪೋಲಿಯೋ ಅವಳ ಕಾಲುಗಳನ್ನು ವ್ಯಾಪಿಸಿದ್ದು ಕೀಲುಗಳನ್ನು ಸ್ಥಿರಗೊಳಿಸಲು ಮತ್ತು ಅವಳ ಕಾಲಿನ ಸ್ನಾಯುಗಳಿಗೆ ಬಲ ತುಂಬಲು ಈ ಚಿಕಿತ್ಸೆ ಅಗತ್ಯವಿದೆ.“ನಾನು ಎಲ್ಲರಂತೆ ನಡೆಯಲು ಬಯಸುತ್ತೇನೆ. ನಾನು ಎಲ್ಲರಂತೆ ಶಾಲೆಗೆ ಹೋಗಲು ಬಯಸುತ್ತೇನೆ. ದಯವಿಟ್ಟು ನನಗೆ ಸಹಾಯ ಮಾಡಿ. ನನ್ನ ಬೆನ್ನುಮೂಳೆಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು ಆದರೆ ಈಗ ನನ್ನ ಕಾಲುಗಳಿಗೆ ಚಿಕಿತ್ಸೆ ಬೇಕು. ದಯವಿಟ್ಟು ನನಗೆ ಸಹಾಯ ಮಾಡಿ, ”ಎಂದು ಅವರು ನವೆಂಬರ್ 1ರಂದು ಶಿಲ್ಪಾ ಟ್ವೀಟ್ ಮಾಡಿದ್ದಾರೆ. ಇದನ್ನು ಆಕೆ ತೆಲಂಗಾಣದ ಮಂತ್ರಿ  ಕೆ.ಟಿ.ರಾಮರಾವ್ (ಕೆ.ಟಿ.ಆರ್ ಆಫೀಸ್ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಇದು ಶಿಲ್ಪಾ ಕಡೇ ಪ್ರಯತ್ನ ಎಂಬಂತೆ ಮಾಡಿದ ಟ್ವೀಟ್ ಆಗಿತ್ತು. ಆದರೆ ಅಂತಿಮವಾಗಿ ಆಕೆ ಬಯಸಿದ್ದನ್ನು ದಕ್ಕಿಸಿಕೊಂಡಿದ್ದಾಳೆ. ಚಿವರ ಕಚೇರಿ ಟ್ವಿಟ್ಟರ್ ಮೂಲಕ ತಕ್ಷಣ ಪ್ರತಿಕ್ರಿಯಿಸಿತು ಮತ್ತು ತಾಯಿಯ ಮೊಬೈಲ್ ಗೆ ಕರೆ ಮಾಡಿ ಚಿಕಿತ್ಸೆಯ ಬಗ್ಗೆ ವಿವರಗಳನ್ನು ತೆಗೆದುಕೊಂಡಿತು. “ಅವರು ನನ್ನನ್ನು ಬಿಲ್‌ಗಳು, ವೈದ್ಯರ ದೂರವಾಣಿ ಸಂಖ್ಯೆ, ನಮ್ಮ ಮನೆ ವಿಳಾಸ, ಶಾಲೆಯ ವಿವರಗಳನ್ನು ವಾಟ್‌ಆಪ್‌ನಲ್ಲಿ ಕಳುಹಿಸಲು ಕೇಳಿದರು. ನಾನು ಅದನ್ನು ಮಾಡಿದ್ದೇನೆ."ಶಿಲ್ಪಾಹೇಳಿದ್ದಾಳೆ. ಆ ಬಳಿಕ ಸಚಿವರ ಕಚೇರಿ ಶಿಲ್ಪಾಗೆ ಕರೆ ಮಾಡಿ ಸಹಾಯದ ಭರವಸೆ ನೀಡಿತು ಎಂದು ವರದಿಯಾಗಿದೆ.

ಪುಟ್ಟ ಬಾಲಕಿಯ ತಂದೆ ದಿನಗೂಲಿ ಕಾರ್ಮಿಕನಾಗಿದ್ದು ಚಿಕಿತ್ಸೆಗಾಗಿ ಇದಾಗಲೇ ಆತ 20,000 ರೂ ಮುಂಗಡ ಹಣ ಪಾವತಿಸಿದ್ದಾರೆ.ಈಗ ಬ್ರೇಸ್‌ಗಾಗಿ 90,000 ರೂ. ಬೇಕಿದೆ.

ಇದಕ್ಕೆ ಮುನ್ನ ಆತ ಅವರು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರನ್ನು ಭೇಟಿಯಾಗಲು ಸಹ ಪ್ರಯತ್ನಿಸಿದರು, ಆದರೆ ಅಲ್ಲಿಂದ ಸರಿಯಾದ ಪ್ರತಿಕ್ರಿಯೆ ಸಿಕ್ಕಿಲ್ಲ. 

“ಪ್ರತಿದಿನ, ನನ್ನ ತಾಯಿ ನಾನು ಹೋಗಬೇಕಾದ ಎಲ್ಲೆಡೆಯೂ, ಸ್ನಾನಗೃಹಕ್ಕೂ ನನ್ನನ್ನು ಕರೆದೊಯ್ಯುತ್ತಾರೆ. ಮಹೇಶ್ ಬಾಬು ಅಣ್ಣಾ ಅವರಿಗೆ ಧನ್ಯವಾದಗಳು. ನಾನೀಗ ಸಧ್ಯ ಕುಳಿತುಕೊಳ್ಳುವುದಕ್ಕೆ ಆಗುತ್ತಿದೆ. ಆದರೆ ನಾನು ಸ್ವತಂತ್ರನಾಗಿರಲು ಬಯಸುತ್ತೇನೆ ಮತ್ತು ಯಾರ ಸಹಾಯವಿಲ್ಲದೆ ಕಾಲೇಜಿಗೆ ಹೋಗಬೇಕೆಂದು ಬಯಸುವೆ" ಶಿಲ್ಪಾ ಇದೀಗ ಎಲೆಕ್ಟ್ರಾನಿಕ್ಸ್ ನಗರದ ಕೊನಪ್ಪನ ಅಗ್ರಹಾರದಲ್ಲಿರುವ ಸರ್ಕಾರಿ ಇಂಗ್ಲಿಷ್ ಶಾಲೆಯಲ್ಲಿ ಶಿಲ್ಪಾ 10 ನೇ ವ್ಯಾಸಂಗ ಮಾಡುತ್ತಿದ್ದಾಳೆ.

ಆಕೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಕ್ಲಿನಿಕಲ್ ಪ್ರಾಸ್ಥೆಟಿಕ್ ಮತ್ತು ಆರ್ಥೋಸಿಸ್ನ ಡಾ. ಸುಮಂತ್ ಕುಮಾರ್, “ಅವಳು ಆತ್ಮವಿಶ್ವಾಸವುಳ್ಳ ಬಾಲಕಿ. ಈ ಸ್ವಯಂಚಾಲಿತ  ಕಟ್ಟುಪಟ್ಟಿಯನ್ನು ಅಳವಡಿಸಿದರೆ ಸ್ವಯಂಚಾಲಿತ ಲಾಕ್ ವ್ಯವಸ್ಥೆ ಇರುವುದರಿಂದ ಅವಳಿಗೆ ಅನುಕೂಲವಾಗಲಿದೆ.  ಆಕೆಗೆ ಯಾವುದೇ ಸಹಾಯ ಅಗತ್ಯವಿಲ್ಲ, ಅದು ಅವಳಿಗೆ ಸ್ವತಂತ್ರವಾಗಿ ನಡೆಯಲು ಸಹಾಯ ಮಾಡುತ್ತದೆ. ಆಕೆಗೆ ಪ್ರತಿ ವಾರ ಒಂದು ಚುಚ್ಚುಮದ್ದು ಬೇಕಾಗುತ್ತದೆ, ”ಎಂದು ಅವರು ವಿವರಿಸಿದರು.

"ಮಹೇಶ್ ಬಾಬು ನನ್ನ ಪಾಲಿಗೆ ದೇವರಂತೆ. ನಾನು ಒಂದು ವರ್ಷದ ಹಿಂದೆ ಅವರಿಗೆ ನನ್ನ ಪರಿಸ್ಥಿತಿ ಕುರಿತು ಟ್ವೀಟ್ ಮಾಡಿದ್ದೆ. ಮೊದಲು ನಟದ ಪತ್ನಿ ನನಗೆ ಕರೆ ಮಾಡಿದರು, ಬಳಿಕ ಆ ನಟನೇ ಕರೆ ಮಾಡಿ ಮಾತನಾಡಿದ್ದಾರೆ. ಕೆಲ ದಿನಗಳ ಹಿಂದೆ ಮಹೇಶ್ ಬಾಬು ಸಹಾಯಕ ಆಗಮಿಸಿ ನನ್ನ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡಿದರು:" ಶಿಲ್ಪಾ ವಿವರಿಸಿದ್ದಾರೆ.

ನಾರಾಯಣ ಹೆಲ್ತ್ ಸಿಟಿಯ ಸಲಹೆಗಾರ ನರಶಸ್ತ್ರಚಿಕಿತ್ಸಕ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸಕ ಡಾ.ಸತ್ಯನಾರಾಯಣ ಮತ್ತು ಸ್ಪಾರ್ಶ್ ಆಸ್ಪತ್ರೆಯ ಡಾ.ನವೀನ್ ತಹಶೀಲ್ದಾರ್ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು. ಎರಡು ಸಂಕೀರ್ಣ ಶಸ್ತ್ರಚಿಕಿತ್ಸೆಗಳ ನಂತರ, ಶಿಲ್ಪಾ ಇನ್ನು ಮುಂದೆ ತನ್ನ ಹಾಸಿಗೆಗೆ ಅಂಟಿಕೊಳ್ಳುವುದಿಲ್ಲ, ಅವಳು ಗಾಲಿಕುರ್ಚಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗಿದೆ. ಇದೇ ಗಾಲಿಕುರ್ಚಿಯ ಸಹಾಯದಿಂದ ಆಕೆ ಶಾಲೆಗೆ ತೆರಳುತ್ತಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com