ಶಿರಸಿಯ ಉಗ್ರೆಮನೆ ಕಾಡಿನಲ್ಲಿ ಆನೆ ಹಿಂಡು 

ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಪೂರ್ವ ಭಾಗದ ಬನವಾಸಿ, ದಾಸನಕೊಪ್ಪ ಭಾಗದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಆನೆಗಳ ಹಿಂಡು ಉಂಚಳ್ಳಿಯಿಂದ ಪೇಟೆ ಸಮೀದ ಕುಳವೆ ಪಕ್ಕದ ಉಗ್ರೇಮನೆ ಕಾಡಿನಲ್ಲಿ ವಾಸ್ತವ್ಯ ಹೂಡಿವೆ.
ಶಿರಸಿಯಲ್ಲಿ ಆನೆಗಳ ಹಿಂಡು
ಶಿರಸಿಯಲ್ಲಿ ಆನೆಗಳ ಹಿಂಡು

ಶಿರಸಿ: ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಪೂರ್ವ ಭಾಗದ ಬನವಾಸಿ, ದಾಸನಕೊಪ್ಪ ಭಾಗದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಆನೆಗಳ ಹಿಂಡು ಉಂಚಳ್ಳಿಯಿಂದ ಪೇಟೆ ಸಮೀದ ಕುಳವೆ ಪಕ್ಕದ ಉಗ್ರೇಮನೆ ಕಾಡಿನಲ್ಲಿ ವಾಸ್ತವ್ಯ ಹೂಡಿವೆ.

ಕಳೆದ ಒಂದು ವಾರದಿಂದ ಬನವಾಸಿ ವಲಯಾರಣ್ಯದಲ್ಲಿ ಬೀಡು ಬಿಟ್ಟಿದ್ದ ಮೂರು ದೊಡ್ಡ ಹಾಗೂ ಒಂದು ಮರಿ ಆನೆ ಕಳೆದ ಎರಡು ದಿನಗಳಿಂದ ಶಿರಸಿ ವಲಯಾರಣ್ಯಕ್ಕೆ ಬಂದಿವೆ. ಬಿದ್ರಳ್ಳಿ ಹೊಳೆ ದಾಟಿ ಉಂಚಳ್ಳಿ ಗದ್ದೆಯನ್ನೂ ತುಳಿದಿದ್ದು, ಮಂಗಳವಾರ ಕುಳವೆ ಹಾಗೂ ಉಗ್ರೆಮನೆ ಕಾಡಿನಲ್ಲಿ ಕಾಣಿಸಿಕೊಂಡಿದೆ.

ಶಿರಸಿ ವಲಯಾರಣ್ಯಾಧಿಕಾರಿ ಅಮಿತ್‌ಕುಮಾರ ಚಹ್ಹಾಣ ನೇತೃತ್ವದಲ್ಲಿ ಆನೆಯನ್ನು ಹಳ್ಳಿ ಅಂಚಿನಿಂದ ಕಾಡಿನ ಒಳಕ್ಕೆ ಪಟಾಕಿ ಹೊಡೆದು ಕಳಿಸಲಾಗಿದ್ದು, ಸುತ್ತ ಮುತ್ತಲಿನ ಗ್ರಾಮಸ್ಥರಲ್ಲೂ ಎಚ್ಚರಿಕೆಯಿಂದ ಇರಲು ಜಾಗೃತಿ ಮೂಡಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ರೈತರಿಗೆ, ಆನೆಗೆ ಕೂಡ ತೊಂದರೆ ಆಗದಂತೆ ಮುಂಜಾಗೃತೆ ವಹಿಸಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com