ಪುತ್ತೂರಿನಲ್ಲಿ ಜೋಡಿ ಕೊಲೆ, ಅಜ್ಜ, ಮೊಮ್ಮಗಳ ಸಾವು: ಮಹಿಳೆಗೆ ಗಂಭೀರ ಗಾಯ
ಪುತ್ತೂರು ತಾಲೂಕಿನ ಮೊಟ್ಟೆತ್ತಡ್ಕ ಬಳಿಯ ಕುರಿಯದ ಹೊಸಮಾರು ಎಂಬಲ್ಲಿ ಜೋಡಿ ಕೊಲೆ ನಡೆದಿದೆ. ಕುರಿಯ ನಿವಾಸಿ ಕೊಗ್ಗು ಸಾಹೇಬ್ (65) ಮತ್ತು ಅವರ ಮೊಮ್ಮಗಳು 9ನೇ ತರಗತಿ ವಿದ್ಯಾರ್ಥಿನಿ ಸಮೀಹಾ ಬಾನು ಕೊಲೆಯಾದವರು
Published: 19th November 2019 12:33 PM | Last Updated: 19th November 2019 12:33 PM | A+A A-

ಸಾಂದರ್ಭಿಕ ಚಿತ್ರ
ಮಂಗಳೂರು: ಪುತ್ತೂರು ತಾಲೂಕಿನ ಮೊಟ್ಟೆತ್ತಡ್ಕ ಬಳಿಯ ಕುರಿಯದ ಹೊಸಮಾರು ಎಂಬಲ್ಲಿ ಜೋಡಿ ಕೊಲೆ ನಡೆದಿದೆ.
ಕುರಿಯ ನಿವಾಸಿ ಕೊಗ್ಗು ಸಾಹೇಬ್ (65) ಮತ್ತು ಅವರ ಮೊಮ್ಮಗಳು 9ನೇ ತರಗತಿ ವಿದ್ಯಾರ್ಥಿನಿ ಸಮೀಹಾ ಬಾನು ಕೊಲೆಯಾದವರು. ಕೊಗ್ಗು ಸಾಹೇಬ್ ಅವರ ಪತ್ನಿ ಖದೀಜಾಬಿ ಬಿ. ಎಂಬವರು ಗಂಭೀರ ಗಾಯಗೊಂಡಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂವರು ಒಂದೆ ಮನೆಯಲ್ಲಿ ವಾಸವಿದ್ದರು,ಕುಗ್ಗು ಸಾಹೇಬ್ ಅವರ ಪತ್ನಿ ಖತೀಜಮ್ಮ ( 55 ) ಅವರ ಮೇಲೂ ಮಾರಣಾಂತಿಕ ಹಲ್ಲೆಯಾಗಿದ್ದು, ಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಯಲ್ಲಿ ಅಜ್ಜ, ಅಜ್ಜಿ ಮತ್ತು ಮೊಮ್ಮಗಳು ಮೂವರೇ ವಾಸವಾಗಿದ್ದು, ಗಂಡುಮಕ್ಕಳು ಹೊರದೇಶದಲ್ಲಿದ್ಧಾರೆ. ರಾತ್ರಿ ಮಲಗಿದ್ದ ಸಮಯದಲ್ಲಿ ಈ ಕೃತ್ಯ ನಡೆಸಿದ್ದಾರೆ. ಈ ಸಂಬಂಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.