ಉಪಚುನಾವಣೆ ಹಿನ್ನೆಲೆ: ವಿಜಯದಶಮಿ ನೆಪದಲ್ಲಿ ಮತದಾರರಿಗೆ ಬೈರತಿ ಬಸವರಾಜ್ ಬಾಡೂಟ

ವಿಜಯ ದಶಮಿ ಅಂಗವಾಗಿ ಅನರ್ಹಗೊಂಡ ಶಾಸಕ ಬೈರತಿ ಬಸವರಾಜ್​ ತಮ್ಮ ಕ್ಷೇತ್ರದ ಮತದಾರರಿಗೆ ಬುಧವಾರ ಭರ್ಜರಿ ಬಾಡೂಟ ಆಯೋಜಿಸಿದ್ದರು.
ಭೈರತಿ ಬಸವರಾಜ್
ಭೈರತಿ ಬಸವರಾಜ್

ಬೆಂಗಳೂರು: ವಿಜಯ ದಶಮಿ ಅಂಗವಾಗಿ ಅನರ್ಹಗೊಂಡ ಶಾಸಕ ಬೈರತಿ ಬಸವರಾಜ್​ ತಮ್ಮ ಕ್ಷೇತ್ರದ ಮತದಾರರಿಗೆ ಬುಧವಾರ ಭರ್ಜರಿ ಬಾಡೂಟ ಆಯೋಜಿಸಿದ್ದರು.

ಕಣ್ಣೂರು ಸಮೀಪದ ತಮ್ಮದೇ ಬಡಾವಣೆಯಾದ ಕನಕಶ್ರೀ ಬಡಾವಣೆಯಲ್ಲಿ ಎಕರೆ ಗಟ್ಟಲೆ ಪೆಂಡಾಲ್ ಹಾಕಿಸಿ, ಐವತ್ತು ಸಾವಿರಕ್ಕೂ ಅಧಿಕ ಮಂದಿಗೆ ಮಾಂಸಾಹಾರ ಭಕ್ಷ್ಯಗಳನ್ನು ಸಿದ್ಧಪಡಿಸಿ ಉಣಬಡಿಸಿದ್ದಾರೆ.

ಉಪಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಜನತೆಯನ್ನು ಸೆಳೆಯಲು ಬಾಡೂಟ ಹಾಕಿಸಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. 

ಪಕ್ಷದ ವಿರೋಧಿ ಚಟುವಟಿಕೆಯಲ್ಲಿ ಬೈರತಿ ಬಸವರಾಜ್​ ಕಾಂಗ್ರೆಸ್​ನಿಂದ ಉಚ್ಛಾಟನೆಗೊಂಡಿದ್ದು, ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಯುವ ಸಾಧ್ಯತೆ ಇದ್ದು, ಈಗಿನಿಂದಲೇ ಚುನಾವಣೆ ತಯಾರಿ ಕೈಗೊಂಡಿದ್ದಾರೆ ಎನ್ನಲಾಗಿದೆ

ಡಿಸೆಂಬರ್‌ನಲ್ಲಿ ಉಪಚುನಾವಣೆ ನಿಗದಿಯಾಗಿದೆ, ಇದೇ ಸಂದರ್ಭಗಳಲ್ಲಿ ಕೆಆರ್‌ ಪುರ ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಹಾಗೂ ಮತ್ತು ಮತದಾರರಿಗೆ ಭೋಜನ ವ್ಯವಸ್ಥೆ ಮಾಡಿದ್ದರು.

ಬಾಡೂಟ ಕಾರ್ಯಕ್ರಮದಲ್ಲಿ ಬಿರಿಯಾನಿ, ನಾಟಿಕೋಳಿ ಸಾರು, ಮೀನು ಫ್ರೈ, ಕಬಾಬ್ ಮೊಟ್ಟೆ ಸೇರಿದಂತೆ ಹಲವು ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು. ಇದಕ್ಕಾಗಿ 2ಟನ್ ಮಟನ್, ಮೂರುವರೆ ಟನ್ ಚಿಕನ್, 500 ಕೆಜಿ ಮೀನು ಮತ್ತು 2 ಲಕ್ಷ ಮೊಟ್ಟೆಗಳನ್ನು ಬಳಸಲಾಗಿತ್ತು ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com