ಡಿಕೆ ಶಿವಕುಮಾರ್ ಬಿಡುಗಡೆಗಾಗಿ ದೆಹಲಿ ರಸ್ತೆಯಲ್ಲಿ ಸಂಸದ ಸುರೇಶ್ ಓಡಿದ್ದೇಕೆ?

ಇದು ತ್ರೇತಾಯುಗದ ರಾಮ-ಲಕ್ಷ್ಮಣರ ಕಥೆಯಲ್ಲ, ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ ಶಿವಕುಮಾರ್ ಮತ್ತ ಅವರ ಸಹೋದರ ಸುರೇಶ್ ನಡುವಿನ ಪ್ರೀತಿ- ಒಡನಾಟದ ನೈಜಕಥೆ.
ಡಿಕೆ ಸಹೋದರರು
ಡಿಕೆ ಸಹೋದರರು

ಬೆಂಗಳೂರು: ಇದು ತ್ರೇತಾಯುಗದ ರಾಮ-ಲಕ್ಷ್ಮಣರ ಕಥೆಯಲ್ಲ, ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ ಶಿವಕುಮಾರ್ ಮತ್ತ ಅವರ ಸಹೋದರ ಸುರೇಶ್ ನಡುವಿನ ಪ್ರೀತಿ- ಒಡನಾಟದ ನೈಜಕಥೆ.

ಅಕ್ರಮ ಹಣ ವರ್ಗಾವಣೆಯಲ್ಲಿ ಕಳೆದ ಎರಡು ತಿಂಗಳಿಂದ ಜೈಲುವಾಸ ಅನುಭವಿಸುತ್ತಿದ್ದ ಕನಕಪುರ ಶಾಸಕ ಡಿ,ಕೆ ಶಿವಕುಮಾರ್ ಜೈಲು ಸೇರಿದ ದಿನದಿಂದಲೂ ಅವರ ಸಹೋದರ  ಹಾಗೂ ಸಂಸದ ಡಿ.ಕೆ ಸುರೇಶ್ ಅಕ್ಷರಶಃ ತತ್ತರಿಸಿಹೋಗಿದ್ದರು,

ಏಕೆಂದರೆ ತಮಗೆ ಎಲ್ಲಾ ರೀತಿಯಿಂದಲೂ ಆಧಾರಸ್ತಂಭದಂತಿದ್ದ ಅಣ್ಣ ಶಿವಕುಮಾರ್ ಜೈಲು ಸೇರಿದ್ದು ಸುರೇಶ್ ಆಘಾತ ತಂದಿತ್ತು, ಬುಧವಾರ ಸುರೇಶ್ ಅಣ್ಣನನ್ನು ಜೈಲಿನಿಂದ ಬಿಡುಗಡೆಗೊಳಿಸಲು ಹರ ಸಾಹಸ ಪಟ್ಟಿದ್ದರು. ರೋಸ್ ಅವೆನ್ಯೂ ಕೋರ್ಟ್ ಗೆ ಓಡೋಡಿ ಬಂದಿದ್ದರು.

ದೆಹಲಿ ಹೈಕೋರ್ಟ್ ಶಿವಕುಮಾರ್ ಅವರಿಗೆ ಜಾಮೀನು ಪ್ರಕಟಿಸುತ್ತಿದ್ದಂತೆ, ಆದೇಶದ ಕಾಪಿ ತೆಗೆದುಕೊಂಡು ದೆಹಲಿ ಹೈಕೋರ್ಟ್ ಆವರಣದಿಂದ ಜಾರಿ ನಿರ್ದೇಶಾಲಯ ಇರುವ ರೋಸ್ ಅವೆನ್ಯೂ ಕೋರ್ಟ್ ಕಾಂಪ್ಲೆಕ್ಸ್ ಗೆ ಕಾಲು ನಡಿಗೆಯಲ್ಲಿ ಓಡೋಡಿ ಬಂದಿದ್ದಾರೆ.

ಸುರೇಶ್ ರೋಸ್ ಅವೆನ್ಯೂ ಕೋರ್ಟ್ ಬಳಿ ಧಾವಿಸಿದಾಗ ಸಂಚಾರ ದಟ್ಟಣೆ ಅಧಿಕವಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ನಿಧಾನಗತಿಯಲ್ಲಿ ವಾಹನಗಳು ಸಾಗುತ್ತಿದ್ದವು, ನಿಧಾನವಾದರೇ ಅಣ್ಣ ಶಿವಕುಮಾರ್ ಇಂದು ಜೈಲಿನಿಂದ ಬಿಡುಗಡೆಯಾಗುವುದು ಸಾಧ್ಯವಿಲ್ಲ ಎಂದು ಅರಿತ ಸುರೇಶ್ ಟ್ರಾಫಿಕ್ ಸದ್ಯದಲ್ಲಿ ಮುಕ್ತವಾಗುವುದಿಲ್ಲ ಎಂದು ಕಾರಿನಿಂದ ಇಳಿದು ರಸ್ತೆಯಲ್ಲೇ ರೋಸ್ ಅವೆನ್ಯೂ ಕೋರ್ಟ್ ಕಾಂಪ್ಲೆಕ್ಸ್ ಗೆ ಓಡೋಡಿ ಬಂದಿದ್ದಾರೆ.

53 ವರ್ಷದ ಸುರೇಶ್ ಗಂಟೆಗಟ್ಟಲೇ ವ್ಯಾಯಾಮ ಮಾಡುತ್ತಾರೆ,  ಹೀಗಾಗಿ ಅವರು ದೆಹಲಿಯಲ್ಲಿ ಕೋರ್ಟ್ ನತ್ತ ಓಡಲು ಸಾಧ್ಯವಾಯಿತು. ಹೈಕೋರ್ಟ್ ನಲ್ಲಿ ಪಡೆದ ಜಾಮೀನು ಆದೇಶದ ಪತ್ರವನ್ನು ಜೈಲಿಗೆ ಓಡೋಡಿ ಬಂದು ಕೊಟ್ಟು ಅಣ್ಣ ಶಿವಕುಮಾರ್ ಅವರನ್ನು ಬಂಧಮುಕ್ತಗೊಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com