ಅಂಚೆ ಕಚೇರಿಯಲ್ಲಿ ಶೂನ್ಯ ಮೊತ್ತದ ಖಾತೆ ತೆರೆದ ಸಿಎಂ ಯಡಿಯೂರಪ್ಪ

ನಿನ್ನೆ ವಿಧಾನಸೌಧಕ್ಕೆ  ಪೋಸ್ಟ್ ಆಫೀಸ್ ಅಧಿಕಾರಿಗಳು ಬಂದಿದ್ದರು. ಇದೇನಪ್ಪಾ ಅಂಚೆ ಇಲಾಖೆ ಅಧಿಕಾರಿಗಳಿಗೆ ಅಲ್ಲೇನು ಕೆಲಸ, ಪೋಸ್ಟ್ ಆಫೀಸ್ ವಿಧಾನಸೌಧಕ್ಕೆ ಶಿಫ್ಟ್ ಆಯ್ತಾ ಅಂದುಕೊಂಡಿರಾ?
ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ

ಬೆಂಗಳೂರು: ನಿನ್ನೆ ವಿಧಾನಸೌಧಕ್ಕೆ  ಪೋಸ್ಟ್ ಆಫೀಸ್ ಅಧಿಕಾರಿಗಳು ಬಂದಿದ್ದರು. ಇದೇನಪ್ಪಾ ಅಂಚೆ ಇಲಾಖೆ ಅಧಿಕಾರಿಗಳಿಗೆ ಅಲ್ಲೇನು ಕೆಲಸ, ಪೋಸ್ಟ್ ಆಫೀಸ್ ವಿಧಾನಸೌಧಕ್ಕೆ ಶಿಫ್ಟ್ ಆಯ್ತಾ ಅಂದುಕೊಂಡಿರಾ?


 ಬೆಂಗಳೂರು ಅಂಚೆ ವೃತ್ತದ ಪ್ರಧಾನ ಅಂಚೆ ವ್ಯವಸ್ಥಾಪಕ ಕರ್ನಲ್ ಅರವಿಂದ್ ವರ್ಮ ಅವರು ಪೋಸ್ಟ್ ಮಾಸ್ಟರ್ ಬಿ ಗೋವಿಂದ್ ಅವರ ಜೊತೆಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಸಚಿವಾಲಯಕ್ಕೆ ಹೋಗಿ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್(ಐಪಿಪಿಬಿ)ನಲ್ಲಿ ಯಡಿಯೂರಪ್ಪನವರ ಖಾತೆ ತೆರೆದರು.


ಬೆಳಗ್ಗೆ 11.30ಕ್ಕೆ ಮುಖ್ಯಮಂತ್ರಿಯವರ ಭೇಟಿಗೆ ನಿಗದಿಪಡಿಸಿದ ಸಮಯದಂತೆ ಅಂಚೆ ಇಲಾಖೆಯ ಅಧಿಕಾರಿ ವಿಧಾನಸೌಧಕ್ಕೆ ಬಂದರು. ಮುಖ್ಯಮಂತ್ರಿಗಳು ಬರುವಾಗ ಮಧ್ಯಾಹ್ನ 12.15 ಆಗಿತ್ತು. ಮುಖ್ಯಮಂತ್ರಿಯವರು ಅವರನ್ನು ಮುಗುಳುನಗೆಯಿಂದ ಸ್ವಾಗತಿಸಿ ಎಲ್ಲವೂ ಸಿದ್ದವಾಗಿದ್ದ ಅರ್ಜಿಗೆ ತಮ್ಮ ಸಹಿ ಹಾಕಿ ಮ್ಯೂಸಿಯಂ ರಸ್ತೆಯಲ್ಲಿರುವ ಅಂಚೆ ಇಲಾಖೆ ಶಾಖೆಯಲ್ಲಿ ಐಪಿಪಿಬಿ ಖಾತೆಯನ್ನು ತೆರೆದರು. 


ಇಲ್ಲಿ ಸಿಎಂ ಅವರು ತೆರೆದಿದ್ದು ಶೂನ್ಯ ಮೊತ್ತದ ಖಾತೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರವಿಶಂಕರ್ ಪ್ರಸಾದ್ ಇತ್ತೀಚೆಗೆ ಎಲ್ಲಾ ಮುಖ್ಯಮಂತ್ರಿಗಳು ಮತ್ತು ಸಂಸದರಿಗೆ ಅಂಚೆ ಕಚೇರಿಯಲ್ಲಿ ಖಾತೆ ತೆರೆಯುವಂತೆ ಆದೇಶ ಹೊರಡಿಸಿದ್ದರು. 15 ದಿನಗಳ ಹಿಂದೆ ಬಂದ ಆದೇಶಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರು ಅಂಚೆ ಇಲಾಖೆ ಅಧಿಕಾರಿಗಳನ್ನು ತಮ್ಮ ಸಚಿವಾಲಯಕ್ಕೆ ಬರಹೇಳಿದ್ದರು. 


ನಿನ್ನೆಯವರೆಗೆ ಕರ್ನಾಟಕದಲ್ಲಿ ಐಪಿಪಿಬಿ ಖಾತೆಯಡಿ 6 ಲಕ್ಷದ 66 ಸಾವಿರದ 811 ಖಾತೆಗಳು ಇವೆ. ಪ್ರತಿ ನಗರದಲ್ಲಿ ನೋಡಲ್ ಕಚೇರಿಯಿದ್ದು ಮ್ಯೂಸಿಯಂ ರಸ್ತೆ ಶಾಖೆ ಬೆಂಗಳೂರಿಗೆ ಕಚೇರಿಯಾಗಿದೆ. ಇಲ್ಲಿ ಖಾತೆ ತೆರೆಯಬೇಕೆಂದರೆ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಹೋಗಿ ಬಯೋಮೆಟ್ರಿಕ್ ಸ್ಕ್ಯಾನಿಂಗ್ ಮಾಡಿಸಿಕೊಳ್ಳಬೇಕು.ಆಧಾರ್ ಸಂಖ್ಯೆ ಹೊಂದಿರಬೇಕು. ಈ ಯೋಜನೆ ಆರಂಭವಾಗಿದ್ದು ಕಳೆದ ವರ್ಷ ಸೆಪ್ಟೆಂಬರ್ 1ರಂದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com