ಕರ್ನಾಟಕದ ಹೆಮ್ಮೆ! ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ ಅಂತಿಮ ಸುತ್ತು  ಪ್ರವೇಶಿಸಿದ ಬೀದರ್ ಯುವತಿ

ಈ ಸಾಲಿನ ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ ಸ್ಪರ್ಧೆಯ ಫೈನಲ್ಸ್ ವಿಭಾಗಕ್ಕೆ ಕರ್ನಾಟಕದ ಬೀದರ್ ಮೂಲದ ಯುವತಿ ಆಯ್ಕೆಯಾಗಿದ್ದಾರೆ. ಈ ಮೂಲಕ ರಾಜ್ಯದಿಂದ ಈ ಸ್ಪರ್ಧೆಗೆ ಆಯ್ಕೆಗೊಂಡ ಏಕೈಕ ಯುವತಿ ಎಂಬ ಕೀರ್ತಿಗೆ ಅವರು ಪಾತ್ರವಾಗಿದ್ದಾರೆ.
ನಿಶಾ ತಾಳಂಪಳ್ಳಿ
ನಿಶಾ ತಾಳಂಪಳ್ಳಿ

ಬೀದರ್: ಈ ಸಾಲಿನ ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ ಸ್ಪರ್ಧೆಯ ಫೈನಲ್ಸ್ ವಿಭಾಗಕ್ಕೆ ಕರ್ನಾಟಕದ ಬೀದರ್ ಮೂಲದ ಯುವತಿ ಆಯ್ಕೆಯಾಗಿದ್ದಾರೆ. ಈ ಮೂಲಕ ರಾಜ್ಯದಿಂದ ಈ ಸ್ಪರ್ಧೆಗೆ ಆಯ್ಕೆಗೊಂಡ ಏಕೈಕ ಯುವತಿ ಎಂಬ ಕೀರ್ತಿಗೆ ಅವರು ಪಾತ್ರವಾಗಿದ್ದಾರೆ.

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಗಡಿ ಗ್ರಾಮವಾಗಿರುವ ದುಮ್ಮಸ್ನೂರು  ಮೂಲದ ನಿಶಾ ತಾಳಂಪಳ್ಳಿ ಈ ಪ್ರತಿಷ್ಠಿತ ಸ್ಪರ್ಧೆಗೆ ಆಯ್ಕೆಯಾಗಿರುವ ಕನ್ನಡತಿ.

ಎನ್.ಇ..ಕೆ.ಆರ್.ಟಿ.ಸಿ. ಹುಮನಾಬಾದ್ ಘಟಕದಲ್ಲಿ ಕ್ಯಾಶಿಯರ್ ಆಗಿರುವ ತಂದೆ ಶ್ರೀನಿವಾಸ ತಾಳಂಪಳ್ಳಿ ಹಾಗೂ ತಾಇ ಇಂದುಮತಿಯವರ ಪುತ್ರಿಯಾದ ನಿಶಾ  ಪಿಯುಸಿ ಮುಗಿಸಿ ಹೈದರಾಬಾದ್ ನಲ್ಲಿ ಡಿಪ್ಲೊಮಾ ಇನ್ ಎವಿಎಷನ್  ಮಾಡಿದ್ದಾರೆ. ಅಲ್ಲಿ ಒಂದು ತಿಂಗಳ ತರಬೇತಿ ಪಡೆದು ಮಿಸ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಬಾಲ್ಯದಿಂದ ಮಾಡಲಿಂಗ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ನಿಶಾ ವಿವಿಧ ಸಂಘ ಸಂಸ್ಥೆಗಳು ಆಯೋಜಿಸಿದ್ದ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದಿದ್ದರು. ನವೆಂಬರ್ 18ಕ್ಕೆ ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ ಫೈನಲ್ಸ್ ಸ್ಪರ್ಧೆ ನಡೆಯಲಿದೆ. ಅದರಲ್ಲಿ ಒಟ್ಟಾರೆ 30 ಸ್ಪರ್ಧಿಗಳಿದ್ದು ಅವರಲ್ಲಿ ಒಬ್ಬರು ಮಿಸ್ ಇಂಡಿಯಾ ಆಗಿ ಆಯ್ಕೆಯಾಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com