ಪವಿತ್ರ ಆರ್ಥಿಕತೆಗಾಗಿ ಉಪವಾಸ ನಿರತ ಪ್ರಸನ್ನ-ಸಿದ್ದರಾಮಯ್ಯ, ದೇವೇಗೌಡ ಭೇಟಿ

"ಪವಿತ್ರ ಆರ್ಥಿಕತೆ ಉಳಿವಿಗಾಗಿ ಗ್ರಾಮಸೇವಾ ಸಂಘ ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಬುಧವಾರ ಭೇಟಿ ನೀಡಿದರು.
 

Published: 09th October 2019 03:47 PM  |   Last Updated: 09th October 2019 03:47 PM   |  A+A-


ಪ್ರಸನ್ನ ಅವರೊಡನೆ ಸಿದ್ದರಾಮಯ್ಯ ಭೇಟಿ

Posted By : Raghavendra Adiga
Source : UNI

ಬೆಂಗಳೂರು"ಪವಿತ್ರ ಆರ್ಥಿಕತೆ ಉಳಿವಿಗಾಗಿ ಗ್ರಾಮಸೇವಾ ಸಂಘ ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಬುಧವಾರ ಭೇಟಿ ನೀಡಿದರು.

ಗಾಂಧಿಭವನ ಬಳಿ ನಡೆಯುತ್ತಿರುವ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ರಂಗ ಕರ್ಮಿ ಪ್ರಸನ್ನ ಅವರ ಯೋಗಕ್ಷೇಮ ವಿಚಾರಿಸಿದ ಸಿದ್ದರಾಮಯ್ಯ ಅವರು, ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿದರು.‌

ಪ್ರಸನ್ನ ಅವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮಂತಹ ಹೋರಾಟಗಾರರ ಅವಶ್ಯಕತೆಯಿದ್ದು, ಗಾಂಧಿಯವರ ನಂತರ ಹೋರಾಟಗಾರರೇ ಇಲ್ಲ ಎಂದರು.

ಪವಿತ್ರ ಆರ್ಥಿಕತೆಯ ಉಳಿವಿಗಾಗಿ ಇಂತಹ ಹೋರಾಟ  ಅನಿವಾರ್ಯ. ನೀವು ಇನ್ನೂ ಹೆಚ್ಚು ದಿನಗಳ ಕಾಲ ಆರೋಗ್ಯವಾಗಿರಬೇಕು. ಹೋರಾಟಕ್ಕೆ ದೇಹದಲ್ಲಿ ಸಕ್ಕರೆ ಅಂಶವೂ ಸಮತೋಲನದಲ್ಲಿರಬೇಕು‌‌. ಮುಂದಿನ ಹೋರಾಟಕ್ಕೆ ನೀವು ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟು, ವೈದ್ಯರ ಸಲಹೆಯಂತೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಅಧಿವೇಶನಕ್ಕೆ ಮಾಧ್ಯಮಗಳಿಗೆ ನಿರ್ಬಂಧ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈ ಬಾರಿ ಅದೇಕೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿದ್ದಾರೆಯೋ ಗೊತ್ತಿಲ್ಲ. ನಾವು ಎಂದೂ ಈ ರೀತಿ ಮಾಡಿರಲಿಲ್ಲ ಎಂದರು.

 

 

ಅಧಿವೇಶನದಲ್ಲಿ ಎಲ್ಲವೂ ಪಾರದರ್ಶಕವಾಗಿರಬೇಕು. ಜನರಿಗೆ ಉಭಯ ಸದನಗಳಲ್ಲಿ‌ ನಡೆಯುವ ಚರ್ಚೆಗಳು ಪಾರದರ್ಶಕವಾಗಿಯೇ ತಿಳಿದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ. ಬಿಜೆಪಿಯವರಿಗೆ ಏನೋ ಭಯವಿರಬೇಕು. ಹೀಗಾಗಿ ಅವರು ಮಾಧ್ಯಮಗಳಿಗೆ ನಿರ್ಬಂಧ ಹೇರುತ್ತಿದ್ದಾರೆ. ಮಾಧ್ಯಮಗಳನ್ನು ನಿರ್ಬಂಧಿಸುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ದೇವೇಗೌಡ ಸಾಂತ್ವನ

ಉಪವಾಸ ನಿರತ ಪ್ರಸನ್ನ ಅವರನ್ನು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಬುಧವಾರ ಭೇಟಿ ಮಾಡಿದ್ದಾರೆ. ಆ ವೇಳೆ ಪ್ರಸನ್ನ ಅವರ ಆರೋಗ್ಯ ವಿಚಾರಿಸಿದ್ದಾರೆ.

 ಸುದ್ದಿಗಾರರೊಡನೆ ಮಾತನಾಡಿದ  ದೇವೇಗೌಡ ಪ್ರಸನ್ನ ನಾಲ್ಕೈದು ದಿನಗಳಿಂದ ಧರಣಿ ನಡೆಸುತ್ತಿದ್ದು, ಅವರ ಆರೋಗ್ಯ ಕ್ಷೀಣಿಸುತ್ತಿದ್ದರೂ ಸರ್ಕಾರ ಇತ್ತ ಗಮನವೇ ಹರಿಸದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ದುದ್ದೇಶಕ್ಕಾಗಿ ಧರಣಿ ಕೂತಿರುವವರ ಆರೋಗ್ಯವನ್ನೂ ವಿಚಾರಿಸದ ಇಂತಹ ನಿರ್ಲಕ್ಷ್ಯ ಸರ್ಕಾರವನ್ನು ತಾವು ಇದೂವರೆಗೂ ನೋಡಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. 

ಸದನಗಳಿಂದ ಮಾಧ್ಯಮಗಳನ್ನು ದೂರ ಇಟ್ಟ ಸರ್ಕಾರದ ನಿರ್ಧಾರದ ವಿರುದ್ಧ ಗರಂ ಆದ ದೇವೇಗೌಡರು, ಇದು ಬಿಜೆಪಿಯ ಪ್ರಜಾಪ್ರಭುತ್ವ ವಿರುದ್ಧ ಧೋರಣೆ ಎನ್ನಬಹುದೇ ವಿನಃ ಇದಕ್ಕಿಂತ  ಹೆಚ್ಚಿನದಾಗಿ ಏನೂ ತಮ್ಮಿಂದ ಹೇಳಲು ಸಾಧ್ಯವಿಲ್ಲ ಎಂದರು.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp