ಮೈಸೂರು ದಸರಾ: ಪಂಜಿನ ಕವಾಯತು,ಪ್ರೇಕ್ಷಕರ ಮೈನವಿರೇಳಿಸಿದ ಸಾಹಸ ಪ್ರದರ್ಶನಗಳು  

ವಿಶ್ವ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಕೊನೆಯ ಕಾರ್ಯಕ್ರಮವಾದ  ಪಂಜಿನ ಕವಾಯತಿಗೆ  ಬನ್ನಿಮಂಟಪದಲ್ಲಿ ರಾಜ್ಯಪಾಲ ವಾಜೂಭಾಯಿ ವಾಲಾ ಚಾಲನೆ ನೀಡಿದರು. 

Published: 08th October 2019 08:49 PM  |   Last Updated: 08th October 2019 09:06 PM   |  A+A-


Bikestaunt

ಬೈಕ್ ಸಾಹಸ ಪ್ರದರ್ಶನ

Posted By : Nagaraja AB
Source : Online Desk

ಮೈಸೂರು: ವಿಶ್ವ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಕೊನೆಯ ಕಾರ್ಯಕ್ರಮವಾದ  ಪಂಜಿನ ಕವಾಯತಿಗೆ  ಬನ್ನಿಮಂಟಪದಲ್ಲಿ ರಾಜ್ಯಪಾಲ ವಾಜೂಭಾಯಿ ವಾಲಾ ಚಾಲನೆ ನೀಡಿದರು. 

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಸಚಿವರಾದ ಸಿ. ಟಿ. ರವಿ. ವಿ. ಸೋಮಣ್ಣ, ಶಾಸಕ ತನ್ವೀರ್ ಸೇಠ್ ಮತ್ತಿತರರು ಪಾಲ್ಗೊಂಡಿದ್ದರು. 

ಡೇರ್ ಡೆವಿಲ್ಸ್ ಮಿಲಿಟರಿ ತಂಡದವರು ನೀಡಿದ ಸಾಹಸ ಪ್ರದರ್ಶನ ಹಾಗೂ ದಿಶಾಂತ್ ಕಠಾರಿಯಾ ನೇತೃತ್ವದ 32 ಸದಸ್ಯರ ರಾಯಲ್ ಎನ್ ಫೀಲ್ಡ್ ಬೈಕ್ ಪ್ರದರ್ಶನ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸಿತು. 

ಒಂದೇ ಬೈಕಿನಲ್ಲಿ 10 ಜನರಿಂದ ಕಮಲ, ಕ್ರಿಸ್ ಮಸ್ ಟ್ರೀ ಆಕೃತಿ ನಿರ್ಮಿಸುವ ಮೂಲಕ ಗಮನ ಸೆಳೆದರು.ಬೆಂಕಿಯ ರಿಂಗ್ ನಲ್ಲಿ ನುಗ್ಗುವ ಬೈಕ್ ಸ್ಟಂಟ್ ನಿಬ್ಬೆರಗಾಗಿಸಿತು. ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನಸೊರೆಗೊಳಿಸಿದವು.

ನಗರ ಸಶಸ್ತ್ರ ಪೊಲೀಸ್ ಪಡೆಯ 500 ಕ್ಕೂ ಹೆಚ್ಚು ಮಂದಿ ಪ್ರಸ್ತುತಪಡಿಸಿದ ಆಕರ್ಷಕ ಪಂಜಿನ ಕವಾಯತು ಕಲಾ ಪ್ರದರ್ಶನ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.

Stay up to date on all the latest ರಾಜ್ಯ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp