ಬೆಂಗಳೂರು: ರನ್‌ ವೇ ಬಿಟ್ಟು ಲ್ಯಾಂಡ್ ಆದ ಗೋ ಏರ್‌ ವಿಮಾನ, ತಪ್ಪಿದ ಭಾರಿ ಅನಾಹುತ

80 ಪ್ರಯಾಣಿಕರನ್ನು ಹೊತ್ತಿತ್ತ ಗೋ ಏರ್‌ ವಿಮಾನವೊಂದು ರನ್ ವೇ ಬಿಟ್ಟು ಲ್ಯಾಂಡ್ ಆದ ಘಟನೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ಭಾರಿ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ.

Published: 14th November 2019 07:49 PM  |   Last Updated: 14th November 2019 07:49 PM   |  A+A-


go-air1

ಸಾಂದರ್ಭಿಕ ಚಿತ್ರ

Posted By : Lingaraj Badiger
Source : The New Indian Express

ಬೆಂಗಳೂರು: 180 ಪ್ರಯಾಣಿಕರನ್ನು ಹೊತ್ತಿತ್ತ ಗೋ ಏರ್‌ ವಿಮಾನವೊಂದು ರನ್ ವೇ ಬಿಟ್ಟು ಲ್ಯಾಂಡ್ ಆದ ಘಟನೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ಭಾರಿ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ.

ಕಳೆದ ನವೆಂಬರ್‌ 11 ರಂದು ಈ ಅವಘಡ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಾಗ್ಪುರದಿಂದ ಹೊರಟ ಗೋ ಏರ್ ವಿಮಾನ  ಲ್ಯಾಂಡಿಂಗ್ ವೇಳೆ ರನ್ ಬಿಟ್ಟು ಹಸಿರು ನೆಲದ ಮೇಲೆ ಲ್ಯಾಂಡ್ ಆಗಿದ್ದು, ಬಳಿಕ ರನ್ ವೇ ಗೆ ಬಂದಿದೆ.

ಮಹಾರಾಷ್ಟ್ರದ ನಾಗ್ಪುರದಿಂದ ಹೊರಟ ಗೋ ಏರ್ ವಿಮಾನ ಎ-320 ಸೋಮವಾರ ಬೆಳಗ್ಗೆ 7.30ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ ವೇ ಬಿಟ್ಟು ಲ್ಯಾಂಡಿಂಗ್ ಆಗಿದೆ. ಕೂಡಲೇ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು.

ಗೋ ಏರ್‌ ವಿಮಾನಕ್ಕೆ ಸ್ವಲ್ಪ ಪ್ರಮಾಣದ ಹಾನಿಯಾಗಿದ್ದು, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp