ಬೆಂಗಳೂರು: ಡಿಸೆಂಬರ್ ನಲ್ಲಿ ಮೂರು ಹೊಸ ಡಿಪೊಗಳ ಸ್ಥಾಪನೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶೀಘ್ರವೇ ಮೂರು ಹೊಸ ಡಿಪೋಗಳು ಸ್ಥಾಪನೆಯಾಗಲಿದ್ದು, ಪ್ರತಿ ಡಿಪೋದಲ್ಲಿ 100 ರಿಂದ 120 ಬಸ್ ಇರುತ್ತವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶೀಘ್ರವೇ ಮೂರು ಹೊಸ ಡಿಪೋಗಳು ಸ್ಥಾಪನೆಯಾಗಲಿದ್ದು, ಪ್ರತಿ ಡಿಪೋದಲ್ಲಿ 100 ರಿಂದ 120 ಬಸ್ ಇರುತ್ತವೆ. 

ಡಿಸೆಂಬರ್ ನಲ್ಲಿ ಉತ್ತನಹಳ್ಳಿ, ನಾಗದಾಸನಹಳ್ಳಿ ಮತ್ತು ಪಿಳ್ಳಗಾನಹಳ್ಳಿ ಯಲ್ಲಿ ಮೂರು ಬಸ್ ಡಿಪೋಗಳು ಸ್ಥಾಪನೆಯಾಗಲಿವೆ, 2013 ರಲ್ಲಿ ಯೋಜಿತ 7 ಬಸ್ ಡಿಪೋಗಳ ಪೈಕಿ ಉಳಿದ ಮೂರು ಮುಂದಿನ ತಿಂಗಳು ಸ್ಥಾಪನೆಯಾಗಲಿವೆ.

ಡಿಪೋ ಸ್ಥಾಪನೆಯಾಗಲು ಅಗತ್ಯವಾಗಿರಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಬಿಎಂಟಿಸಿ ವಕ್ತಾರರು ತಿಳಿಸಿದ್ದಾರೆ.

ಯಲಹಂಕ ಸಮೀಪ ಈಗಾಗಲೇ 5  ಬಸ್ ಡಿಪೋಗಳಿವೆ, ಹೀಗಿರುವಾಗ ಮತ್ತೆ ಏಕೆ ಹೆಚ್ಚಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೊಸ ಡಿಪೋಗಳಲ್ಲಿ ಪ್ರತಿ ದಿನ 100 ರಿಂದ 120 ಬಸ್ ಗಳು ಕೆಲಸ ನಿರ್ವಹಿಸಲಿವೆ, ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಹೆಚ್ಚಿನ ಡಿಪೋ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಬೆಂಗಳೂರು ನಗರದಲ್ಲಿ ಈಗಾಗಲೇ 45 ಬಸ್ ಡಿಪೋಗಳಿವೆ, ಮುಂದಿನ ವರ್ಷ ದೇವನಹಳ್ಳಿಯಲ್ಲಿ ಹೊಸ ಡಿಪೋ ನಿರ್ಮಾಣವಾಗಲಿದೆ, ಅಲ್ಲಿ ಮಹಿಳೆಯರಿಗೆ ವಿಶೇಷ ಲಾಂಜ್ ಸೌಲಭ್ಯ ಇರಲಿದೆ, ಮೂರು ಹೊಸ ಬಸ್ ಡಿಪೋಗಳು ಡಿಸೆಂಬರ್ ನಿಂದ ಕೆಲಸ ಆರಂಭವಾಗಲಿದ್ದು, ಟ್ರಾಫಿಕ್ ಇಲಾಖೆಯಿಂದ ರೂಟ್ ಮ್ಯಾಪ್ ಸಿದ್ದಪಡಿಸಲಿದ್ದಾರೆ ಎಂದು ಬಿಎಂಟಿಸಿ ಮ್ಯಾನೇಜಿಂಗ್ ಡೈರೆಕ್ಟರ್ ಸಿ.ಶಿಖಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com