ಬೆಂಗಳೂರಿನಲ್ಲಿ ಇಪಿಎಫ್ಒ 'ವಿಜಿಲೆನ್ಸ್ ಅವೇರ್ನೆಸ್ ವೀಕ್-2019'

ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ), ಬೆಂಗಳೂರು (ಮಲ್ಲೇಶ್ವರಂ), ಇವರು ದಿನಾಂಕ 28.10.209 ರಿಂದ 02.11.2019 ರವರಗೆ ವಿಜಿಲೆನ್ಸ್ ಅವೇರ್ನೆಸ್ ವೀಕ್ - 2019 ಏರ್ಪಡಿಸಿದೆ.

Published: 28th October 2019 04:32 PM  |   Last Updated: 28th October 2019 04:32 PM   |  A+A-


EPFO

ಇಪಿಎಫ್ಒ

Posted By : Prasad SN
Source : Online Desk

ಬೆಂಗಳೂರು: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ), ಬೆಂಗಳೂರು (ಮಲ್ಲೇಶ್ವರಂ), ಇವರು ದಿನಾಂಕ 28.10.209 ರಿಂದ 02.11.2019 ರವರಗೆ ವಿಜಿಲೆನ್ಸ್ ಅವೇರ್ನೆಸ್ ವೀಕ್ - 2019 ಏರ್ಪಡಿಸಿದೆ. ಈ ವರ್ಷದ ವಿಷಯ 'ಸಮಗ್ರತೆ - ಒಂದು ಜೀವನ ವಿಧಾನ'.

ನೌಕರರ ಭವಿಷ್ಯ ನಿಧಿ ಸಂಸ್ಥೆ, ಸೇವೆ ನೀಡುವ ಪ್ರಕ್ರಿಯೆಯಲ್ಲಿ ನ್ಯಾಯಸಮ್ಮತತೆ, ಪ್ರಾಮಾಣಿಕತೆ ಮತ್ತು ಸಮಗ್ರತೆಯ ಮೂಲಕ ಎಲ್ಲಾ ಸಂಬಂಧಪಟ್ಟವರ ವಿಶ್ವಾಸ ಗಳಿಸುವ ರೀತಿಯಲ್ಲಿ ಸೇವೆಗಳನ್ನು ತಲುಪಿಸುವ ಉದ್ದೇಶವನ್ನು ಅನುಸರಿಸುತ್ತಿದೆ.

ಬದ್ಧತೆಯನ್ನು ದೃಢೀಕರಿಸುವ ಸಲುವಾಗಿ, ಇಪಿಎಫ್ ಸೌಲಭ್ಯಗಳ ವಿಸ್ತರಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ದೂರುಗಳನ್ನು ಮತ್ತು ಕಚೇರಿಯ ಕಾರ್ಯನಿರ್ವಹಣೆಯ ವಿರುದ್ಧ ಯಾವುದೇ ಸ್ವಭಾವದ ಆರೋಪಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ, ಇಪಿಎಫ್‌ಒ ಪ್ರಾದೇಶಿಕ ಕಚೇರಿ, ಬೆಂಗಳೂರು (ಮಲ್ಲೇಶ್ವರಂ) ನಲ್ಲಿ ವಿಜಿಲೆನ್ಸ್ ಸೆಲ್ ಅನ್ನು ಸ್ಥಾಪಿಸಿದೆ.

ಸಾರ್ವಜನಿಕರು ತಮ್ಮ ದೂರುಗಳನ್ನು ನೇರವಾಗಿ ಕುಮಾರಿ.ಸಿ.ಅಮುದಾ, ಆರ್‌ಪಿಎಫ್‌ಸಿ-1, ಭವಿಷ್ಯ ನಿಧಿ ಭವನ, ನಂ.13, ರಾಜಾ ರಾಮ್ ಮೋಹನ್ ರಾಯ್ ರಸ್ತೆ, ಬೆಂಗಳೂರು - 560 025, ಗೆ ಸಲ್ಲಿಸಬಹುದು.

Stay up to date on all the latest ರಾಜ್ಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp