ಅಸ್ಥಿರತೆ ಹೊಸ್ತಿಲಲ್ಲೆ ಯಡಿಯೂರಪ್ಪ ಸರ್ಕಾರಕ್ಕೆ ನೂರು ದಿನ!

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನವೆಂಬರ್ 2 ಕ್ಕೆ 100 ದಿನ ಪೂರೈಸಲಿದೆ. ಸರ್ಕಾರದ ಆಯುಷ್ಯದ ಬಗ್ಗೆ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ಶತ ದಿನೋತ್ಸವಕ್ಕೆ ಯಡಿಯೂರಪ್ಪ ಮತ್ತು ತಂಡ ಸಿದ್ಧಗೊಳ್ಳುತ್ತಿದೆ.
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನವೆಂಬರ್ 2 ಕ್ಕೆ 100 ದಿನ ಪೂರೈಸಲಿದೆ. ಸರ್ಕಾರದ ಆಯುಷ್ಯದ ಬಗ್ಗೆ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ಶತ ದಿನೋತ್ಸವಕ್ಕೆ ಯಡಿಯೂರಪ್ಪ ಮತ್ತು ತಂಡ ಸಿದ್ಧಗೊಳ್ಳುತ್ತಿದೆ.

ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಪ್ರಮುಖ ಪ್ರಶ್ನೆಗೆ ಉತ್ತರವನ್ನೇ ನೀಡಲಿಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದರಲ್ಲಾ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಲೇ ಇಲ್ಲ, ಸರ್ಕಾರ ಐದು ವರ್ಷ ಪೂರೈಸುತ್ತದೋ ಬಿಡುತ್ತದೋ ಎಂಬ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ ಎಂದು ಹೇಳಿದ್ದಾರೆ.

ಇನ್ನು ಕುಮಾರಸ್ವಾಮಿ ಹೇಳಿಕೆಗೆ ಜಗದೀಶ್ ಶೆಟ್ಟರ್ ಅವರನ್ನು ಬಿಟ್ಟರೇ ಬೇರೆ ಯಾವುದೇ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿಲ್ಲ, ಅವರ ಮನಸ್ಸಿನಲ್ಲಿ ಏನಿದೆ ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ,

ಬಿಜೆಪಿ ಸರ್ಕಾರಕ್ಕೆ ಬೆದರಿಕೆ ಇರುವುದು ನಿಜ, ಆದರೆ ಅದು ಡಿಸೆಂಬರ್ 5 ರಂದು ನಡೆಯುವ ಉಪ ಚುನಾವಣೆ ನಂತರ, ಸರ್ಕಾರ ಉಳಿಸಿಕೊಳ್ಳಲು ಅಗತ್ಯವಾದ ಸಂಖ್ಯೆ ಶಾಸಕರನ್ನು ಗೆಲ್ಲಿಸಿಕೊಳ್ಳಲಾಗದಿದ್ದರೇ ಆಗ ಜೆಡಿಎಸ್ ಬೆಂಬಲ ಬೇಕಾಗುತ್ತದೆ. ಕೆಲ ವಾರಗಳ ಹಿಂದೆ ಸದ್ದು ಮಾಡಿದ್ದ ಫೋನ್ ಟ್ಯಾಪಿಂಗ್ ಕೇಸ್ ಈಗ ಕಡಿಮೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com