ಹಂಪಿ: ಬ್ಯಾಟರಿ ಚಾಲಿತ ವಾಹನ ಪಲ್ಟಿ ಪ್ರಕರಣ, ರಸ್ತೆ ಕಾಮಗಾರಿಗೆ ಅವಕಾಶ ಕೊಟ್ಟ ಭಾರತೀಯ ಪುರಾತತ್ವ ಇಲಾಖೆ

ಕೆಟ್ಟ ಮೇಲೆ ಬುದ್ದಿ ಬಂತು, ನಮ್ಮ ವರದಿಯಿಂದ ಎಚ್ಚೆತ್ತು ಭಾರತೀಯ ಪುರಾತತ್ವ ಇಲಾಖೆ ರಸ್ತೆ ಕಾಮಗಾರಿಗೆ ಅವಕಾಶ ಕೊಟ್ಟಿದೆ.
ಕಾಮಗಾರಿ ಚಿತ್ರ
ಕಾಮಗಾರಿ ಚಿತ್ರ

ಹೊಸಪೇಟೆ: ಕೆಟ್ಟ ಮೇಲೆ ಬುದ್ದಿ ಬಂತು, ನಮ್ಮ ವರದಿಯಿಂದ ಎಚ್ಚೆತ್ತು ಭಾರತೀಯ ಪುರಾತತ್ವ ಇಲಾಖೆ ರಸ್ತೆ ಕಾಮಗಾರಿಗೆ ಅವಕಾಶ ಕೊಟ್ಟಿದೆ.

ನಿನ್ನೆ ವಿಶ್ವ ವಿಖ್ಯಾತ ಹಂಪಿಯಲ್ಲಿ ಬ್ಯಾಟರಿ ಚಾಲಿತ ವಾಹನ ಪಲ್ಟಿಯಾಗಿ ಆರು ಆಂದ್ರ ಮೂಲದ ಪ್ರವಾಸಿಗರಿಗೆ ಗಾಯಗೊಂಡಿದ್ದರು. ಘಟನೆ ನಂತರ  ಎಚ್ಚೆತ್ತ ಎರಡು ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ. 

ಹಂಪಿಯ ವಿಜಯವಿಠ್ಠಲ ದೇವಸ್ಥಾನಕ್ಕೆ ಪ್ರವಾಸಿಗರನ್ನ ಕರೆದೊಯ್ಯೂತಿದ್ದಾಗ ಬ್ಯಾಟರಿ ಚಾಲಿತ ವಾಹನ ಪಲ್ಟಿಯಾಗಿತ್ತು. 

ಅಪಘಾತಕ್ಕೆ ಎರಡು ಪ್ರಮುಖ ಕಾರಣಗಳಿತ್ತು. ಒಂದು ಕಿರಿದಾಗಿದ್ದ ರಸ್ತೆ ಮತ್ತೊಂದು ಬ್ಯಾಟರಿ ವಾಹನ ನಿರ್ವಹಣೆ ಇಲ್ಲದೆ ದುರಸ್ಥಿಗೆ ಬಂದಿದ್ದು, ಮೊದಲನೆ ಕಾರಣಕ್ಕೆ ಪರಿಹಾರ ಕಂಡು ಹಿಡಿದ ಹಂಪಿ ಪ್ರದೇಶ ನಿರ್ವಹಣಾ ಪ್ರಾಧಿಕಾರ ಮತ್ತು‌ ಭಾರತೀಯ ಪುರಾತತ್ವ ಇಲಾಖೆ ಕಿರಿದಾಗಿದ್ದ ಎತ್ತರದ ರಸ್ತೆಯನ್ನ ಕಡಿತಗೊಳಿಸಿ ರಸ್ತೆ ವಿಸ್ತರಣೆಗೆ ಮುಂದಾಗಿದೆ. 

ಜೆಸಿಬಿ ಮೂಲಕ ತುರ್ತಾಗಿ ರಸ್ತೆ ವಿಸ್ತರ ಣೆಮಾಡುವ‌ ಮೂಲಕ ಅವಘಡಕ್ಕೆ ಕಡಿವಾಣ ಹಾಕಬಹುದು.

ಇನ್ನು ಭಾರತೀಯ ಪುರಾತತ್ವ ಇಲಾಖೆಯ ಕಠಿಣ ನಿಯಮಗಳು ಇಲ್ಲಿನ ಅಭಿವೃದ್ದಿ ಕಾಮಗಾರಿಗಳಿಗೆ ಅಡ್ಡಿ ಆಗಿತ್ತು. ನಿನ್ನೆ ನಡೆದ ಘಟನೆಯಿಂದ ನಿಯಮ ಸಡಿಲಿಸಿ ರಸ್ತೆ ಕಾಮಗಾರಿಗೆ ಭಾರತೀಯ ಪುರಾತತ್ವ ಇಲಾಖೆ ಅನುಕೂಲ ಮಾಡಿಕೊಟ್ಟಿದೆ.

ಭಾರತೀಯ ಪುರಾತತ್ವ ಇಲಾಖೆ(ಎಎಸ್ಐ) ಒಪ್ಪಿಗೆ ಪಡೆದು ಹಂಪಿ ಪ್ರದೇಶ ನಿರ್ವಹಣಾ ಪ್ರಾಧಿಕಾರ ರಸ್ತೆ ಕಾಮಗಾರಿ ಪ್ರಾರಂಭಿಸಿದೆ. ಇದರ ಜೊತೆಗೆ ಹತ್ತು ಬ್ಯಾಟರಿ ಚಾಲಿತ ವಾಹನಗಳ ಖರೀದಿಗೆ ಪ್ರಾದಿಕಾರ ಮುಂದಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com