ವಿಜಯಪುರ: ಏಕಕಾಲದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ!

ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ನಗರದ ಇಂಡಿ ರಸ್ತೆಯಲ್ಲಿರುವ ದಾಲಿಬಾಯಿ ಚಂದಾಲಾಲ್ ಸಂದೇಶ ಎಂಬುವರ ಪತ್ನಿ ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ.

Published: 19th October 2019 02:26 PM  |   Last Updated: 19th October 2019 02:26 PM   |  A+A-


Woman Gave Birth For Four Children

ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾ ತಾಯಿ

Posted By : Shilpa D
Source : UNI

ವಿಜಯಪುರ: ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ನಗರದ ಇಂಡಿ ರಸ್ತೆಯಲ್ಲಿರುವ ದಾಲಿಬಾಯಿ ಚಂದಾಲಾಲ್ ಸಂದೇಶ ಎಂಬುವರ ಪತ್ನಿ ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ. ಮೂಲತಃ ರಾಜಸ್ತಾನದವರಾಗಿರುವ ದಂಪತಿಗೆ 4 ವರ್ಷದ ವಿಶೇಷಚೇತನ ಹೆಣ್ಣು ಮಗುವಿತ್ತು. ಆದರೆ ದಂಪತಿ ಗಂಡು ಮಗುವಿನ ಆಸೆ ಹೊತ್ತಿದ್ದರೂ ಅದು ಸಾಧ್ಯವಾಗಿರಲಿಲ್ಲ.

ಜನಿಸಿದ ನಾಲ್ಕು ಮಕ್ಕಳು ತಲಾ ಒಂದೂವರೆ ಕಿಲೋ ಗ್ರಾಂ ತೂಗುತ್ತಿದ್ದು, ಈ ಪೈಕಿ ಎರಡು ಹೆಣ್ಣು ಹಾಗೂ ಎರಡು ಗಂಡು. ನಾಲ್ಕೂ ಮಕ್ಕಳು ಆರೋಗ್ಯಯುತವಾಗಿದ್ದು ಮುಂಜಾಗರೂಕತಾ ಕ್ರಮವಾಗಿ ಆಸ್ಪತ್ರೆಯ ಎನ್‌ಐಸಿನಲ್ಲಿಡಲಾಗಿದೆ. 

ಏಕಕಾಲದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡುವುದು ಅಪರೂಪ ಪ್ರಕರಣ. 6 ಲಕ್ಷಕ್ಕೊಬ್ಬಳಂತೆ ಮಹಿಳೆಯರಿಗೆ ನಾಲ್ಕು ಮಕ್ಕಳು ಜನಿಸುತ್ತೆ ಎಂದು ಮುದನೂರ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ವೈದ್ಯ ಡಾ. ಆಶಾ ಮುದನೂರ ಹೇಳಿದ್ದಾರೆ.. 
 

Stay up to date on all the latest ರಾಜ್ಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp