4,500 ಲಂಚಕ್ಕೆ ಆಸೆಪಟ್ಟು ಕೆಲಸ ಕಳಕೊಂಡ ಪಿಡಿಒ!

ಕೋಲಾರದ;ಲ್ಲಿ ನೀರಿನ ಟ್ಯಾಂಕ್ ಹೂಳೆತ್ತುವ ಕಾರ್ಯಕ್ಕಾಗಿ ಹಣವನ್ನು ಬಿಡುಗಡೆ ಮಾಡಲು ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಒಬ್ಬ 4,500 ರೂ. ಲಂಚ ಸ್ವೀಕರಿಸಿದ ಕಾರಣ ತಮ್ಮ ಕೆಲಸ ಕಳೆದುಕೊಳ್ಲಬೇಕಾಗಿ ಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೋಲಾರದ;ಲ್ಲಿ ನೀರಿನ ಟ್ಯಾಂಕ್ ಹೂಳೆತ್ತುವ ಕಾರ್ಯಕ್ಕಾಗಿ  ಹಣವನ್ನು ಬಿಡುಗಡೆ ಮಾಡಲು ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಒಬ್ಬ 4,500 ರೂ. ಲಂಚ ಸ್ವೀಕರಿಸಿದ ಕಾರಣ ತಮ್ಮ ಕೆಲಸ ಕಳೆದುಕೊಳ್ಲಬೇಕಾಗಿ ಬಂದಿದೆ. ಉಪ ಲೋಕಾಯುಕ್ತರ ಶಿಫಾರಸನ್ನು ಪರಿಗಣಿಸಿ ರಾಜ್ಯ ಸರ್ಕಾರವು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ನೆಲವಂಕಿ ಗ್ರಾಮ ಪಂಚಾಯಿತಿಯ ಪಿಡಿಒ ಎಸ್ ಭೈರೆಡ್ಡಿಯನ್ನು ಸೇವೆಯಿಂದ ತೆಗೆದುಹಾಕಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತರಾಜ್ ಇಲಾಖೆ ಜಾರಿಗೊಳಿಸಿದ ಆದೇಶದ ಪ್ರಕಾರ, ಶ್ರೀನಿವಾಸಪುರ ತಾಲ್ಲೂಕಿನ ಮನ್ಹಿನೆಲ್ಲಕೋಟೆ ನಿವಾಸಿ  ಎಂ.ಶಿವಣ್ಣ ಅವರಿಂದ ಭೈರೆಡ್ಡಿ ಡಿಸೆಂಬರ್ 29, 2011 ರಂದು 4,500 ರೂ.ಗಳ ಲಂಚವನ್ನು ಸ್ವೀಕರಿಸಿದ್ದಾರೆ. ಇದು ಯೋಜನೆ ಮಂಜೂರು ಮಾಡಲು ಹಾಗೂ ಹಣದ ಚೆಕ್ ನಿಡಲು ಪಡೆದ ಲಂಚವಾಗಿತ್ತು. ಎಂನರೇಗಾ ಯೋಜನೆಯಡಿ ನೆಲವಂಕಿ ಗ್ರಾಮ ಪಂಚಾಯಿತಿ.ವ್ಯಾಪ್ತಿಯ ನಾಗಲಕುಂಟೆ ತೊಟ್ಟಿಯಿಂದ ಹೂಳು ತೆಗೆಯುವ ಕೆಲಸಕ್ಕೆ ಸಂಬಂಧ ಈ ಲಂಚ ಸ್ವೀಕಾರವಾಗಿದೆ.

ವಿಚಾರಣಾ ಅಧಿಕಾರಿ ಆರೋಪಿಭೈರೆಡ್ಡಿ ವಿರುದ್ಧ ದೋಷಾರೋಪಣೆ ವರದಿಯನ್ನು ಉಪ ಲೋಕಾಯುಕ್ತರಿಗೆ ಸಲ್ಲಿಸಿದ್ದಾರೆ. ಅದರಂತೆ ಭೈರೆಡ್ಡಿಯನ್ನು ಸೇವೆಯಿಂದ ವಜಾಗೊಳಿಸುವಂತೆ ಉಪ ಲೋಕಾಯುಕ್ತ ಸರ್ಕಾರಕ್ಕೆ ಶಿಫಾರಸು ಮಾಡಿದರು. ನವೆಂಬರ್ 23, 2017 ರಂದು, ಕೋಲಾರದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಲಂಚ ಸ್ವೀಕರಿಸಿದ್ದಕ್ಕಾಗಿ ಭರೆಡ್ಡಿ ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣದಲ್ಲಿ ಖುಲಾಸೆಗೊಳಿಸಿದ್ದರು.ಭೈರೆಡ್ಡಿ ಅವರನ್ನು ಇಲಾಖಾ ವಿಚಾರಣೆಯಲ್ಲಿಯೂ ‘ಖುಲಾಸೆಗೊಳಿಸಲು’ ಸರ್ಕಾರವನ್ನು ಕೇಳಿದರು. ಆದಾಗ್ಯೂ ಭಿಅರೆಡ್ಡಿ ಅವರ ಮನವಿಯನ್ನು ಸರ್ಕಾರ ತಿರಸ್ಕರಿಸಿತು, ಏಕೆಂದರೆ ವಿಚಾರಣಾಧಿಕಾರಿಯು ಅವರ ವಿರುದ್ಧ ಕ್ರಮವನ್ನು ಶಿಫಾರಸು ಮಾಡಲು ಸರಿಯಾದ ಕಾರಣಗಳನ್ನು ನೀಡಿದ್ದರು.ವಿಚಾರಣೆಯ ಸಮಯದಲ್ಲಿ, ದೂರುದಾರನು ಪ್ರತಿಕೂಲವಾಗಿದ್ದನು ಆದರೆ ಲೋಕಾಯುಕ್ತ ಪೊಲೀಸರು ದಾಖಲಿಸಿದ ಪ್ರಕರಣವು ಸುಳ್ಳು ಎಂದು ಸಾಬೀತುಪಡಿಸಲು ಅವರಿಂದ ಸಾಧ್ಯವಾಗಿರಲಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com