ಟಿಡಿಆರ್ ಹಗರಣ: ಪ್ರಧಾನ ಆರೋಪಿ ಕೃಷ್ಣಲಾಲ್ ಎಸಿಬಿ ಬಲೆಗೆ

ಟಿಡಿಆರ್ ಹಗರಣದ ಪ್ರಮುಖ ಆರೋಪಿ ಮಹಾದೇವಪುರ ವಲಯದ ಸಹಾಯಕ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದ ಕೃಷ್ಣ ಲಾಲ್ ನನ್ನು  ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಟಿಡಿಆರ್ ಹಗರಣದ ಪ್ರಮುಖ ಆರೋಪಿ ಮಹಾದೇವಪುರ ವಲಯದ ಸಹಾಯಕ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದ ಕೃಷ್ಣ ಲಾಲ್ ನನ್ನು  ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.

ಕೃಷ್ಣಲಾಲ್ ಹಗರಣದ ನಂಬರ್ ಒನ್ ಆರೋಪಿಯಾಗಿದ್ದಾನೆ. ಇನ್ನು ಲಾಲ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಲೋಕಾಯುಕ್ತ ನ್ಯಾಯಾಲಯ ವಜಾ ಮಾಡಿತ್ತು. ಜಾಮೀನು ಅರ್ಜಿ ವಜಾ ಆದ ಬೆನ್ನಲ್ಲೇ ಕೃಷ್ಣ ಲಾಲ್ ತಲೆ ಮರೆಸಿಕೊಂಡಿದ್ದ.

ಕೃಷ್ಣಲಾಲ್ ತಾವು ಕೌಡೇನಹಳ್ಳಿ ಗ್ರಾಮದ ಸರ್ವೆ ನಂಬ್ರ 9ರ ಮಾಲೀಕರ ಗುರುತನ್ನು ಮರೆ ಮಾಚಿದ್ದಾನೆ. ಅಲ್ಲದೆ ಸರ್ವೆ ನಂಬ್ರ 10 ರಲ್ಲಿನ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಬಳಸಿ, ಸೈಟ್‌ಗೆ ಲಭ್ಯವಿರುವ ಟಿಡಿಆರ್.ಮೊತ್ತವನ್ನು ಹೆಚ್ಚಿಸಿದ್ದಾನೆ.  ಅದನ್ನು  ಖಾಸಗಿ ವ್ಯಕ್ತಿಗಳಿಗೆ ವಿತರಿಸಿದ್ದಾನ್ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಒಟ್ಟು 47 ಟಿಡಿಆರ್ ದಾಖಲೆಗಳನ್ನು ಅಡಗಿಸಿಟ್ಟಿರುವ ಆರೋಪ ಕೃಷ್ಣಲಾಲ್ ಮೇಲಿದ್ದು ಅದನ್ನು ಬಳಸಿಕೊಂಡು ಕೋಟಿ ಮೌಲ್ಯದ ಟಿಡಿಆರ್ ಅನ್ನು ರಿಯಲ್ ಎಸ್ಟೇಟ್ ಸಂಸ್ಥೆಗೆ ಮಾರಾಟ ಮಾಡಲಾಗಿದೆ. ಹಗರಣದಿಂದ ಎಷ್ಟು ನಷ್ಟವಾಗಿದೆ ಎಂದು ನಿರ್ಣಯಿಸಲು ಎಸಿಬಿ ಈ ದಾಖಲೆಗಳನ್ನು ಹುಡುಕುವ ಪ್ರಯತ್ನಗಳನ್ನು ಮಾಡುತ್ತಿದೆ. ಕಾಣೆಯಾದ ಫೈಲ್‌ಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದ್ದು ತನಿಖೆ ಪ್ರಗತಿಯಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com